ಸಾರಾಂಶ
ಚಿಕ್ಕಮಗಳೂರು, ಮಹಿಳಾ ದೌರ್ಜನ್ಯ ಮುಕ್ತ ವಿಶ್ವವಾಗಿಸಲು ಇನ್ನರ್‌ವ್ಹೀಲ್ ಕ್ಲಬ್ ಶ್ರಮಿಸುತ್ತಿದೆ ಎಂದು ಜಿಲ್ಲಾ ಛೇರ್‍ಮನ್ ವೈಶಾಲಿ ಕುಡ್ವ ಹೇಳಿದರು.ಇನ್ನರ್‌ವ್ಹೀಲ್ ಕ್ಲಬ್ ಆಫ್ ಚಿಕ್ಕಮಗಳೂರಿಗೆ ಎರಡು ದಿನಗಳ ಅಧಿಕೃತ ಭೇಟಿ ನೀಡಿರುವ ಅವರು, ಕದ್ರಿಮಿದ್ರಿಯ ಜೀವನ ಸಂಧ್ಯಾ ವೃದ್ಧಾಶ್ರಮದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ಇನ್ನರ್‌ವ್ಹೀಲ್ ಕ್ಲಬ್‌ಗೆ ಜಿಲ್ಲಾ ಛೇರ್‍ಮನ್ ಅಧಿಕೃತ ಭೇಟಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಹಿಳಾ ದೌರ್ಜನ್ಯ ಮುಕ್ತ ವಿಶ್ವವಾಗಿಸಲು ಇನ್ನರ್‌ವ್ಹೀಲ್ ಕ್ಲಬ್ ಶ್ರಮಿಸುತ್ತಿದೆ ಎಂದು ಜಿಲ್ಲಾ ಛೇರ್‍ಮನ್ ವೈಶಾಲಿ ಕುಡ್ವ ಹೇಳಿದರು.
ಇನ್ನರ್‌ವ್ಹೀಲ್ ಕ್ಲಬ್ ಆಫ್ ಚಿಕ್ಕಮಗಳೂರಿಗೆ ಎರಡು ದಿನಗಳ ಅಧಿಕೃತ ಭೇಟಿ ನೀಡಿರುವ ಅವರು, ಕದ್ರಿಮಿದ್ರಿಯ ಜೀವನ ಸಂಧ್ಯಾ ವೃದ್ಧಾಶ್ರಮದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.ಮಹಿಳೆಯರ ಸ್ವಾವಲಂಬನೆ, ಸುರಕ್ಷತೆ, ಸೇವೆ, ನಾಯಕತ್ವ ಸೇರಿದಂತೆ ಸರ್ವಾಂಗೀಣ ವಿಕಾಸಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್‍ಯಪ್ರವೃತ್ತವಾಗಿರುವ ಸಂಸ್ಥೆ ಇನ್ನರ್‌ವ್ಹೀಲ್. ’ಮಾನವೀಯತೆ ಮಿಡಿತ’ ಇದರ ಆಶಯ. ಸೇವೆ ಮಾಡಲು, ದೇಣಿಗೆ ಕೊಡಲು ಸಿರಿವಂತಿಕೆ ಇದ್ದರೆ ಸಾಲದು, ಮನಸ್ಸು ಮುಖ್ಯ. ಇಂತಹ ಸದ್ಗುಣಗಳ ಮನಸ್ಸು ಕಟ್ಟಲು ಇಲ್ಲಿ ವಿಫುಲ ಅವಕಾಶಗಳಿವೆ ಎಂದರು.ಕೊಲ್ಕತ್ತಾ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಪೈಶಾಚಿಕ ಕೃತ್ಯ ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿವೆ. ಚಿಕ್ಕಮಗಳೂರಿನಲ್ಲಿ ಇನ್ನರ್‌ವ್ಹೀಲ್ ನೇತೃತ್ವದಲ್ಲಿ ನಡೆದ ಮೌನ ಮೆರವಣಿಗೆ ಬಹುಶಃ ರಾಜ್ಯದಲ್ಲೆ ಅತಿದೊಡ್ಡ ಪ್ರಮಾಣ ದಾಗಿತ್ತು ಎಂದು ಅಭಿನಂದಿಸಿದ ವೈಶಾಲಿ, ಆದರೆ ಇದಿಷ್ಟೇ ಸಾಕೆ ಎಂದು ಪ್ರಶ್ನಿಸಿ ಅತ್ಯಾಚಾರ ದೌರ್ಜನ್ಯ ಪ್ರತಿರೋಧಿಸುವ ಶಕ್ತಿಯನ್ನು ಹೆಣ್ಣು ಮಕ್ಕಳಲ್ಲಿ ಹೆಚ್ಚಿಸುವುದು ಅಗತ್ಯ. ಆತ್ಮರಕ್ಷಣೆ ತರಬೇತಿ ನೀಡಬೇಕು ಎಂದರು.
ಹದಿ ವಯಸ್ಸಿನ ಯುವಕ, ಯುವತಿಯರಲ್ಲಿ ಜಾಗೃತಿ ಮೂಡಿಸುವುದು ಪರಿಣಾಮಕಾರಿ. ಅವರ ದೇಹ ಮತ್ತು ಮನಸ್ಸಿನಲ್ಲಿ ಆಗುವ ಬದಲಾವಣೆ ಹಾರ್ಮೋನುಗಳಲ್ಲಿನ ವ್ಯತ್ಯಾಸ, ಬೌದ್ಧಿಕ ತಳಮಳ ಅರ್ಥೈಸುವ ಕಾರ್‍ಯ ಆಗಬೇಕು. ಸರಿ ತಪ್ಪುಗಳ ತಿಳುವಳಿಕೆ ಮನವರಿಕೆ ಮಾಡಲು ಇನ್ನರ್‌ವ್ಹೀಲ್ ಸದಸ್ಯರು ಕಾರ್‍ಯಕ್ರಮ ರೂಪಿಸಬೇಕೆಂದು ಸಲಹೆ ಮಾಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಶಾಲಿನಿ ನಾಗೇಶ್ ಮಾತನಾಡಿ, ಮಹಿಳಾ ದೌರ್ಜನ್ಯದ ವಿರುದ್ಧ ಕ್ಲಬ್ ಸದಾ ಕಾರ್‍ಯಪ್ರವೃತ್ತವಾಗಿದೆ. ಹತ್ತಾರು ಸಂಘ ಸಂಸ್ಥೆಗಳನ್ನು ಜೊತೆಗೂಡಿಸಿ ಐತಿಹಾಸಿಕ ರ್‍ಯಾಲಿ ಗಮನ ಸೆಳೆದಿದೆ. ಸದಸ್ಯರ ಪ್ರತಿಭೆ ಅನಾವರಣಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದರು.ದಿವ್ಯಾ ಪ್ರವೀಣ್ ಪ್ರಾರ್ಥಿಸಿ, ಶಾಲಿನಿ ಸ್ವಾಗತಿಸಿ, ದಿವ್ಯಾ ಮಿಥುನ್ ಸಂದೇಶ ವಾಚಿಸಿದರು. ಖಜಾಂಚಿ ಶರ್ಮಿಳಾ ಶಶಿಧರ್ ವರದಿ ಮಂಡಿಸಿದ್ದು, ಉಪಾಧ್ಯಕ್ಷೆ ನಯನಾ ಸಂತೋಷ್ ವಂದಿಸಿದರು. ಸೌನಲ್ಯ ನಟರಾಜ್ ಅತಿಥಿಗಳನ್ನು ಪರಿಚಯಿ ಸಿದರು.
14 ಕೆಸಿಕೆಎಂ 1ಚಿಕ್ಕಮಗಳೂರಿನ ಕದ್ರಿಮಿದ್ರಿಯ ಜೀವನಸಂಧ್ಯಾ ವೃದ್ಧಾಶ್ರಮದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಜಿಲ್ಲಾ ಛೇರ್‍ಮನ್ ವೈಶಾಲಿ ಕುಡ್ವ ಅವರನ್ನು ಗೌರವಿಸಲಾಯಿತು. ಕ್ಲಬ್ ಅಧ್ಯಕ್ಷೆ ಶಾಲಿನಿ ನಾಗೇಶ್, ನಿಕಟಪೂರ್ವ ಅಧ್ಯಕ್ಷೆ ದಿವ್ಯಾ ವಿಕ್ರಮ್ ಇದ್ದರು.