ತ್ರಿಷಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಸಂಸ್ಥೆಯ 28ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಸಮಾರಂಭ ಸೋಮವಾರ ನಗರದ ಬಲ್ಮಠದ ಡಾನ್ ಬಾಸ್ಕೊ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು: ತ್ರಿಷಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಸಂಸ್ಥೆಯ 28ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಸಮಾರಂಭ ಸೋಮವಾರ ನಗರದ ಬಲ್ಮಠದ ಡಾನ್ ಬಾಸ್ಕೊ ಸಭಾಂಗಣದಲ್ಲಿ ನಡೆಯಿತು.ಸಂಸ್ಥೆಯ ಸಂಸ್ಥಾಪಕ ಸಿಎ ಗೋಪಾಲ ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಪಂಚದಲ್ಲಿ ಇರುವವರಲ್ಲಿ ಕೆಲವರು ಮಾತ್ರ ಪ್ರಪಂಚದ ನಕ್ಷೆಯನ್ನೇ ಬದಲಾಯಿಸುತ್ತಾರೆ. ಒಬ್ಬ ಗೋಪಾಲ್ ಒಂದು ಸಂಸ್ಥೆಯನ್ನು ಮಾಡಿದ್ದಾರೆ ಎಂದಾದರೆ ನೆರೆದಿರುವ ಎಲ್ಲ ವಿದ್ಯಾರ್ಥಿಗಳು ಇಂತಹ ಸಾವಿರಾರು ಸಂಸ್ಥೆಯನ್ನು ಕಟ್ಟಬಹುದು ಎಂದರು.ತ್ರಿಷಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್‌ನ ಶೈಕ್ಷಣಿಕ ಸಲಹೆಗಾರ ಡಾ.ನಾರಾಯಣ ಕಾಯರ್ಕಟ್ಟೆ ಗೌರವ ಅತಿಥಿಯಾಗಿದ್ದರು. ತ್ರಿಷಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಯಶಸ್ವಿನಿ ಯಶ್‌ಪಾಲ್, ಶಿಕ್ಷಕ ಮುಕುಂದ್ ಮಾಸ್ಟರ್ ಮತ್ತಿತರರು ಇದ್ದರು.
ಸಾಧಕರಿಗೆ ಸನ್ಮಾನ:ವಿವಿಧ ಕ್ಷೇತ್ರಗಳ ಸಾಧಕ ಗಣ್ಯರಾದ ಶಿಕ್ಷಣ ಕ್ಷೇತ್ರದ ಎಸ್‌ಡಿಎಂ ಕಾಲೇಜು - ಎಂಬಿಎ ಮಂಗಳೂರಿನ ಮಾಜಿ ನಿರ್ದೇಶಕ ಡಾ.ದೇವರಾಜ್ ಕೆ., ಕೈಗಾರಿಕಾ ಕ್ಷೇತ್ರದ ಕೆಸಿಸಿಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೈತ್ರೇಯ ಎ., ಯಕ್ಷಗಾನ ಕ್ಷೇತ್ರದ ಯಕ್ಷಗುರು ರಾಕೇಶ್ ರೈ ಅಡ್ಕ, ವೈದ್ಯಕೀಯ ಕ್ಷೇತ್ರದ ಡಾ.ಮಧುಸೂದನ್ ಇ., ಕ್ರೀಡಾ ಕ್ಷೇತ್ರದ ಅಂತಾರಾಷ್ಟ್ರೀಯ ಅಥ್ಲೀಟ್ ಶ್ರೀಮಾ ಪ್ರಿಯದರ್ಶಿನಿ, ಸಮಾಜ ಸೇವಾ ಕ್ಷೇತ್ರದ ಮಾರುತಿ ಜನಸೇವಾ ಸಂಘ ಉಳ್ಳಾಲದ ಅಧ್ಯಕ್ಷ ಅನಿಲ್ ಚರಣ್, ರೆಡ್‌ಕ್ರಾಸ್ ಸೇವೆಗಾಗಿ ಸಿಎ ಶಾಂತಾರಾಮ ಶೆಟ್ಟಿ, ಸೇನಾ ಕ್ಷೇತ್ರದ ಭಾರತೀಯ ನೌಕಾಪಡೆಯ ಮಾಜಿ ಮುಖ್ಯ ತಾಂತ್ರಿಕ ಅಧಿಕಾರಿ ವಿಕ್ರಮದತ್ತ, ಚಿತ್ರರಂಗ ಕ್ಷೇತ್ರದ ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದೆ ರೂಪಾ ವರ್ಕಾಡಿ, ಮಾಧ್ಯಮ ಕ್ಷೇತ್ರದ ನಮ್ಮ ಕುಡ್ಲದ ಸಿಒಒ ಕದ್ರಿ ನವನೀತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಗೌರವ ಅತಿಥಿ ಡಾ.ನಾರಾಯಣ ಕಾಯರ್ಕಟ್ಟೆ, ಸಿದ್ಧಾಂತ್ ಫೌಂಡೇಶನ್ ಟ್ರಸ್ಟಿ ಶ್ರೀರಾಮ್ ಪ್ರಭು, ಸಂಸ್ಥೆಯ ಸಂಸ್ಥಾಪಕ ಸಿ.ಎ.ಗೋಪಾಲಕೃಷ್ಣ ಭಟ್ ಹಾಗೂ ನಮಿತಾ ಜಿ. ಭಟ್ ಅವರನ್ನು ಸನ್ಮಾನಿಸಲಾಯಿತು.ತ್ರಿಷಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಮಂಜುನಾಥ ಕಾಮತ್ ಸ್ವಾಗತಿಸಿದರು. ತ್ರಿಷಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಸುಪ್ರಭಾ ಎಂ. ವಂದಿಸಿದರು.