ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನಮನ

| Published : Feb 16 2024, 01:46 AM IST

ಸಾರಾಂಶ

ಸಾಗರ ಪಟ್ಟಣದ ಎಸ್.ಎನ್.ನಗರ ವೃತ್ತದಲ್ಲಿ ಬುಧವಾರ ರಾತ್ರಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ವತಿಯಿಂದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕನ್ನಡಪ್ರಭವಾರ್ತೆ ಸಾಗರ

ಪಟ್ಟಣದ ಶಿವಪ್ಪನಾಯಕನಗರ ವೃತ್ತದಲ್ಲಿ ಬುಧವಾರ ರಾತ್ರಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ವತಿಯಿಂದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ ಮಾತನಾಡಿ, ಪುಲ್ವಾಮ ದಾಳಿಯಲ್ಲಿ ನಮ್ಮ ವೀರ ಯೋಧರು ಹುತಾತ್ಮರಾಗಿದ್ದರಿಂದ ಇಡೀ ದೇಶವೇ ದುಃಖಸಾಗರದಲ್ಲಿ ಮುಳುಗುವಂತೆ ಆಗಿತ್ತು. ಫೆ.೧೪ ಭಾರತೀಯರ ಪಾಲಿಗೆ ಕರಾಳದಿನವಾಗಿದೆ. ಗಡಿಯಲ್ಲಿ ನಮ್ಮನ್ನು ರಕ್ಷಣೆ ಮಾಡುತ್ತಿರುವ ಸೈನಿಕರ ಬಗ್ಗೆ ನಾವು ಗೌರವ ಹೊಂದಿರಬೇಕು. ಅವರನ್ನು ಸದಾ ಬೆಂಬಲಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ನಿವೃತ್ತ ಮುಖ್ಯ ಶಿಕ್ಷಕ ನಾರಾಯಣಮೂರ್ತಿ ಕಾನುಗೋಡು ಮಾತನಾಡಿ, ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರಯೋಧರನ್ನು ನಾವು ಸದಾ ಸ್ಮರಿಸಿಕೊಳ್ಳಬೇಕು. ದೇಶಕ್ಕಾಗಿ ಅವರು ಮಾಡಿದ ತ್ಯಾಗ ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದರು.

ನ್ಯಾಯವಾದಿ ಕೆ.ವಿ.ಪ್ರವೀಣ್ ಮಾತನಾಡಿದರು. ಜಿಲ್ಲಾ ಸಹ ಕಾರ್ಯದರ್ಶಿ ಮಂಜು ಗೌಡ, ಪ್ರಚಾರ ಪ್ರಮುಖ್ ನವೀನ್ ಯಳವರಸಿ, ಪ್ರಮುಖರಾದ ಸುದರ್ಶನ್ ಕೆ.ಎಚ್., ಕೀರ್ತಿ, ಕಿರಣ್, ಪ್ರಜೀತ್, ಸುನೀಲ್ ಇನ್ನಿತರರು ಹಾಜರಿದ್ದರು.ಬಿಜೆಪಿಯಿಂದ ನಮನ:

ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಬಿಜೆಪಿ ವತಿಯಿಂದ ನಮನ ಸಲ್ಲಿಸಲಾಯಿತು. ಸಾಗರ್ ಹೋಟೆಲ್ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ಹುತಾತ್ಮರಾದ ಯೋಧರ ಕುಟುಂಬಗಳಿಗೆ ಭಗವಂತನು ಸ್ಥೈರ್ಯ ಹಾಗೂ ನೆಮ್ಮದಿಯ ಬದುಕನ್ನು ಕೊಡಲಿ ಎಂದು ಪ್ರಾರ್ಥಿಸಿದರು.

ಯುವ ಮೋರ್ಚಾ ನಗರ ಅಧ್ಯಕ್ಷ ಪರಶುರಾಮ, ಗ್ರಾಮಾಂತರ ಅಧ್ಯಕ್ಷ ಹರೀಶ್ ಮೂಡಳ್ಳಿ, ಬಿಜೆಪಿ ನಗರಾಧ್ಯಕ್ಷ ಗಣೇಶಪ್ರಸಾದ್, ಗ್ರಾಮಾಂತರ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಗ್ವೆ, ಜಿಲ್ಲಾ ಓಬಿಸಿ ಪ್ರಭಾರಿ ಕೆ.ಎಸ್.ಪ್ರಶಾಂತ್, ಯುವ ಮೋರ್ಚಾದ ಕಾರ್ಯದರ್ಶಿಗಳಾದ ವಿನಯ್ ಪೂಜಾರಿ, ಗುರುಪ್ರಸಾದ್, ಮುರಳಿ, ರಂಜಿತಾ ಡಿ, ಪ್ರಮುಖರಾದ ಸತೀಶ್ ಮೊಗವೀರ, ಸಂತೋಷ್ ರಾಯಲ್, ಮಧುರಾ ಶಿವಾನಂದ, ಕೃಷ್ಣ ಶೇಟ್, ರಾಜೇಂದ್ರ ಪೈ, ಪ್ರೇಮಾಸಿಂಗ್, ಶ್ರೀರಾಮ ಮತ್ತಿತರರು ಇದ್ದರು.