ಮನೆ ಮೇಲೆ ಉರುಳಿದ ಮರ: ನೆಲಕಚ್ಚಿದ 6 ವಿದ್ಯುತ್‌ ಕಂಬ

| Published : Apr 15 2024, 01:21 AM IST

ಸಾರಾಂಶ

ನರಸಿಂಹರಾಜಪುರ ತಾಲೂಕಿನ ಸೀತೂರು ಗ್ರಾಮ ಪಂಚಾಯಿತಿಗೆ ಸೇರಿದ ಬೆಳ್ಳೂರು ಗ್ರಾಮದಲ್ಲಿ ಶನಿವಾರ ಸಂಜೆ 6.30ಕ್ಕೆ ಬೀಸಿದ ಬಾರೀ ಗಾಳಿಗೆ ಬಿ.ಆರ್‌.ಸತೀಶ್‌ ಎಂಬುವರ ಮನೆ ಮೇಲೆ ಮರ ಉರುಳಿ ಮೇಲ್ಚಾವಣಿಗೆ ಹಾಕಿದ್ದ ಸೀಟುಗಳು ಪುಡಿಯಾಗಿದೆ

ನರಸಿಂಹರಾಜಪುರ: ತಾಲೂಕಿನ ಸೀತೂರು ಗ್ರಾಮ ಪಂಚಾಯಿತಿಗೆ ಸೇರಿದ ಬೆಳ್ಳೂರು ಗ್ರಾಮದಲ್ಲಿ ಶನಿವಾರ ಸಂಜೆ 6.30ಕ್ಕೆ ಬೀಸಿದ ಬಾರೀ ಗಾಳಿಗೆ ಬಿ.ಆರ್‌.ಸತೀಶ್‌ ಎಂಬುವರ ಮನೆ ಮೇಲೆ ಮರ ಉರುಳಿ ಮೇಲ್ಚಾವಣಿಗೆ ಹಾಕಿದ್ದ ಸೀಟುಗಳು ಪುಡಿಯಾಗಿದೆ. ಪಕ್ಕದಲ್ಲಿದ್ದ ಬಿ.ಎಸ್‌.ಎನ್‌.ಎಲ್‌. ಕಚೇರಿ ಕಟ್ಟಡದ 50 ಹೆಂಚುಗಳು ಪುಡಿಯಾಗಿದೆ. ಜೊತೆಗೆ 6 ವಿದ್ಯುತ್‌ ಕಂಬ, ಟ್ರಾನ್ಸ್ ಫಾರ್ಮರ್‌ ಸಹ ಉರುಳಿ ಬಿದ್ದಿದೆ. ಇದರಿಂದ ಲಕ್ಷಾಂತರ ರು.ನಷ್ಟ ಉಂಟಾಗಿದೆ. ಗ್ರಾಮ ಪಂಚಾಯಿತಿ ಸದಸ್ಯ ಎಚ್‌.ಇ.ದಿವಾಕರ ಬೇಟಿ ನೀಡಿದ್ದರು.

ಸಮೀಪದ ಬೆಮ್ಮನೆಯಲ್ಲಿ 1 ವಿದ್ಯುತ್‌ ಕಂಬ ಉರುಳಿ ಬಿದ್ದಿದೆ. ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಗಾಳಿಯಿಂದಾಗಿ ನೂರಾರು ಅಡಿಕೆ ಮರಗಳು ಉರುಳಿ ಬಿದ್ದಿದೆ. ಕಣುವೆಯಲ್ಲಿ ಬಾರೀ ಗಾಳಿಯಿಂದಾಗಿ 15 ವಿದ್ಯುತ್‌ ಕಂಬ ಉರುಳಿ ಬಿದ್ದಿದೆ.