ತಾಲೂಕಿನ ದ್ಯಾಪಸಂದ್ರ ರಸ್ತೆಯಲ್ಲಿ ಅದಾನಿ ಲಾಜಿಸ್ಟಿಕ್ನಲ್ಲಿ ಗೋಧಿ ಸಾಕಾಣಿಕೆ ಕೇಂದ್ರಕ್ಕೆ ಪ್ರತಿನಿತ್ಯ ಟ್ರಕ್ ಹಾಗೂ ಲಾರಿಗಳು ಬರುತ್ತವೆ.
ಮಾಲೂರು: ಅದಾನಿ ಲಾಜಿಸ್ಟೀಕ್ಗೆ ಹೋಗುತ್ತಿದ್ದ ಟಾಟಾ ಟ್ರಕ್ ವಾಹನ ಅಡ್ಡಗಟ್ಟಿ ಮಾರಕಸ್ತ್ರಗಳಿಂದ ಟ್ರಕ್ಕಿನ ಚಾಲಕನನ್ನು ಹಲ್ಲೇ ಮಾಡಿ ಸುಮಾರು ೧೫೦೦೦ ಹಣ ದೋಚಿಕೊಂಡು ಪರಾರಿಯಾಗಿದ್ದ ಇಬ್ಬರ ಆರೋಪಿಗಳ ಪೈಕಿ ಒಬ್ಬನನ್ನು ನಗರದ ಪೊಲೀಸರು ಬಂಧಿಸಿ ಬಂಧಿತನಿಂದ ನಗದು ಸಾವಿರ ಹಣ ಹಾಗೂ ಮಾರಕಸ್ತ್ರಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿಯನ್ನು ತಾಲೂಕಿನ ಸಿ ಉಪ್ಪಾರಹಳ್ಳಿ ಗ್ರಾಮದ ಆನಂದ್ ಎಂದು ಗುರುತಿಸಲಾಗಿದೆ.ತಾಲೂಕಿನ ದ್ಯಾಪಸಂದ್ರ ರಸ್ತೆಯಲ್ಲಿ ಅದಾನಿ ಲಾಜಿಸ್ಟಿಕ್ನಲ್ಲಿ ಗೋಧಿ ಸಾಕಾಣಿಕೆ ಕೇಂದ್ರಕ್ಕೆ ಪ್ರತಿನಿತ್ಯ ಟ್ರಕ್ ಹಾಗೂ ಲಾರಿಗಳು ಬರುತ್ತವೆ. ಇದನ್ನು ಗಮನಿಸಿದ ಆರೋಪಿಗಳು ದ್ವಿಚಕ್ರ ವಾಹನ ಮೂಲಕ ಬಂದು ಲಾರಿಯನ್ನು ಅಡ್ಡಗಟ್ಟಿ ಚಾಲಕ ಶಾಂತೇಶ ಮೇಲೆ ಮಾರಕಸ್ತ್ರದಿಂದ ಹಲ್ಲೆ ನಡೆಸಿ ಚಾಲಕನ ಬಳಿ ಇದ್ದ ೧೫೦೦೦ ನಗದು ದೋಚಿಕೊಂಡು ಪರಾರಿಯಾಗಿದ್ದರು.
ಚಾಲಕ ನೀಡಿದ ದೂರಿನ ಮೇರೆಗೆ ನಗರದ ಪೊಲೀಸರು ಪಿ ಐ ರಾಮಪ್ಪ ಗುತ್ತೇರ ಮಾರ್ಗದರ್ಶನದಲ್ಲಿ ಆರೋಪಿ ಆನಂದನನ್ನು ಬಂಧಿಸಿ ಬಂಧಿತ ಆರೋಪಿಯಿಂದ ಕೃತ್ಯಕ್ಕೆ ಬಳಿಸಿದ ಲಾಂಗ್, ದ್ವಿಚಕ್ರ ವಾಹನ ಹಾಗೂ ನಗದು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಯನ್ನು ಬಂಧಿಸಲು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಸಿಬ್ಬಂದಿಯನ್ನು ಎಸ್ ಪಿ ಕನ್ನಿಕಾ ಸಿಕ್ರಿವಾಲ್, ಎಎಸ್ಪಿ ಡಿವೈಎಸ್ಪಿ ಶ್ಲಾಘಿಸಿದ್ದಾರೆ.