ಸಂಘಸಂಸ್ಥೆಗಳು ಸಮರ್ಪಣಾ ಮನೋಭಾವದಿಂದ ಸಮಾಜಕ್ಕೆ ಮಾಡುವ ಸೇವಾ ಕಾರ್ಯವನ್ನು ಗುರುತಿಸುವಂತಾಗಬೇಕು, ಈ ಮೂಲಕ ಮತ್ತಷ್ಟು ಸಂಘಸಂಸ್ಥೆಗಳಿಗೆ ಪ್ರೇರಣೆ ಸಾಧ್ಯವಾಗುತ್ತದೆ ಎಂದು ಸಾಲಿಗ್ರಾಮ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಬಂಟ್ವಾಳ ಪ್ರಕಾಶ್ ಕಾರಂತ್ ನುಡಿದರು.

ಕೋಟ: ಸಂಘಸಂಸ್ಥೆಗಳು ಸಮರ್ಪಣಾ ಮನೋಭಾವದಿಂದ ಸಮಾಜಕ್ಕೆ ಮಾಡುವ ಸೇವಾ ಕಾರ್ಯವನ್ನು ಗುರುತಿಸುವಂತಾಗಬೇಕು, ಈ ಮೂಲಕ ಮತ್ತಷ್ಟು ಸಂಘಸಂಸ್ಥೆಗಳಿಗೆ ಪ್ರೇರಣೆ ಸಾಧ್ಯವಾಗುತ್ತದೆ ಎಂದು ಸಾಲಿಗ್ರಾಮ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಬಂಟ್ವಾಳ ಪ್ರಕಾಶ್ ಕಾರಂತ್ ನುಡಿದರು.

ಅವರು ಶನಿವಾರ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಸಂಘಸಂಸ್ಥೆಗಳಿಗೆ ಸಮಾಜಸೇವಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಕೋಟದ ಪಂಚವರ್ಣ ಸಂಘಟನೆ ಪರಿಸರಸ್ನೇಹಿ ಸಾಮಾಜಿಕ ಕಾರ್ಯವನ್ನು ಗುರುತಿಸಿ ಗೌರವ ಸನ್ಮಾನ ನೀಡಲಾಯಿತು. ಕೋಟ ವಿವೇಕ ವಿದ್ಯಾಸಂಸ್ಥೆಯ ನಿವೃತ್ತ ಶಿಕ್ಷಕ ವೆಂಕಟೇಶ ಉಡುಪ, ಹೊಸಬದುಕು ಆಶ್ರಮದ ಮುಖ್ಯಸ್ಥ ವಿನಯಚಂದ್ರ, ನಿವೃತ್ತ ಬ್ಯಾಂಕ್ ಉದ್ಯೋಗಿ ರಾಮದಾಸ್ ನಾಯಕ್ ಅವರನ್ನು ಪುರಸ್ಕರಿಸಲಾಯಿತು. ವೇದಿಕೆಯಲ್ಲಿ ದೇಗುಲದ ಆಡಳಿತ ಮಂಡಳಿಯ ಉಪಾಧ್ಯಕ್ಷ ಚಂದ್ರಶೇಖರ ಉಪಾಧ್ಯಾಯ, ಕಾರ್ಯದರ್ಶಿ ಪರುಶರಾಮ ಭಟ್, ಸದಸ್ಯರಾದ ಕೆ.ತಾರಾನಾಥ ಹೊಳ್ಳ, ಪ್ರಸನ್ನ ತುಂಗ, ದೇಗುಲದ ವ್ಯವಸ್ಥಾಪಕ ಗಣೇಶ್ ಭಟ್ ಇದ್ದರು. ಕಾರ್ಯಕ್ರಮವನ್ನು ನಾಗರತ್ನ ಹೇರ್ಳೆ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಮಹಿಳಾ ವೇದಿಕೆಯಿಂದ ಪ್ರಹಸನ ನೃತ್ಯ ಕಾರ್ಯಕ್ರಮಗಳು ಜರಗಿದವು.