ಹಿರಿಯ ನಟ ದ್ವಾರಕೀಶ್ ನಿಧನಕ್ಕೆ ತ್ರಿನೇತ್ರ ಸ್ವಾಮೀಜಿ ಸಂತಾಪ

| Published : Apr 17 2024, 01:23 AM IST

ಹಿರಿಯ ನಟ ದ್ವಾರಕೀಶ್ ನಿಧನಕ್ಕೆ ತ್ರಿನೇತ್ರ ಸ್ವಾಮೀಜಿ ಸಂತಾಪ
Share this Article
  • FB
  • TW
  • Linkdin
  • Email

ಸಾರಾಂಶ

ದಿ.ದ್ವಾರಕೀಶ್ ಶ್ರೀಮಠದೊಂದಿಗೆ ಆತ್ಮೀಯ ಬಾಂಧವ್ಯವಿತ್ತು. ಆಪ್ತಮಿತ್ರ ಸಿನಿಮಾಗೆ ಶ.ಪ.ಪೂ.ಲಿಂ.ಶ್ರೀಮರಿದೇವರು ಶಿವಯೋಗಿ ಮಹಾಸ್ವಾಮಿಗಳವರ ಆಶೀರ್ವಾದವಾಗಿತ್ತು. 2005ರಲ್ಲಿ ಹಿರಿಯ ಶ್ರೀಗಳವರ ಜನ್ಮದಿನೋತ್ಸವಕ್ಕೆ ಬೇಬಿಮಠಕ್ಕೆ ಆಗಮಿಸಿದ್ದರು. ಚಿತ್ರರಂಗದಲ್ಲಿ ಹಲವು ದಿಗ್ಗಜ ನಟರುಗಳ ಜೊತೆ ನಟಿಸಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಹಿರಿಯ ನಟ, ಚಿತ್ರ ನಿರ್ಮಾಪಕ ದ್ವಾರಕೀಶ್ ನಿಧನಕ್ಕೆ ಚಂದ್ರವನ ಆಶ್ರಮದ ಪೀಠಾಧ್ಯಕ್ಷ ಶ್ರೀತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಸಂತಾಪ ಸೂಚಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ದಿ.ದ್ವಾರಕೀಶ್ ಶ್ರೀಮಠದೊಂದಿಗೆ ಆತ್ಮೀಯ ಬಾಂಧವ್ಯವಿತ್ತು. ಆಪ್ತಮಿತ್ರ ಸಿನಿಮಾಗೆ ಶ.ಪ.ಪೂ.ಲಿಂ.ಶ್ರೀಮರಿದೇವರು ಶಿವಯೋಗಿ ಮಹಾಸ್ವಾಮಿಗಳವರ ಆಶೀರ್ವಾದವಾಗಿತ್ತು. 2005ರಲ್ಲಿ ಹಿರಿಯ ಶ್ರೀಗಳವರ ಜನ್ಮದಿನೋತ್ಸವಕ್ಕೆ ಬೇಬಿಮಠಕ್ಕೆ ಆಗಮಿಸಿದ್ದರು.

ಚಿತ್ರರಂಗದಲ್ಲಿ ಹಲವು ದಿಗ್ಗಜ ನಟರುಗಳ ಜೊತೆ ನಟಿಸಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದರು. ಅವರು ನಿರ್ದೇಶನ, ನಿರ್ಮಾಪಕರಾಗಿ, ನಟರಾಗಿ ’ಸಕಲಕಲಾವಲ್ಲಭ’ ಎಂಬ ಕೀರ್ತಿಯನ್ನು ಗಳಿಸಿದ್ದರು. ಇಂತಹ ರತ್ನವನ್ನು ಕಳೆದುಕೊಂಡಿದ್ದು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದು, ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.ದ್ವಾರಕೀಶ್ ನಿಧನಕ್ಕೆ ಸ್ಟಾರ್ ಚಂದ್ರು ಸಂತಾಪಮದ್ದೂರು:ಕನ್ನಡ ಚಿತ್ರರಂಗದ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರ ನಿಧನಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಸಂತಾಪ ವ್ಯಕ್ತಪಡಿಸಿದ್ದಾರೆ.

ವರನಟ ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಕನ್ನಡ ಚಿತ್ರರಂಗದ ಎಲ್ಲಾ ದಿಗ್ಗಜರೊಂದಿಗೆ ನಟಿಸುವುದರ ಜೊತೆಗೆ ಕನ್ನಡಕ್ಕೆ ಅತ್ಯುತ್ತಮ ಚಿತ್ರಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಒಬ್ಬರು ಎಂದು ತಿಳಿಸಿದ್ದಾರೆ.ನೂರಾರು ಚಿತ್ರಗಳಲ್ಲಿ ನಟಿಸಿ ಜನಮನ ಗೆದ್ದಿದ್ದ ದ್ವಾರಕೀಶ್ ಅವರ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಡ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬವರ್ಗದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸಂತಾಪ ವ್ಯಕ್ತಪಡಿಸಿದರು.