ಅಕ್ರಮ ಮಾರಾಟಕ್ಕಾಗಿ ಒಣ ಗಾಂಜಾ ಸಾಗಣೆ

| Published : Mar 24 2025, 12:35 AM IST

ಸಾರಾಂಶ

ಕೊಳ್ಳೇಗಾಲ ಪಟ್ಟಣದಲ್ಲಿ ಒಣ ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡಲು ತರುತ್ತಿದ್ದ ಆರೋಪಿಗಳಿಬ್ಬರನ್ನು ಪಟ್ಟಣ ಪೊಲೀಸರು ಹಾಗೂ ಡಿವೈಎಸ್ಪಿ ನೇತೖತ್ವದ ತನಿಖಾ ತಂಡ ಜಂಟಿ ದಾಳಿ ನಡೆಸಿ ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕೊಳ್ಳೇಗಾಲ ಪಟ್ಟಣದಲ್ಲಿ ಒಣ ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡಲು ತರುತ್ತಿದ್ದ ಆರೋಪಿಗಳಿಬ್ಬರನ್ನು ಪಟ್ಟಣ ಪೊಲೀಸರು ಹಾಗೂ ಡಿವೈಎಸ್ಪಿ ನೇತೖತ್ವದ ತನಿಖಾ ತಂಡ ಜಂಟಿ ದಾಳಿ ನಡೆಸಿ ಬಂಧಿಸಿದ್ದಾರೆ.

ತಾಲೂಕಿನ ಅರೇಪಾಳ್ಯ ಗ್ರಾಮದ ವಿನ್ಸೆಂಟ್ (35), ಜಕ್ಕಳ್ಳಿ ಗ್ರಾಮದ ಜಾನ್ ಬ್ರಿಟೋ(33) ಬಂಧಿತರು. ಆರೋಪಿಗಳು ಶನಿವಾರ ರಾತ್ರಿ 10 ರ ಸುಮಾರಿನಲ್ಲಿ ಜಕ್ಕಳ್ಳಿ ಗ್ರಾಮದಿಂದ ಕೊಳ್ಳೇಗಾಲ ಪಟ್ಟಣದ ಕಡೆಗೆ ಒಣಗಾಂಜಾ ಮಾರಾಟ ಮಾಡುವ ಸಲುವಾಗಿ ಲಿಂಗಣಾಪುರದಿಂದ ಕೆ ಎ 10- ಇಜಿ 2177 ಸಂಖ್ಯೆಯ ಹೀರೋ ಸ್ಪ್ಲೆಂಡರ್ ಬೈಕ್ ನಲ್ಲಿ ಆಗಮಿಸುತ್ತಿದ್ದ ವೇಳೆ, ಖಚಿತ ಮಾಹಿತಿ ಹಿನ್ನೆಲೆ ಡಿವೈಎಸ್ಪಿ ಧರ್ಮೇಂದ್ರ ಮಾರ್ಗದರ್ಶನದಲ್ಲಿ ಪಿಎಸ್ಐ ವರ್ಷ ರವರ ನೇತೃತ್ವದಲ್ಲಿ ಅಪರಾಧ ದಳದ ಸಿಬ್ಬಂದಿ ಎಎಸ್ಐ ತಖೀವುಲ್ಲಾ, ರವಿ, ಕಿಶೋರ್‌, ವೆಂಕಟೇಶ್, ಬಿಳಿಗೌಡ, ಶಿವಕುಮಾರ್, ಪಟ್ಟಣ ಪೊಲೀಸ್ ಠಾಣೆಯ ವಿರೇಂದ್ರ, ಅನಿಲ್ ,ರಾಜು, ಸಂಜಯ್ ಇನ್ನಿತರರು ಲಿಂಗಣಾಪುರ ಸರ್ಕಲ್ ನಲ್ಲಿ ಬೈಕ್ ತಡೆದು ಆರೋಪಿಗಳನ್ನು ಪರಿಶೀಲಿಸಿದಾಗ ನಾನೂರು ಗ್ರಾಂ ಒಣ ಗಾಂಜಾ ಇರುವುದು ಕಂಡು ಬಂದ ಹಿನ್ನೆಲೆ, ಆರೋಪಿಗಳ ಸಮೇತ ಬೈಕ್ ಹಾಗೂ ಒಣ ಗಾಂಜಾ ವಶಕ್ಕೆ ಪಡೆದು ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.