ನಾಳೆ ಮೂಳೆವೈದ್ಯ ಮಹದೇವಯ್ಯರಿಂದ ಚಿಕಿತ್ಸಾ ಶಿಬಿರ: ಸುನೀಲ್

| Published : Jul 26 2025, 12:00 AM IST

ನಾಳೆ ಮೂಳೆವೈದ್ಯ ಮಹದೇವಯ್ಯರಿಂದ ಚಿಕಿತ್ಸಾ ಶಿಬಿರ: ಸುನೀಲ್
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ ಜಿಲ್ಲೆ ಕುದೂರಿನ ಪ್ರಸಿದ್ಧ ಪಾರಂಪರಿಕ ವೈದ್ಯ, ಮೂಳೆವೈದ್ಯ ಮಹದೇವಯ್ಯ ಜು.27ರಂದು ನಗರದ ಎಚ್.ಕೆ.ಆರ್. ವೃತ್ತದ ನಿಟುವಳ್ಳಿ ಮುಖ್ಯರಸ್ತೆಯ ಓಂ ವೆಲ್‌ನೆಸ್ ಸೆಂಟರ್‌ನಲ್ಲಿ ಮೂಳೆ ಸಂಬಂಧಿತ ಉಚಿತ ಚಿಕಿತ್ಸಾ ಶಿಬಿರ ನಡೆಸಿಕೊಡಲಿದ್ದಾರೆ ಎಂದು ಭಾರತ್ ಸ್ವಾಭಿಮಾನ ಟ್ರಸ್ಟ್ ಜಿಲ್ಲಾಧ್ಯಕ್ಷ ಸುನೀಲಕುಮಾರ ಹೇಳಿದ್ದಾರೆ.

ದಾವಣಗೆರೆ: ರಾಮನಗರ ಜಿಲ್ಲೆ ಕುದೂರಿನ ಪ್ರಸಿದ್ಧ ಪಾರಂಪರಿಕ ವೈದ್ಯ, ಮೂಳೆವೈದ್ಯ ಮಹದೇವಯ್ಯ ಜು.27ರಂದು ನಗರದ ಎಚ್.ಕೆ.ಆರ್. ವೃತ್ತದ ನಿಟುವಳ್ಳಿ ಮುಖ್ಯರಸ್ತೆಯ ಓಂ ವೆಲ್‌ನೆಸ್ ಸೆಂಟರ್‌ನಲ್ಲಿ ಮೂಳೆ ಸಂಬಂಧಿತ ಉಚಿತ ಚಿಕಿತ್ಸಾ ಶಿಬಿರ ನಡೆಸಿಕೊಡಲಿದ್ದಾರೆ ಎಂದು ಭಾರತ್ ಸ್ವಾಭಿಮಾನ ಟ್ರಸ್ಟ್ ಜಿಲ್ಲಾಧ್ಯಕ್ಷ ಸುನೀಲಕುಮಾರ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 12ರಿಂದ ಚಿಕಿತ್ಸೆ ನೀಡಲಿದ್ದು, ಪತಂಜಲಿ ಯೋಗ ಸಮಿತಿ, ಪಾರಂಪರಿಕ ವೈದ್ಯ ಪರಿಷತ್ತು ಹಾಗೂ ಓಂ ವೆಲ್‌ನೆಸ್ ಸೆಂಟರ್ ಸಹಯೋಗದಲ್ಲಿ ಶಿಬಿರ ನಡೆಯಲಿದೆ ಎಂದರು.

ಕುದೂರಿನ ಪಾರಂಪರಿಕ ಮೂಳೆವೈದ್ಯ ಮಹದೇವಯ್ಯ ಟೆನಿಸ್ ಎಲ್ಬೋ, ಸೊಂಟನೋವು, ಕುತ್ತಿಗೆ ನೋವು, ಭುಜ ನೋವು, ಎಲ್3, ಎಲ್4, ಎಲ್5 ಮೂಳೆಮುರಿತ ಉಂಟಾಗಿರುವವರಿಗೆ ಹಾಗೂ ಎಷ್ಟೇ ಹಳೆಯ ಕಾಲುನೋವು ಇದ್ದರೂ ಪಾರಂಪರಿಕ ವೈದ್ಯ ಪದ್ಧತಿ ಮೂಲಕ ಉಚಿತ ಚಿಕಿತ್ಸೆ ನೀಡಲಿದ್ದಾರೆ. ಮಕ್ಕಳಾದಿಯಾಗಿ ಹಿರಿಯ ನಾಗರೀಕರೂ ಶಿಬಿರದ ಸದುಪಯೋಗ ಪಡೆಯಬಹುದು ಎಂದು ಹೇಳಿದರು.

ಕರ್ನಾಟಕ ರಾಜ್ಯದ ನಾನಾ ಮೂಲೆಗಳ 20 ಸಾವಿರಕ್ಕೂ ಅಧಿಕ ರೋಗಿಗಳಿಗೆ ಯಾವುದೇ ಆಪರೇಷನ್ ಇಲ್ಲದೇ, ದುಬಾರಿ ಖರ್ಚು ಇಲ್ಲದೇ, ಮೂಳೆ ಸಂಬಂಧಿತ ಸಮಸ್ಯೆಗಳಿಗೆ ಪಾರಂಪರಿಕ ವೈದ್ಯ ಮಹದೇವಯ್ಯ ಚಿಕಿತ್ಸೆ, ಆರೈಕೆ ಮಾಡಿ, ಪರಿಹಾರ ನೀಡಿದ್ದಾರೆ. ಕಳೆದ ವರ್ಷವೂ ದಾವಣಗೆರೆಯಲ್ಲಿ ಶಿಬಿರ ನಡೆಸಿದ್ದರು. ಅರ್ಹರು ಶಿಬಿರದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಆಸಕ್ತರು ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಮೊ-99016-63389, 83107-48946, 98808-06471, 97438-95325, 94816-72200, 98801-07918, 85535-52493 ಇಲ್ಲಿಗೆ ಸಂಪರ್ಕಿಸಲು ಸುನೀಲಕುಮಾರ ಮನವಿ ಮಾಡಿದರು.

ಓಂ ವೆಲ್‌ನೆಸ್ ಸೆಂಟರ್‌ನ ಕೆ.ಎಂ. ಪುಷ್ಪಲತಾ, ಅಂಜಲಿ ದೇವಿ, ಮುಜೀಬ್ ಖಾನ್ ಇದ್ದರು.

- - -

-25ಕೆಡಿವಿಜಿ4.ಜೆಪಿಜಿ:

ಟ್ರಸ್ಟ್ ಜಿಲ್ಲಾಧ್ಯಕ್ಷ ಸುನೀಲಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.