ಬೀದಿಬದಿ ವ್ಯಾಪಾರಸ್ಥರಿಗೆ ನಿವೇಶನ ಕೊಡಿಸಲು ಯತ್ನಿಸುವೆ: ಶಾಸಕ ಶಾಂತನಗೌಡ

| Published : Jan 08 2024, 01:45 AM IST

ಬೀದಿಬದಿ ವ್ಯಾಪಾರಸ್ಥರಿಗೆ ನಿವೇಶನ ಕೊಡಿಸಲು ಯತ್ನಿಸುವೆ: ಶಾಸಕ ಶಾಂತನಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಕಚೇರಿವರೆಗೆ ರಸ್ತೆ ಇಕ್ಕಟ್ಟು ಇರುವುದರಿಂದ ಮತ್ತು ದ್ವಿಚಕ್ರ ವಾಹನಗಳು ಹೆಚ್ಚು ರಸ್ತೆ ಬದಿಯಲ್ಲಿ ನಿಲ್ಲುವುದರಿಂದ ಟ್ರಾಫಿಕ್ ಹೆಚ್ಚುತ್ತಿದ್ದು ಬೀದಿ ಬದಿ ವ್ಯಾಪಾರಸ್ಥರ ವ್ಯವಹಾರಕ್ಕೆ ತೊಂದರೆಯಾಗುತ್ತಿದೆ.

ಅವಳಿ ತಾಲೂಕುಗಳ ಬೀದಿಬದಿ ವ್ಯಾಪಾರಸ್ಥರ ಸಂಘದ ಸಮಾವೇಶದಲ್ಲಿ ಭರವಸೆ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಬೀದಿಬದಿ ವ್ಯಾಪಾರಸ್ಥರಿಗೆ ನಿವೇಶನ ಸೇರಿದಂತೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಪಟ್ಟಣದ ಕನಕ ರಂಗಮಂದಿರದಲ್ಲಿ ಸುವರ್ಣ ಕರ್ನಾಟಕ ವರ್ಷಾಚರಣೆ ಪ್ರಯುಕ್ತ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಬೀದಿಬದಿ ವ್ಯಾಪಾರಸ್ಥರ ಸಂಘದ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಕಚೇರಿವರೆಗೆ ರಸ್ತೆ ಇಕ್ಕಟ್ಟು ಇರುವುದರಿಂದ ಮತ್ತು ದ್ವಿಚಕ್ರ ವಾಹನಗಳು ಹೆಚ್ಚು ರಸ್ತೆ ಬದಿಯಲ್ಲಿ ನಿಲ್ಲುವುದರಿಂದ ಟ್ರಾಫಿಕ್ ಹೆಚ್ಚುತ್ತಿದ್ದು ಬೀದಿ ಬದಿ ವ್ಯಾಪಾರಸ್ಥರ ವ್ಯವಹಾರಕ್ಕೆ ತೊಂದರೆಯಾಗುತ್ತಿದೆ ಪಟ್ಟಣದ ಅಗಳ ಮೈದಾನದಲ್ಲಿ ಎಲ್ಲಾ ದ್ವಿ ಚಕ್ರವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದರೆ ವ್ಯಾಪಾರಸ್ಥರು ಸುಗಮವಾಗಿ ವಹಿವಾಟು ಮಾಡಬಹುದು ಎಂದರು. ಪುರಸಭೆಯಲ್ಲಿ ಆಡಳಿತ ಮಂಡಳಿ ಸಮಿತಿ ರಚನೆಯಾದ ನಂತರ ಸಭೆ ನಡೆಸಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಸರ್ಕಾರದ ಜಾಗ ಗುರುತಿಸಿ ಯೋಧರಿಗೆ, ಪತ್ರಕರ್ತರಿಗೆ ಬೀದಿಬದಿ ವ್ಯಾಪಾಸ್ಥರಿಗೆ ನಿವೇಶನ ಕೊಡಿಸುವುದಾಗಿ ಭರವಸೆ ನೀಡಿದರು.

ಪಿಎಂ ಯೋಜನೆಯಿಂದ ಬೀದಿಬದಿ ವ್ಯಾಪಾರಸ್ಥರು ಮತ್ತು ಪ್ರತಿಯೊಬ್ಬ ಸಾರ್ವಜನಿಕರು ವರ್ಷಕ್ಕೆ 20 ರು.ಗಳ ಕಟ್ಟಿ ವಿಮೆ ಮಾಡಿಸಿದರೆ ಆಕಸ್ಮಿಕ ಅಥವಾ ಅಪಘಾತದಲ್ಲಿ ಮರಣ ಹೊಂದಿದರೆ 2 ಲಕ್ಷ ರು. ವಿಮೆ ಬರುತ್ತದೆ ಇದರಿಂದ ಅವಲಂಬಿತರಿಗೆ ಅನುಕೂಲವಾಗಲಿದೆ. ಪ್ರತಿನಿತ್ಯ ಅಪಘಾತದಿಂದ 4 - 5 ಮಂದಿ ಮೃತಪಡುತ್ತಿದ್ದಾರೆ. ಇದರಲ್ಲಿ ಶೇ.90 ರಷ್ಟು ಅಪಘಾತ ಪ್ರಕರಣಗಳೇ ಅಧಿಕವಾಗಿವೆ ಎಂದರು.

ಸಿಐಟಿಯುಸಿ ಜಿಲ್ಲಾ ಸಂಚಾಲಕ ಆನಂದರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಬೀದಿಬದಿ ವ್ಯಾಪಾಸ್ಥರು ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಅವರ ನೆಮ್ಮದಿಯ ಬದುಕಿಗಾಗಿ ಸ್ಥಳೀಯ ಆಡಳಿತದಿಂದ ಕಿರಿಕಿರಿ ತಪ್ಪಿಸಿ, ಪ್ರತಿಯೊಬ್ಬರಿಗೆ ನಿವೇಶನ, ಗುರುತಿನ ಚೀಟಿ ನೀಡಬೇಕು. ಬ್ಯಾಂಕ್‌ನಲ್ಲಿ ಸಾಲದ ಸೌಲಭ್ಯಗಳ ಸುಲಭವಾಗಿ ಸಿಗುವಂತೆ ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರಜಾಪರಿವರ್ತನೆ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಡಿ.ಈಶ್ವರಪ್ಪ, ವಕೀಲ ಮಡಿವಾಳ ಚಂದ್ರಪ್ಪ ಮಾತನಾಡಿದರು. ಬೀದಿ ಬದಿ ವ್ಯಾಪಾರಸ್ಥರ ಸಂಘದ ವತಿಯಿಂದ ಬೀದಿಬದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಪೌರಕಾರ್ಮಿಕರಿಗೆ ಬೀದಿಬದಿ ವ್ಯಾಪಾರಸ್ಥರ ಸಂಘದ ವತಿಯಿಂದ ಉಚಿತ ಬಟ್ಟೆಯನ್ನು ಶಾಸಕರ ಮೂಲಕ ನೀಡಲಾಯಿತು.

ಅವಳಿ ತಾಲೂಕಿನ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ನಾಗರಾಜ ಕಲ್ಕೇರಿ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದರು.ಈ ವೇಳೆ ಪುರಸಭೆ ಮುಖ್ಯಾಧಿಕಾರಿ ನಿರಂಜನಿ, ಪೌರಕಾರ್ಮಿಕ ಸಂಘದ ಅಧ್ಯಕ್ಷ ರವಿ, ಸಂಘದ ಗೌರವಾಧ್ಯಕ್ಷ ಇಡ್ಲಿಗಾಡಿ ಮಂಜಣ್ಣ, ಉಪಾಧ್ಯಕ್ಷ ಶಮಿವುಲ್ಲಾ, ಕಾರ್ಯದರ್ಶಿ ರೇಣುಕಾ ಗಜೇಂದ್ರಪ್ಪ, ಕತ್ತಿಗೆ ನಾಗಣ್ಣ, ಸಂಘದ ಪದಾಧಿಕಾರಿಗಳು ಬೀದಿಬದಿ ವ್ಯಾಪಾರಸ್ಥರಿದ್ದರು.ಪ್ರತಿ ಬೀದಿಬದಿ ವ್ಯಾಪಾರಸ್ಥರು ಸಾಲ ಸೌಲಭ್ಯ ಪಡೆದು ಮರುಪಾವತಿಸಿದರೆ ಹೆಚ್ಚು ಸಾಲ ಕೊಡಲಾಗುವುದು. ಜಿಲ್ಲೆಯಲ್ಲಿ 436 ಬೀದಿ ಬದಿ ವ್ಯಾಪಾರಸ್ಥರಿದ್ದು ಸ್ವಾಭಾವಿಕವಾಗಿ ಮರಣ ಹೊಂದಿದವರಿಗೆ ₹ 2 ಲಕ್ಷ ವಿಮೆ ಸೌಲಭ್ಯ ದೊರಕಿದೆ.

ಶಿವಪ್ಪ, ದಾವಣಗೆರೆ ಎಸ್‍ಬಿಐ ಲೀಡ್ ಬ್ಯಾಂಕ್ ಮ್ಯಾನೇಜರ್