ಒಸಿಟಿ ಮೂಲಕ ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ

| Published : Feb 18 2024, 01:33 AM IST

ಸಾರಾಂಶ

ಆ ಯಂತ್ರ ಖರಿದಿಸುವುದು ತುಂಬ ದೂಬಾರಿ ವೆಚ್ಚವಾಗಿದ್ದರಿಂದ ಅಂತಹ ರೋಗಿಗಳು ಕಂಡು ಬಂದರೆ ಮಾತ್ರ ಆಗಿಂದಾಗೆ ಒಸಿಟಿ ಅಳವಡಿಸಿ ಚಿಕಿತ್ಸೆ ನೀಡಲಾಗುವುದು. ಅದೊಂದು ಸೂಕ್ಷ್ಮ ಕ್ಯಾಮೆರಾದಂತಹ ಯಂತ್ರೋಪಕರಣವಿದ್ದು, ಅದರ ಸಹಾಯದಿಂದ ರೋಗಿಗೆ ಸ್ಟಂಟ್ ಅಳವಡಿಸಿರುವುದರ ಬಗ್ಗೆ ವಿಡಿಯೋ ಮೂಲಕ ಖಚಿತ ಮಾಹಿತಿ ನೀಡುತ್ತದೆ

ಬೀದರ್: ಒಸಿಟಿ ಮೂಲಕ ಹೃದಯ ಸಂಬಂಧಿ ಕಾಯಿಲೆಗಳಿಗೆ ಅತ್ಯಾಧುನಿಕ ಚಿಕಿತ್ಸೆ ನಮ್ಮಲ್ಲಿ ಲಭ್ಯವಿದೆ ಎಂದು ಖ್ಯಾತ ಹೃದಯರೋಗ ತಜ್ಞ ಡಾ.ನಿತೀನ ಗುದಗೆ ಹೇಳಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡಿ ಕಲ್ಯಾಣ ಕರ್ನಾಟಕದಲ್ಲಿಯೇ ಈ ಸೇವೆ ನಮ್ಮಲ್ಲಿ ಮಾತ್ರ ಲಭ್ಯವಿದ್ದು, ಓರ್ವ ಸ್ಥಳಿಯ ಹಾಗೂ ಹುಲಸೂರಿನ ಹೃದಯ ಸಂಬಂಧಿ ಕಾಯಿಲೆವುಳ್ಳ ವ್ಯಕ್ತಿಗೆ ಬಿಪಿಎಲ್ ಕಾರ್ಡ್ ಇರುವ ಕಾರಣ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದರು.

ಆ ಯಂತ್ರ ಖರಿದಿಸುವುದು ತುಂಬ ದೂಬಾರಿ ವೆಚ್ಚವಾಗಿದ್ದರಿಂದ ಅಂತಹ ರೋಗಿಗಳು ಕಂಡು ಬಂದರೆ ಮಾತ್ರ ಆಗಿಂದಾಗೆ ಒಸಿಟಿ ಅಳವಡಿಸಿ ಚಿಕಿತ್ಸೆ ನೀಡಲಾಗುವುದು. ಅದೊಂದು ಸೂಕ್ಷ್ಮ ಕ್ಯಾಮೆರಾದಂತಹ ಯಂತ್ರೋಪಕರಣವಿದ್ದು, ಅದರ ಸಹಾಯದಿಂದ ರೋಗಿಗೆ ಸ್ಟಂಟ್ ಅಳವಡಿಸಿರುವುದರ ಬಗ್ಗೆ ವಿಡಿಯೋ ಮೂಲಕ ಖಚಿತ ಮಾಹಿತಿ ನೀಡುತ್ತದೆ ಎಂದರು.

ಗುದಗೆ ಆಸ್ಪತ್ರೆಯ ತಜ್ಞವೈದ್ಯ ಡಾ.ಸಚೀನ ಗುದಗೆ ಮಾತನಾಡಿ, ನಮ್ಮಲ್ಲಿ ಶೀಘ್ರದಲ್ಲಿಯೇ ಬೈಪಾಸ್ ಸರ್ಜರಿಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಶೀಘ್ರದಲ್ಲಿಯೇ ಅದು ಕಾರ್ಯಾರಂಭ ಆಗಲಿದೆ. ಇದರಿಂದ ಈ ಭಾಗದ ಹೃದಯಸಂಬಂಧಿ ರೋಗಿಗಳು ಹೈದ್ರಾಬಾದ್, ಸೋಲಾಪುರ, ಬೆಂಗಳೂರಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಮೂರಕ್ಕಿಂತ ಹೆಚ್ಚು ಬ್ಲಾಕೆಜ್ ಇದ್ದರೆ ಬೈಪಾಸ್ ಸರ್ಜರಿ ಅನಿವಾರ್ಯ ಇರುತ್ತದೆ. ಇದು ಸಹ ಇಡೀ ಕಲ್ಯಾಣ ಕರ್ನಾಟಕದಲ್ಲಿಯೇ ಮಾತ್ರ ನಮ್ಮಲ್ಲಿ ಲಭ್ಯವಿರಲಿದೆ ಎಂದು ಹೇಳಿದರು.

ಜಿಲ್ಲೆಯ ಪತ್ರಕರ್ತರಿಗೆ ಉಚಿತ ಹೃದಯ ಸಂಬಂಧಿ ಚಿಕಿತ್ಸೆ:

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಕ್ರಡಿಶನ್ ಹೊಂದಿರುವ ಪತ್ರಕರ್ತರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸದಸ್ಯತ್ವ ಪಡೆದ ಪತ್ರಕರ್ತರಿಗೆ ಮಾತ್ರ ನಮ್ಮಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಡಾ.ಸಚೀನ ಸ್ಪಷ್ಟಪಡಿಸಿದರು.

ಈಗಾಗಲೇ ಜಿಲ್ಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಿಬ್ಬಂದಿ, ಸರ್ಕಾರಿ ನೌಕರರು, ಅಗ್ನಿಶಾಮಕ ನೌಕರರು, ಪೋಲಿಸರು ಸೇರಿದಂತೆ ವಿವಿಧ 18 ಇಲಾಖೆಗಳ ಸಿಬ್ಬಂದಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ ಬಡ ರೋಗಿಗಳಿಗೆ ಬಿಪಿಎಲ್ ಕಾರ್ಡ್, ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ಹಾಗೂ ಯಶಸ್ವಿನಿ ಕಾರ್ಡ್ ಹೊಂದಿದವರಿಗೆ ನಮ್ಮಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದೆಂದು ಡಾ.ಸಚೀನ ತಿಳಿಸಿದರು.

ಮುಂದೆಯೂ ಸಹ ಜಿಲ್ಲೆಯ ಸಾರ್ವಜನಿಕರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ಮೂಲಕ ಜಿಲ್ಲೆಯ ಪ್ರತಿಷ್ಟಿತ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುತ್ತೇವೆ ಎಂದು ಈ ಸಂದರ್ಭದಲ್ಲಿ ಸಂತಸ ಹಂಚಿಕೊಂಡರು.