ವಶು ಚಾಂಪಿಯನ್‌ ಅನಿತಾ ಚವ್ಹಾಣಗೆ ಸನ್ಮಾನ

| Published : Oct 29 2024, 12:51 AM IST

ಸಾರಾಂಶ

ಅಂತಾರಾಷ್ಟ್ರೀಯ ವುಶು ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಪಡೆದ ಅನಿತಾ ಚವ್ಹಾಣಗೆ ಕರ್ನಾಟಕ ವುಶು ಸಂಸ್ಥೆ ಅಧ್ಯಕ್ಷ ಡಾ.ವೀರಣ್ಣ ಚರಂತಿಮಠ ಸೋಮವಾರ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಂತಾರಾಷ್ಟ್ರೀಯ ವುಶು ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಪಡೆದ ಅನಿತಾ ಚವ್ಹಾಣಗೆ ಕರ್ನಾಟಕ ವುಶು ಸಂಸ್ಥೆ ಅಧ್ಯಕ್ಷ ಡಾ.ವೀರಣ್ಣ ಚರಂತಿಮಠ ಸೋಮವಾರ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.

ಅಕ್ಟೋಬರ್ 17ರಿಂದ 23ವರೆಗೆ ಜಾರ್ಜಿಯಾ ದೇಶದ ಬಾಟೂಮಿಯಲ್ಲಿ ನಡೆದ ಅಂತಾರಾಷ್ಟ್ರೀಯ ವುಶು ಚಾಂಪಿಯನ್‌ ಶಿಪ್ ಕ್ರೀಡಾಕೂಟದಲ್ಲಿ 15 ದೇಶಗಳಿಂದ 1500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿಯಾಗಿದ್ದರು. ಭಾರತ ದೇಶದಿಂದ ಬಾಗಲಕೋಟೆ ಕುಮಾರಿ ಅನಿತಾ ಚವ್ಹಾಣ ಭಾಗಿಯಾಗಿ ಅತ್ಯುತ್ತಮ ಪ್ರದರ್ಶನ ನೀಡಿ ತಾವಲು ವಿಭಾಗದ ಕ್ವಾನ್ ಡೌ ದಲ್ಲಿ ಬಂಗಾರ ಪದಕ ಹಾಗೂ ನಾನ್ ಕ್ವಾನ್ ಟೈಪ್‌ನಲ್ಲಿ ಬೆಳ್ಳಿ ಪದಕ ಪಡೆದುಕೊಂಡು ಭಾರತ ದೇಶ ಹಾಗೂ ರಾಜ್ಯಕ್ಕೆ ಬಾಗಲಕೋಟೆ ಜಿಲ್ಲೆ ಹಾಗೂ ಕರ್ನಾಟಕ ವುಶು ಸಂಸ್ಥೆಗೆ ಕೀರ್ತಿತಂದಿದ್ದಾರೆ. ಸಂಘದ ಕಚೇರಿಯಲ್ಲಿ ರಾಜ್ಯ ವುಶು ಸಂಸ್ಥೆ ಅಧ್ಯಕ್ಷ ಡಾ.ವೀರಣ್ಣ ಚರಂತಿಮಠ ಸನ್ಮಾನಿಸಿ ಶುಭ ಹಾರೈಸಿ ಮತನಾಡಿ, ಕರ್ನಾಟಕ ರಾಜ್ಯ ವುಶು ಸಂಸ್ಥೆಗೆ ಹಮ್ಮೆಯ ವಿಷಯವಾಗಿದ್ದು, ವುಶು ಪ್ರಾರಂಭವಾಗಿ 37 ವರ್ಷವಾಗಿದೆ. ಈ ತರದ ಸಾಧನೆ ಮಾಡಿರುವುದು ಇದೇ ಪ್ರಥಮ, ಅದು ಮಹಿಳಾ ವಿಭಾಗ ಮತ್ತು ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಪ್ರತಿಭೆ ಸಾಧನೆ ಮಾಡಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ವುಶು ಸಂಸ್ಥೆ ಉಪಾಧ್ಯಕ್ಷರಾದ ಅಶೋಕ ಸಜ್ಜನ ಬೇವೂರ, ಕುಮಾರಸ್ವಾಮಿ ಹಿರೇಮಠ, ರಾಜು ನಾಯ್ಕರ, ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಶೋಕ ಮೋಖಾಶಿ, ಸಂಗಮೇಶ ಲಾಯದಗುಂದಿ, ಆರ್.ಎಮ್.ಹಿರೇಮಠ, ಅವಿನಾಶ ಹಿರೇಮಠ ಸೇರಿದಂತೆ ಅನೇಕರು ಇದ್ದರು.