ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು 38 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಹಾಗೂ 2024ರ ಜನವರಿಯಿಂದ ಅನ್ವಯವಾಗುವಂತೆ ಹೊಸದಾಗಿ ವೇತನ ಹೆಚ್ಚಳ ಮಾಡುವ ಬೇಡಿಕೆಯನ್ನು ನೌಕರ ಸಂಘಟನೆಗಳು ಸರ್ಕಾರ ಮುಂದಿಟ್ಟಿದ್ದವು. ಸರ್ಕಾರ 38 ತಿಂಗಳ ಬದಲು 14 ತಿಂಗಳ ವೇತನ ಹಿಂಬಾಕಿ ಪಾವತಿಸಲಾಗುವುದು. ಅದಕ್ಕಾಗಿ ಕೂಡಲೇ 760 ಕೋಟಿ ರು. ಬಿಡುಗಡೆ ಮಾಡಲಾಗುವುದು. ವೇತನ ಹೆಚ್ಚಳ ಸೇರಿ ಉಳಿದ ಬೇಡಿಕೆಗಳನ್ನು ವಿಧಾನಮಂಡಲ ಅಧಿವೇಶನದ ನಂತರ ಚರ್ಚೆ ನಡೆಸಿ ತೀರ್ಮಾನಿಸುವುದಾಗಿ ನೌಕರರ ಸಂಘಟನೆಗಳೊಂದಿಗಿನ ಸಭೆಯಲ್ಲಿ ಸೋಮವಾರ ತಿಳಿಸಿತ್ತು.ಆದರೆ ಹೈಕೋರ್ಟ್ ಸೂಚನೆಯಿಂದಾಗಿ ಮುಷ್ಕರ ಅರ್ಧಕ್ಕೆ ನಿಂತಿರುವುದು ಮತ್ತು ಮತ್ತೆ ಮುಷ್ಕರ ಆರಂಭವಾಗುವ ಭರವಸೆ ಇಲ್ಲದಿರುವುದರಿಂದ ವೇತನ ಹೆಚ್ಚಳ ಹಿಂಬಾಕಿ, ವೇತನ ಹೆಚ್ಚಳದ ಬೇಡಿಕೆ ಈಡೇರಿಸಿಕೊಳ್ಳಲು ಸಾರಿಗೆ ನೌಕರರಲ್ಲಿ ಬೇರೆ ದಾರಿ ಕಾಣಿಸುತ್ತಿಲ್ಲ. ಹೀಗಾಗಿ ಅವರ ಬೇಡಿಕೆ ಅತಂತ್ರ ಪರಿಸ್ಥಿತಿಗೆ ಸಿಲುಕುವಂತಾಗಿದೆ.ಹೈಕೋರ್ಟ್ ಆದೇಶ ವರೆಗೂ
ನೌಕರ ಸಂಘಟನೆ ಜತೆಸರ್ಕಾರದ ಮಾತುಕತೆಯಿಲ್ಲಕನ್ನಡಪ್ರಭ ವಾರ್ತೆ ಬೆಂಗಳೂರು ಹೈಕೋರ್ಟ್ ಸೂಚನೆ ಮತ್ತು ಸರ್ಕಾರದ ಮನವಿ ಧಿಕ್ಕರಿಸಿ ಮುಷ್ಕರ ಆರಂಭಿಸಿದ ಕಾರಣಕ್ಕಾಗಿ ರಾಜ್ಯ ಸರ್ಕಾರ ಸದ್ಯಕ್ಕೆ ನೌಕರ ಸಂಘಟನೆಗಳೊಂದಿಗೆ ಮಾತುಕತೆ ನಡೆಸದಿರಲು ನಿರ್ಧರಿಸಿದೆ. ಸಾರಿಗೆ ಸೇವೆಯು ಅತ್ಯವಶ್ಯಕ ಸೇವೆ ಅಡಿ ಬರಲಿದ್ದು, ಮುಷ್ಕರ ನಡೆಸುವುದನ್ನು ತಡೆಯಲು 2025ರ ಡಿಸೆಂಬರ್‌ವರೆಗೆ ಎಸ್ಮಾ ಜಾರಿ ಮಾಡಲಾಗಿದೆ. ಅದರ ಅಡಿ ನೌಕರರ ರಜೆಯನ್ನೂ ರದ್ದು ಮಾಡಲಾಗಿತ್ತು. ಹೀಗಾಗಿ ಮಂಗಳವಾರ ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರದಲ್ಲಿ ಪಾಲ್ಗೊಂಡಿದ್ದ ನೌಕರರ ಮೇಲೆ ಸಾರಿಗೆ ನಿಗಮಗಳು ಕ್ರಮ ಕೈಗೊಳ್ಳಬಹುದಾಗಿದೆ. ಆದರೆ ಮುಷ್ಕರದ ವಿಚಾರ ಹೈಕೋರ್ಟ್‌ನಲ್ಲಿರುವ ಕಾರಣ, ನೌಕರರ ಮೇಲೆ ಒಂದು ದಿನದ ವೇತನ ಕಡಿತದ ಹೊರತಾಗಿ ಬೇರೆ ಯಾವುದೇ ಕ್ರಮ ಕೈಗೊಳ್ಳದಿರಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಮಂಗಳವಾರ ಬಸ್ ಸೇವೆಯ ವಿವರ:ಮಧ್ಯಾಹ್ನ 1 ಗಂಟೆ: 13,785 ಟ್ರಿಪ್‌ಗಳ ಪೈಕಿ 8,071 ಕಾರ್ಯಾಚರಣೆ (ಶೇ. 58.5)ಸಂಜೆ 4 ಗಂಟೆ: 18,434 ಟ್ರಿಪ್‌ಗಳ ಪೈಕಿ 11,752 ಕಾರ್ಯಾಚರಣೆ (ಶೇ. 63.8)ಸಂಜೆ 6 ಗಂಟೆ: 18,995 ಟ್ರಿಪ್‌ಗಳ ಪೈಕಿ 13,648 ಕಾರ್ಯಾಚರಣೆ (ಶೇ. 71.9)ರಾತ್ರಿ 8 ಗಂಟೆ: 19,239 ಟ್ರಿಪ್‌ಗಳ ಪೈಕಿ 15,466 ಕಾರ್ಯಾಚರಣೆ (ಶೇ. 80.4)---