ಕಾಗಿನೆಲೆ ಶ್ರೀಗಳ ಬಗ್ಗೆ ಎಚ್.ವಿಶ್ವನಾಥ್ ಹೇಳಿಕೆಗೆ ಟ್ರಸ್ಟಿ ಶಿವಣ್ಣನವರ ಖಂಡನೆ

| Published : Oct 03 2025, 01:07 AM IST

ಕಾಗಿನೆಲೆ ಶ್ರೀಗಳ ಬಗ್ಗೆ ಎಚ್.ವಿಶ್ವನಾಥ್ ಹೇಳಿಕೆಗೆ ಟ್ರಸ್ಟಿ ಶಿವಣ್ಣನವರ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಗಿನೆಲೆ ಪೀಠದ ಶ್ರೀಗಳು ಸಿಎಂ ಸಿದ್ದರಾಮಯ್ಯ ಅವರ ಪರ ವಕಾಲತ್ತು ವಹಿಸಿ ಬೀದಿಗಿಳಿದರೆ ಶ್ರೀಗಳ ತಲೆದಂಡವಾಗುತ್ತದೆ ಎಂದು ಎಂಎಲ್‌ಸಿ ಎಚ್.ವಿಶ್ವನಾಥ ಹೇಳಿಕೆ ನೀಡಿರುವುದು ಖಂಡನೀಯ. ಈ ಕೂಡಲೇ ಎಚ್.ವಿಶ್ವನಾಥ ಶ್ರೀಗಳ ಕ್ಷಮೆ ಯಾಚಿಸಬೇಕು ಎಂದು ಬ್ಯಾಡಗಿ ಶಾಸಕ ಹಾಗೂ ಕನಕಗುರು ಪೀಠದ ಟ್ರಸ್ಟಿ ಬಸವರಾಜ ಶಿವಣ್ಣನವರ ಆಗ್ರಹಿಸಿದರು.

ಹಾವೇರಿ: ಕಾಗಿನೆಲೆ ಪೀಠದ ಶ್ರೀಗಳು ಸಿಎಂ ಸಿದ್ದರಾಮಯ್ಯ ಅವರ ಪರ ವಕಾಲತ್ತು ವಹಿಸಿ ಬೀದಿಗಿಳಿದರೆ ಶ್ರೀಗಳ ತಲೆದಂಡವಾಗುತ್ತದೆ ಎಂದು ಎಂಎಲ್‌ಸಿ ಎಚ್.ವಿಶ್ವನಾಥ ಹೇಳಿಕೆ ನೀಡಿರುವುದು ಖಂಡನೀಯ. ಈ ಕೂಡಲೇ ಎಚ್.ವಿಶ್ವನಾಥ ಶ್ರೀಗಳ ಕ್ಷಮೆ ಯಾಚಿಸಬೇಕು ಎಂದು ಬ್ಯಾಡಗಿ ಶಾಸಕ ಹಾಗೂ ಕನಕಗುರು ಪೀಠದ ಟ್ರಸ್ಟಿ ಬಸವರಾಜ ಶಿವಣ್ಣನವರ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಗಿನೆಲೆ ಕನಕ ಗುರುಪೀಠವನ್ನು ರಾಜ್ಯದ ಸಮಸ್ತ ಕುರುಬ ಸಮಾಜ ಸೇರಿ 1992ರಲ್ಲಿ ಸ್ಥಾಪಿಸಿದೆ. ಈಗಿನ ಜಗದ್ಗುರು ನಿರಂಜನಾನಂದಪುರಿ ಶ್ರೀಗಳು ಕುರುಬ ಸಮಾಜದ ಏಳಿಗೆಗೆ ಶ್ರಮಿಸುತ್ತಾ ಬಂದಿದ್ದು, ಉತ್ತಮವಾಗಿ ಸಮಾಜ ಸಂಘಟನೆ ಮಾಡಿದ್ದಾರೆ. ರಾಜ್ಯದ ವಿವಿಧ ಕಡೆಗಳಲ್ಲಿ ಶಾಖಾಮಠಗಳನ್ನು ಸ್ಥಾಪಿಸುವ ಮೂಲಕ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಐಎಎಸ್, ಕೆಎಎಎಸ್ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಇಂತವರ ಬಗ್ಗೆ ಮಾಜಿ ಸಚಿವರೂ ಆದ ಎಂಎಲ್‌ಸಿ ಎಚ್.ವಿಶ್ವನಾಥ ಅವರು ಸೆ.16ರಂದು ಸ್ವಾಮೀಜಿ ಅವರನ್ನು ಮಠದಿಂದ ಕಿತ್ತು ಹಾಕಲಾಗುವುದು ಎಂದು ಹೇಳಿದ್ದಾರೆ. ಮಠದಿಂದ ಶ್ರೀಗಳನ್ನು ಕಿತ್ತುಹಾಕಲು ವಿಶ್ವನಾಥ ಯಾರು? ಎಂದು ಖಾರವಾಗಿ ಪ್ರಶ್ನಿಸಿದರು.ಸಿಎಂ ಸಿದ್ದರಾಮಯ್ಯ ಅವರ ಬಗ್ಗೆಯೂ ಎಚ್.ವಿಶ್ವನಾಥ ಹಗುರವಾಗಿ ಮಾತನಾಡಿದ್ದು, ಸಿದ್ದರಾಮಯ್ಯ ಅವರು ಎರಡನೆ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಅವರ ಆಡಳಿತವನ್ನು ರಾಜ್ಯದ ಸರ್ವಜನಾಂಗವೇ ಒಪ್ಪಿಕೊಂಡಿದೆ. ಎಲ್ಲರೂ ಅವರನ್ನು ಗೌರವಿಸುತ್ತಾರೆ. ಅವರ ಬಗ್ಗೆ ವಿಶ್ವನಾಥ ಆಡಿರುವ ಗರ್ವದ ಮಾತುಗಳನ್ನು ಸಮಾಜ ಒಪ್ಪುವುದಿಲ್ಲ. ವಿಶ್ವನಾಥ ಈ ಕೂಡಲೇ ಮುಖ್ಯಮಂತ್ರಿಗಳ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಅವರ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದರು.ಗೌರವ ಉಳಿಸಿಕೊಳ್ಳಿ: ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ರಾಜಕೀಯವಾಗಿ ರಾಜಕಾರಣಿಗಳು ಸಹಾಯ, ಸಹಕಾರ ನೀಡುವುದಷ್ಟೆ ನಮ್ಮ ಕೆಲಸ. ಮಠ ಬೆಳೆಯಲು ರಾಜಕೀಯ ಬೇಕೇ ಹೊರತು ಮಠದಲ್ಲಿ ರಾಜಕೀಯ ಬರಬಾರದು. ಗುರುಗಳ ಬಗ್ಗೆ ಅಗೌರವದಿಂದ ಮಾತನಾಡುವ ಮೂಲಕ ಎಚ್.ವಿಶ್ವನಾಥ ಅವರು ತಪ್ಪಾಗಿ ಮಾತನಾಡಿದ್ದಾರೆ. ಮಠ ಸ್ಥಾಪಿಸುವ ವೇಳೆ ವಿಶ್ವನಾಥ ಅವರನ್ನು ಸಮಾಜ ಅಧ್ಯಕ್ಷರನ್ನಾಗಿ ಆಯ್ಕೆಮಾಡಿತ್ತು. ಈಗಾಗಲೇ ವಿಶ್ವನಾಥರಿಗೆ ವಯಸ್ಸಾಗಿದೆ. ಇರುವಷ್ಟು ದಿನ ಗೌರವ ಉಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಮಠದ ಟ್ರಸ್ಟಿ ಎಸ್.ಎಫ್.ಎನ್.ಗಾಜಿಗೌಡ್ರ ಮಾತನಾಡಿ, ಕುರುಬ ಸಮಾಜದ ಅಭಿವೃದ್ಧಿ ದೃಷ್ಟಿಯಿಂದ 1992ರಲ್ಲಿ ಕನಕದಾಸರ ಕರ್ಮಭೂಮಿ ಕಾಗಿನೆಲೆಯಲ್ಲಿ 7 ಎಕರೆ ಜಮೀನು ಪಡೆದು ಕುರುಬ ಜನಾಂಗಕ್ಕೆ ಮಠ ಬೇಕೆಂದು ಕಟ್ಟಿದ್ದೇವೆ. ಹರ್ತಿಕೋಟೆಯ ನಿರಂಜನಾಂದಪುರಿ ಸೇರಿದಂತೆ ನಾಲ್ವರು ಮಠಾಧೀಶರು ಕುರುಬ ಸಮಾಜಕ್ಕೆ ದೇವರು ಸಿಕ್ಕಂತೆ ಸಿಕ್ಕಿದ್ದಾರೆ. ನಿರಂಜನಾನಂದಪುರಿ ಶ್ರೀಗಳು ಬೆಳ್ಳೊಡಿಯಲ್ಲಿ ಮಠ, ಮೈಲಾರ, ಬೆಂಗಳೂರಲ್ಲಿ ನೂರಾರು ಕೋಟಿ ಬೆಲೆಬಾಳುವ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಮಾಜವನ್ನು ಮುನ್ನಡೆಸಿದ್ದಾರೆ. ಅವರ ಬಗ್ಗೆ ರಾಜಕೀಯ ತಿಕ್ಕಾಟದಿಂದ ವಿಶ್ವನಾಥ ಹಗುರವಾದ ಮಾತುಗಳನ್ನಾಡಿರುವುದು ತಪ್ಪ್ಪು, ಸ್ವಾಮಿಗಳು ರಾಜಕೀಯಕ್ಕೆ ಹೋದವರಲ್ಲ, ಅವರನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಈ ಕೂಡಲೇ ವಿಶ್ವನಾಥ ತಮ್ಮ ಮಾತು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಜೇಂದ್ರ ಹಾವೇರಣ್ಣವರ, ಶಂಕ್ರಣ್ಣ ಮಾತನವರ, ಎಂ.ಎ. ಗಾಜೀಗೌಡ್ರ, ಆನಂದ ಹುಲಬನ್ನಿ, ಚಿಕ್ಕಣ್ಣ ಹಾದಿಮನಿ, ಹನುಮಂತಪ್ಪ ಕಂಬಳಿ, ಯಶವಂತ ಯಡಗೋಡಿ ಸೇರಿದಂತೆ ಇತರರು ಇದ್ದರು.