ರೋಟರಿ ಸಂಸ್ಥೆ 3192 ವತಿಯಿಂದ ಏಕ ಕಾಲದಲ್ಲಿ 3 ಸಾವಿರಕ್ಕೂ ಅಧಿಕ ಜನರು ಬೆಟ್ಟವನ್ನು ಹತ್ತುವ ಮೂಲಕ ವಿಶ್ವ ದಾಖಲೆ ಮಾಡುವ ಗುರಿ ಹೊಂದಲಾಗಿದೆ. ಈ ರೋಟ್ರ್ಯಾಕ್ ನ್ನು ದಾಖಲೆ ಮಾಡಲು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರು ಸಂಪೂರ್ಣ ಸಹಕಾರ ನೀಡಿರುವುದು ಬಹಳ ಸಂತಸ ತಂದಿದೆ. ರಾಜೇಂದ್ರ ರಾಜಣ್ಣ ಅವರೇ ಸ್ವತಃ ಬರುವ ಚಾರಣಿಗರಿಗೆ ಊಟ, ಉಪಹಾರ ಹಾಗೂ ಶುದ್ಧ ಕುಡಿವ ನೀರಿನ ವ್ಯವಸ್ಥೆ ಮಾಡಿದ್ದಾರೆ ಮತ್ತು ಚಾರಣಕ್ಕೆ ಕೈ ಜೋಡಿಸಿದ್ದಾರೆ.

ಕನ್ನಡಪ್ರಭವಾರ್ತೆ, ಮಧುಗಿರಿ

ನವೆಂಬರ್ 11ರಂದು ವಿಶ್ವಪ್ರಸಿದ್ಧ ಮಧುಗಿರಿ ಏಕಾಶಿಲಾ ಬೆಟ್ಟದಲ್ಲಿ ವಿಶ್ವದಾಖಲೆ ನಿರ್ಮಿಸುವ ಸಂಬಂಧ ಚಾರಣ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಅಂದು 3 ಸಾವಿರಕ್ಕೂ ಅಧಿಕ ಜನರು ಇಲ್ಲಿಗೆ ಚಾರಣಕ್ಕೆ ಆಗಮಿಸುವರು. ಬೆಟ್ಟಕ್ಕೆ ಒಂದೇ ಬಾರಿ 3 ಸಾವಿರಕ್ಕೂ ಹೆಚ್ಚು ಜನರು ಚಾರಣ ಕೈಗೊಳ್ಳಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.ಪಟ್ಟಣದ ಏಕಶಿಲಾ ಬೆಟ್ಟದ ಆವರಣಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ರೋಟರಿ ಸಂಸ್ಥೆ 3192 ವತಿಯಿಂದ ಏಕ ಕಾಲದಲ್ಲಿ 3 ಸಾವಿರಕ್ಕೂ ಅಧಿಕ ಜನರು ಬೆಟ್ಟವನ್ನು ಚಾರಣ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸುವ ನಿಟ್ಟಿನಲ್ಲಿ ನವೆಂಬರ್ 15 ರಂದು ಭಾನುವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೋಟೆಯ ಆವರಣ ಹಾಗೂ ಶೌಚಾಲಯ ಸೇರಿ ಸ್ವಚ್ಚತೆಗೆ ಪುರಸಭೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗೆ ರಾಜೇಂದ್ರ ರಾಜಣ್ಣ ಸೂಚಿಸಿದರು.

ಇದೇ ವೇಳೆ ಚಾರಣದ ಮಾರ್ಗ, ಸುರಕ್ಷತಾ ಕ್ರಮಗಳು, ಅಗತ್ಯ ಮೂಲಸೌಕರ್ಯ, ವ್ಯವಸ್ಥಾಪನೆ ಹಾಗೂ ಕಾರ್ಯಕ್ರಮದ ಸಮನ್ವಯದ ಕುರಿತು ಚರ್ಚಿಸಿ ಸಿದ್ಧತೆಗಳನ್ನು ಪರಿಶೀಲಿಸಲಾಯಿತು.

ರೋಟರಿ ಸಂಸ್ಥೆಯ ಪ್ರತಿನಿಧಿ ಆರ್.ಸಂಜಯ್ ಮಾತನಾಡಿ , ರೋಟರಿ ಸಂಸ್ಥೆ 3192 ವತಿಯಿಂದ ಏಕ ಕಾಲದಲ್ಲಿ 3 ಸಾವಿರಕ್ಕೂ ಅಧಿಕ ಜನರು ಬೆಟ್ಟವನ್ನು ಹತ್ತುವ ಮೂಲಕ ವಿಶ್ವ ದಾಖಲೆ ಮಾಡುವ ಗುರಿ ಹೊಂದಲಾಗಿದೆ. ಈ ರೋಟ್ರ್ಯಾಕ್ ನ್ನು ದಾಖಲೆ ಮಾಡಲು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರು ಸಂಪೂರ್ಣ ಸಹಕಾರ ನೀಡಿರುವುದು ಬಹಳ ಸಂತಸ ತಂದಿದೆ. ರಾಜೇಂದ್ರ ರಾಜಣ್ಣ ಅವರೇ ಸ್ವತಃ ಬರುವ ಚಾರಣಿಗರಿಗೆ ಊಟ, ಉಪಹಾರ ಹಾಗೂ ಶುದ್ಧ ಕುಡಿವ ನೀರಿನ ವ್ಯವಸ್ಥೆ ಮಾಡಿದ್ದಾರೆ ಮತ್ತು ಚಾರಣಕ್ಕೆ ಕೈ ಜೋಡಿಸಿದ್ದಾರೆ ಎಂದು ತಿಳಿಸಿದರು. ಬೆಟ್ಟದ ಆವರಣದಲ್ಲಿ 15 ಅಡಿಯ ಎತ್ತರ ಪೆನ್ಸಿಲ್ ನಿರ್ಮಾಣ ಮಾಡಲಾಗುತ್ತದೆ ಹಾಗೂ ರೋಟರಿ ಸಂಸ್ಥೆ 3192 ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ಹಾಗೂ ಲೇಖನಿ ಸಾಮಾಗ್ರಿಗಳನ್ನು ವಿತರಣೆ ಮಾಡಲಾಗುವುದು ಹಾಗೂ 1 ಲಕ್ಷಕ್ಕೂ ಅಧಿಕ ಸೀಡ್ಸ್ ಬಾಲ್ ಗಳನ್ನು ಭೂಮಿಗೆ ಅಳವಡಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು. ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪ , ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡಯ್ಯ , ಎನ್.ಗಂಗಣ್ಣ , ರೋಟರಿ ಸಂಸ್ಥೆಯ ರೇಣುಕಾ ಪ್ರಸಾದ್ , ಜಿ.ಜಯರಾಮಯ್ಯ , ಎಂ.ಎನ್.ನಟರಾಜು , ಲತಾ , ಎಸ್.ಕಿರಣ್ , ನವೀನ್ , ಸೆನ್ನಾ, ಯಶವಂತ , ಮುಖಂಡರಾದ ಎಂ.ವಿ.ಮಂಜುನಾಥ್ , ಎಂ.ಜಿ.ಉಮೇಶ್ , ಎಂ.ಶ್ರೀಧರ್ , ಕುರುಬರಹಳ್ಳಿ ಹರ್ಷ , ಹೊನ್ನಾಪುರ ದೀಪು , ಮನೋಹರ್ ಹಾಗೂ ಸಾರ್ವಜನಿಕರು ಇದ್ದರು.