ಸಾರಿಗೆ ಬಸ್ ಡಿಕ್ಕಿ: ತಾಯಿ ಸಾವು, ಮಗಳಿಗೆ ಗಾಯ

| Published : Nov 02 2023, 01:00 AM IST

ಸಾರಾಂಶ

ದಾಬಸ್‌ಪೇಟೆ: ಚಲಿಸುತ್ತಿದ್ದ ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಹೊಡೆದು ಸ್ಥಳದಲ್ಲೇ ತಾಯಿ ಸಾವನ್ನಪ್ಪಿದ್ದು ಮಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ದಾಬಸ್‌ಪೇಟೆ: ಚಲಿಸುತ್ತಿದ್ದ ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಹೊಡೆದು ಸ್ಥಳದಲ್ಲೇ ತಾಯಿ ಸಾವನ್ನಪ್ಪಿದ್ದು ಮಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ನೆಲಮಂಗಲ ಪಟ್ಟಣದ ಟೀಚರ್ಸ್‌ ಕಾಲೋನಿ ನಿವಾಸಿ ರತ್ನಮ್ಮ(48) ಮೃತ ಮಹಿಳೆ. ಪವಿತ್ರ(26) ಗಾಯಗೊಂಡ ಮಹಿಳೆ. ತಾಯಿ-ಮಗಳಿಬ್ಬರು ಆಕ್ಟೀವಾ ಬೈಕಿನಲ್ಲಿ ನೆಲಮಂಗಲದಿಂದ ತುಮಕೂರು ಕಡೆಗೆ ತಮ್ಮ ಸಂಬಂಧಿಕರ ಮನೆಗೆ ಹೋಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ-48ರ ಕುಲುವನಹಳ್ಳಿ ಗ್ರಾಮದ ಬಳಿ ಬೈಕಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಹಿಂಬದಿ ಕುಳಿತಿದ್ದ ರತ್ನಮ್ಮ ಕೆಳಗೆ ಬಿದ್ದ ಪರಿಣಾಮ ಬಸ್ಸಿನ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಚಲಾಯಿಸುತ್ತಿದ್ದ ಪವಿತ್ರಾಗೆ ಗಂಭೀರ ಗಾಯಗಳಾಗಿದ್ದು ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅಪಘಾತ ನಡೆದ ಬಳಿಕ ಕೆಎಸ್‌ಆರ್‌ಟಿಸಿ ಬಸ್ ಚಾಲಕ ನಿಲ್ಲಿಸದೇ ಪರಾರಿಯಾಗಿದ್ದಾನೆ. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.