ಸಾರಾಂಶ
ಶಿರಾ : ಶಿರಾ ನಗರಸಭೆ ವತಿಯಿಂದ ದಲಿತ ವ್ಯಕ್ತಿಗೆ ಮಂಜೂರಾಗಿದ್ದ ಅಂಗಡಿ ಮಳಿಗೆಯನ್ನು ಬಾಡಿಗೆ ಹಣ ಪಾವತಿಸದ ಹಿನ್ನೆಲೆಯಲ್ಲಿ ನಗರಸಭೆಯಿಂದ ಬೀಗ ಹಾಕಲಾಗಿತ್ತು. ಆದರೆ ಅದೇ ಅಂಗಡಿಯನ್ನು ಅಪರಿಚಿತರಿಂದ ಬೀಗ ಒಡೆದು ಅಂಗಡಿ ನವೀಕರಣಕ್ಕೆ ಮುಂದಾಗಿದ್ದಾರೆ. ದಲಿತರಿಗೆ ಮಂಜೂರಾಗಿದ್ದ ಅಂಗಡಿ ಮಳಿಗೆಯನ್ನು ಅನ್ಯ ವ್ಯಕ್ತಿಗಳು ಅತಿಕ್ರಮಣ ಮಾಡುತ್ತಿದ್ದಾರೆ. ಕೂಡಲೇ ನಗರಸಭೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮಾದಿಗ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ರಂಗನಾಥ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ, ಶಿರಾ ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ನಗರಸಭೆಗೆ ಸೇರಿದ ಅಂಗಡಿ ಮಳಿಗೆಯನ್ನು 1990ರಲ್ಲಿ ದಲಿತ ವ್ಯಕ್ತಿ ಹನುಮಯ್ಯ ಎಂಬುವವರಿಗೆ ಮಳಿಗೆ ಸಂಖ್ಯೆ 40ನ್ನು ಮಂಜೂರು ಮಾಡಲಾಗಿತ್ತು. ಅಂದಿನಿಂದ 2024ರವರೆಗೆ ಹನುಮಯ್ಯ ಅವರು ನಗರಸಭೆಗೆ ಬಾಡಿಗೆ ಪಾವತಿಸಿಕೊಂಡು ವ್ಯವಹಾರ ಮಾಡುತ್ತಿದ್ದರು. ಇತ್ತೀಚೆಗೆ ನಗರಸಭೆಯ ಪೌರಾಯುಕ್ತರು ಹಾಗೂ ಅಧಿಕಾರಿಗಳ ತಂಡ ಬಾಡಿಗೆ ಹಣ ಕಟ್ಟದ ಅಂಗಡಿ ಮಳಿಗೆಗಳಿಗೆ ಬೀಗ ಹಾಕಿಸಿದ್ದಾರೆ. ಅದರಲ್ಲಿ ಮಳಿಗೆ ನಂ. 40ಕ್ಕೂ ಬೀಗ ಹಾಕಿದ್ದಾರೆ. ಆಗ ಅಂಗಡಿ ಬಾಡಿಗೆದಾರರು ಬಾಡಿಗೆ ಹಣವನ್ನು ವ್ಯವಸ್ಥೆ ಮಾಡಿ ಕಟ್ಟುವುದಾಗಿ ತಿಳಿಸಿದ್ದಾರೆ. ಆದರೆ ಶನಿವಾರ ಅಪರಿತರು ಏಕಾಏಕಿ ಸೀಜ್ ಮಾಡಿದ್ದ ಅಂಗಡಿ ಮಳಿಗೆಯನ್ನು ತೆಗೆದು ಅದರಲ್ಲಿ ನವೀಕರಣ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ. ಇದರ ಹಿಂದೆ ಯಾರದೋ ಪ್ರಭಾವಿ ರಾಜಕಾರಣಿಯ ಕೈವಾಡ ಇರುವುದು ಕಂಡು ಬರುತ್ತಿದೆ. ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿಗಳು, ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಅನಧಿಕೃತವಾಗಿ ಅಂಗಡಿಯ ಬೀಗ ಹೊಡೆದು ನವೀಕರಣ ಮಾಡುತ್ತಿದ್ದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮಾದಿಗ ಮಹಾಸಭಾದಿಂದ ನಗರಸಭೆಯ ಮುಂಭಾಗ ಅರ್ನಿದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮಾರುತಿ, ಶಂಕರ್ ಸೇರಿದಂತೆ ಹಲವರು ಹಾಜರಿದ್ದರು.