ಚನ್ನಪಟ್ಟಣ: ಗ್ಯಾಸ್ಪೈಪ್ ಲೈನ್ ಕಾಮಗಾರಿ, ರಸ್ತೆ ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ನಗರಸಭೆ ವ್ಯಾಪ್ತಿಯ ಹಲವು ಬಡಾವಣೆಗಳಲ್ಲಿ ರಸ್ತೆ ಕಾಮಗಾರಿಗಳು ಆರಂಭವಾಗಿ ಹಲವು ತಿಂಗಳೇ ಕಳೆದಿದ್ದರೂ ಪೂರ್ಣಗೊಳಿಸದೇ ಇರುವುದಿಂದ ನಗರದ ಹಲವಡೆ ರಸ್ತೆಗಳು ಅಧ್ವಾನವಾಗಿದ್ದು, ಸಾರ್ವಜನಿಕರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ
ಚನ್ನಪಟ್ಟಣ: ಗ್ಯಾಸ್ಪೈಪ್ ಲೈನ್ ಕಾಮಗಾರಿ, ರಸ್ತೆ ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ನಗರಸಭೆ ವ್ಯಾಪ್ತಿಯ ಹಲವು ಬಡಾವಣೆಗಳಲ್ಲಿ ರಸ್ತೆ ಕಾಮಗಾರಿಗಳು ಆರಂಭವಾಗಿ ಹಲವು ತಿಂಗಳೇ ಕಳೆದಿದ್ದರೂ ಪೂರ್ಣಗೊಳಿಸದೇ ಇರುವುದಿಂದ ನಗರದ ಹಲವಡೆ ರಸ್ತೆಗಳು ಅಧ್ವಾನವಾಗಿದ್ದು, ಸಾರ್ವಜನಿಕರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.
ನಗರದ ಕೋಟೆ, ಚರ್ಚ್ ರಸ್ತೆ ೬ ಮತ್ತು ೭ನೇ ವಾರ್ಡ್ ವ್ಯಾಪ್ತಿಯ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಜನ ಸಂಚಾರ ಮಾಡುವುದೇ ದುಸ್ತರವಾಗಿ ಪರಿಣಮಿಸಿದೆ.ನಗರದಲ್ಲಿ ಗ್ಯಾಸ್ ಪೈಪ್ಲೈನ್ ಅಳವಡಿಸುವ ಕಾಮಗಾರಿಯ ಹೆಸರಿನಲ್ಲಿ ರಸ್ತೆಗಳು ಹಾಳಾಗುತ್ತಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ರಸ್ತೆಯ ಇಕ್ಕಲುಗಳಲ್ಲಿ ಗ್ಯಾಸ್ ಪೈಪ್ಲೈನ್ ಅಳವಡಿಕೆಗಾಗಿ ಅಗೆದು ಹಾಕಲಾಗಿದೆ. ಕೆಲವು ಬಡಾವಣೆಗಳಲ್ಲಿ ಗ್ಯಾಸ್ಪೈಪ್ಲೈನ್ಗಾಗಿ ರಸ್ತೆಗಳನ್ನು ಅಗೆದು ಮುಚ್ಚಿರುವುದರಿಂದ ಸಾರ್ವಜನಿಕರು ಆ ರಸ್ತೆಗಳು ಹಾಳಾಗಿವೆ.
ಇನ್ನು ನಗರದ ಕೆಲವು ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಂಡಿದ್ದು, ಸುಮಾರಿಗಿದ್ದ ರಸ್ತೆಗಳನ್ನು ಅಗೆದು ಡಾಂಬರು ಹಾಕದೇ ಬಿಟ್ಟಿರುವುದರಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ.ನಗರದ ೭,೮ನೇ ವಾರ್ಡ್ ವ್ಯಾಪ್ತಿ ಕೋಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ರಸ್ತೆಗಳನ್ನು ಅಗೆದು ತಿಂಗಳುಗಳು ಕಳೆದರೂ ಹಾಗೇ ಬಿಡಲಾಗಿದೆ. ಇನ್ನು ಕೆಲವು ಕಡೆ ಜಲ್ಲಿ ಮಾತ್ರ ಹಾಕಿ ನಾಲ್ಕೈದು ತಿಂಗಳಿನಿಂದ ಡಾಂಬರು ಹಾಕದೆ ಹಾಗೇ ಬಿಟ್ಟಿರುವುದರಿಂದ ಸಮಸ್ಯೆಯಾಗಿದೆ.
ಬಿಸಿಲಿನಲ್ಲಿ ದೂಳು, ಮಳೆಗೆ ಕೆಸರುಗದ್ದೆ: ರಸ್ತೆಗಳನ್ನು ಅಗೆದು ಡಾಂಬರೀಕರಣ ಅಥವಾ ಕಾಂಕ್ರಿಟ್ ಕಾಮಗಾರಿ ಮಾಡದಿರುವುದರಿಂದ ಧೂಳಿನ ಸಮಸ್ಯೆ ಹೆಚ್ಚಾಗಿದೆ. ಇದರಿಂದ ರಸ್ತೆಗಳು ಧೂಳುಮಯವಾಗಿವೆ. ವಾಹನಗಳು ಸಂಚರಿಸುವಾಗ ಧೂಳು ಎದ್ದು ಸುತ್ತಮುತ್ತಲಿನ ಮನೆಗಳು, ಅಂಗಡಿಗಳಿಗೆ ನುಗ್ಗುತ್ತಿವೆ. ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ತೆರೆದಿಡಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ನಿತ್ಯ ಮನೆಗಳನ್ನು ಸ್ವಚ್ಛಗೊಳಿಸಿದರೂ ಮತ್ತೆಧೂಳು ಆವರಿಸುತ್ತಿದೆ.
ಇನ್ನು ಮಳೆ ಬಂದಾಗ ಕೆಲ ರಸ್ತೆಗಳು ಕೆಸರುಗದ್ದೆಯಂತಾಗುತ್ತದೆ. ವಾಹನ ಸವಾರರು ತಮ್ಮ ಜೀವನನ್ನು ಕೈಯಲ್ಲಿ ಹಿಡಿದುಕೊಂಡು ವಾಹನ ಚಲಾಯಿಸುವಂತಾಗಿದೆ. ಆಯತಪ್ಪಿ ವಾಹನದಿಂದ ಬಿದ್ದ ಎಷ್ಟೋ ಪ್ರಕರಣಗಳು ನಡೆದಿದ್ದರೂ, ಇತ್ತ ಗಮನ ಹರಿಸಬೇಕಾದವರು ಮಾತ್ರ ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ.ಕೆಲವು ರಸ್ತೆಗಳಲ್ಲಿ ಜಲ್ಲಿಹಾಕಿ ತಿಂಗಳುಗಳಿಂದ ಹಾಗೇ ಬಿಟ್ಟಿರುವದರಿಂದ ವಾಹನಗಳು ಸಂಚರಿಸುವುದು ದುಸ್ತರವಾಗಿದೆ. ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದಿರುವ ಎಷ್ಟೋ ಪ್ರಕರಣಗಳು ನಡೆದಿವೆ. ಇನ್ನು ಈ ರಸ್ತೆಯಲ್ಲಿ ಸಂಚರಿವುದರಿಂದ ವಾಹನಗಳ ಟಯರ್ ಸೇರಿದಂತೆ ವಾಹನಗಳು ಹಾಳಾಗುತ್ತಿವೆ ಎಂದು ಬಡಾವಣೆಗಳ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.
ಚನ್ನಪಟ್ಟಣ ನಗರದ ರಸ್ತೆಗಳ ಪರಿಸ್ಥಿತಿ ತೀರಾ ಅಧ್ವಾನಗೊಂಡಿದ್ದು, ಒಂದು ಕಡೆ ಗ್ಯಾಸ್ ಪೈಪ್ ಲೈನ್ ಹೆಸರಲ್ಲಿ ಚೆನ್ನಾಗಿದ್ದ ರಸ್ತೆಗಳನ್ನು ಹಾಳು ಮಾಡಿದ್ದಾರೆ. ಮತ್ತೊಂದು ಕಡೆ ರಸ್ತೆ ಅಭಿವೃದ್ದಿ ಹೆಸರಲ್ಲಿ ಒಂದು ಕಡೆ ಗುತ್ತಿಗೆದಾರರು ಅಪೂರ್ಣ ಕಾಮಗಾರಿ ನಡೆಸಿರುವುದುರಿಂದ ನಾಗರೀಕರು ರಸ್ತೆಗಳಲ್ಲಿ ಸಂಚರಿಸುವುದೇ ದುಸ್ತವಾಗಿದೆ. ಅದಷ್ಟು ಬೇಗ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ಕಾಮಗಾಗಿ ಪೂರ್ಣಗೊಳಿಸಲು ಕ್ರಮ ವಹಿಸಬೇಕೆಂದು ನಗರದ ಸಾರ್ವಜನಿಕರು ಆಗ್ರಹಿಸಿದ್ದಾರೆ.ಕೋಟ್
ನಗರದ ಹಲವು ರಸ್ತೆಗಳಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಒಂದು ಕಡೆ ಗ್ಯಾಸ್ಪೈಪ್ ಲೈನ್ ಕಾಮಗಾರಿಗೆ ರಸ್ತೆ ಅಗೆದಿದ್ದರೆ, ಇನ್ನೊಂದು ಕಡೆ ಅಭಿವೃದ್ಧಿ ಹೆಸರಿನಲ್ಲಿ ರಸ್ತೆ ಕಾಮಗಾರಿ ಆರಂಭಿಸಿ ನಾಲ್ಕೈದು ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಗುತ್ತಿಗೆದಾರರಿಗೆ ಚುರುಕು ಮುಟ್ಟಿಸಿ ಆದಷ್ಟು ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದೆ.-ಪುಟ್ಟರಾಮು, ನಗರ ನಿವಾಸಿ
ಪೊಟೋ೨೬ಸಿಪಿಟಿ೧: ಗ್ಯಾಸ್ಪೈಪ್ ಲೈನ್ಗಾಗಿ ರಸ್ತೆ ಬದಿಯಲ್ಲಿ ಅಗೆದಿರುವುದರಿಂದ ಕೆಸರುಗದ್ದೆಯಂತಾಗಿರುವ ರಸ್ತೆ.ಪೊಟೋ೨೬ಸಿಪಿಟಿ೨: ನಗರದ ಬಸ್ನಿಲ್ದಾಣದಿಂದ ಶೆಟ್ಟಿಹಳ್ಳಿ ಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರುವುದು.