ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಟೀಂ ಮೈಸೂರು ತಂಡದಿಂದ 2024- 24ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 80ಕ್ಕೂ ಹೆಚ್ಚು ಅಂಕಗಳನ್ನು ಪಡೆದು ತೇಗರ್ಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಇಟ್ಟಿಗೆಗೂಡಿನಲ್ಲಿರುವ ಮಾರಿಯಮ್ಮನ ಸಮುದಾಯ ಭವನದಲ್ಲಿ ಆಯೋಜಿಸಿತ್ತು.ಎಸ್ಸೆಸ್ಸೆಲ್ಸಿ 30, ಪಿಯುಸಿಯ 20 ವಿದ್ಯಾರ್ಥಿಗಳಿಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ ಅವರು ಮತ್ತು ಇತರೆ ಗಣ್ಯರು ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಶಾಸಕ ಶ್ರೀವತ್ಸ ಮಾತನಾಡಿ, ಪ್ರತಿಭೆಗೆ ಮನ್ನಣೆ ನೀಡುವ ಇಂತಹ ವಿಶಿಷ್ಟ ಸೇವಾ ಕಾರ್ಯವನ್ನು ಮತ್ತು ನಿಸ್ವಾರ್ಥ ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿರುವ ಟೀಂ ಮೈಸೂರಿನ ಕಾರ್ಯ ವೈಖರಿಗಳ ಬಗ್ಗೆ ಸಂತಸ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದರು.ಅತಿಥಿಗಳಾಗಿ ಪ್ರೊ. ಶ್ರೀಕಂಠಸ್ವಾಮಿ, ನಗರಪಾಲಿಕೆ ಮಾಜಿ ಸದಸ್ಯೆ ಛಾಯಾದೇವಿ, ಕಾಂಗ್ರೆಸ್ ಮುಖಂಡರಾದ ಫುಟ್ಬಾಲ್ ಮಂಜಣ್ಣ, ನಾಮ ನಿರ್ದೇಶಿತ ನಗರಪಾಲಿಕೆ ಮಾಜಿ ಸದಸ್ಯ ಆರ್.ಎಚ್. ಕುಮಾರ್, ಬಿಜೆಪಿ ಹಿರಿಯ ಮುಖಂಡರಾದ ಸುಂದರಮೂರ್ತಿ, ಕಾಂಗ್ರೆಸ್ ಮುಖಂಡರು ಧರ್ಮಕುಮಾರ್, ಬಿಜೆಪಿ ಮಹಿಳಾ ಮುಖಂಡರಾದ ಸುಗುಣ ಚಂದ್ರಶೇಖರ್, ಕಾರ್ಯಕ್ರಮದ ಸಂಯೋಜಕ ಗೋಕುಲ್ ಗೋವರ್ಧನ್, ಕಾರ್ಯಕ್ರಮದ ಸಹ ಸಂಯೋಜಕ ಹರೀಶ್, ಸಹಸಂಚಾಲಕರಾದ ಯಶ್ವಂತ್, ಕಿರಣ್ ಜೈ ರಾಮೆಗೌಡ, ಹಿರಿಯಣ್ಣ, ಅನಿಲ್ ಜೈನ್, ಮುರಳಿ, ರಾಮಪ್ರಸಾದ್, ದಾಮೋದರ್, ಮನೋಹರ, ಯತೀಶ್ , ಹರೀಶ್ ಶೆಟ್ಟಿ, ಅಮರ್, ಬಾಲಕೃಷ್ಣ, ಸುನಿಲ್, ಗಣೇಶ್, ಶೇಖರ್ , ಸಿ.ಎಸ್. ರಾಘವೇಂದ್ರ, ಕೆ. ಪರಮೇಶ, ಮೋಹನ್, ಸಚಿನ್, ಕೃಷ್ಣ, ರಘುಕಾಶಿ, ಮಂಜು, ಜಯಂತ್, ವೈಶಾಖ್ , ಶಿವಪ್ರಸಾದ್, ಸಹನಾ, ಶಾಂತಕುಮಾರಿ, ಮಂಜುಳಾ, ಉಮಾ ಹಿರಿಯಣ್ಣ, ಜ್ಯೋತಿ ರಾಮಪ್ರಸಾದ್ ಭಾಗವಹಿಸಿದ್ದರು.
ತಂಡದ ಸದಸ್ಯರಾದ ಪ್ರಸನ್ನ ರಾಜಗುರು ನಿರೂಪಿಸಿದರು.