ಸಾರಾಂಶ
ಲಯನ್ಸ್ ಕ್ಲಬ್‌ನಿಂದ ಪ್ರೋಟೀನ್‌ಯುಕ್ತ ಪೌಡರ್ ವಿತರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಐದು ಸಾವಿರ ವರ್ಷಗಳ ಇತಿಹಾಸವಿರುವ ಕ್ಷಯ ರೋಗದ ನಿಯಂತ್ರಣಕ್ಕೆ ಸರ್ಕಾರ ರೂಪಿಸಿರುವ ಹತ್ತು ಹಲವು ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಲಯನ್ಸ್ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಹೇಳಿದ್ದಾರೆ. ಜಿಲ್ಲಾ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಷಯರೋಗದಿಂದ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಚಿಕ್ಕಮಗಳೂರು ಲಯನ್ಸ್ ಕ್ಲಬ್ ನೀಡಿರುವ ಪ್ರೋಟಿನ್‌ಯುಕ್ತ ಆಹಾರದ ಪೌಡರ್‌ನ್ನು ವಿತರಿಸಿ ಮಾತನಾಡಿದರು. ಒಂದು ಕಾಲದಲ್ಲಿ ಕ್ಷಯರೋಗ ವಾಸಿಯಾಗದ ಕಾಯಿಲೆ ಎಂಬ ಕಲ್ಪನೆ ಇತ್ತು. ಆದರೆ, ಆ ಪರಿಸ್ಥಿತಿ ಈಗ ಇಲ್ಲ. ಕ್ಷಯ ರೋಗ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಲವು ಕಾರ್ಯಕ್ರಮ ರೂಪಿಸಿದ್ದು, ರೋಗ ಬಾಧಿತ ರೋಗಿ ಗಳಿಗೆ ಉತ್ತಮ ಗುಣಮಟ್ಟದ ಪ್ರೋಟಿನ್‌ಯುಕ್ತ ಆಹಾರ ಸೇವನೆಗೆ ಪ್ರತಿ ತಿಂಗಳು 500 ರು.ಗಳನ್ನು ಪ್ರೋತ್ಸಾಹ ಧನವನ್ನಾಗಿ ನೀಡುತ್ತಿದೆ. ಕ್ಷಯ ರೋಗಕ್ಕೆ ತುತ್ತಾಗಿರುವ ರೋಗಿಗಳು ಈ ಯೋಜನೆ ಸೌಲಭ್ಯ ಸದುಪಯೋಗ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಕ್ಷಯ ರೋಗ ನಿಯಂತ್ರಣಕ್ಕೆ ಔಷಧಿ ಒಂದೇ ಮುಖ್ಯವಲ್ಲ. ಈ ರೋಗಕ್ಕೆ ತುತ್ತಾದ ರೋಗಿಗಳಿಗೆ ಉತ್ತಮ ಆಹಾರ, ಒಳ್ಳೆಯ ಗಾಳಿ ಬೆಳಕು ಜೊತೆಗೆ ಉತ್ತಮ ಪರಿಸರ ಬಹಳ ಮುಖ್ಯ, ಈ ರೋಗವನ್ನು ಕಿತ್ತೊಗೆಯಲು ರೋಗಿಗಳು ಸೂಕ್ತ ಚಿಕಿತ್ಸೆ ಪಡೆಯುಂತೆ ತಿಳಿಸಿದರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಹರೀಶ್‌ಬಾಬು ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 440 ಕ್ಷಯ ರೋಗ ಪ್ರಕರಣಗಳು ದಾಖಲಾಗಿದ್ದು, ಆಯಾಯ ತಾಲೂಕು ಕೇಂದ್ರಗಳಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ರೋಗ ನಿಯಂತ್ರಣಕ್ಕೆ ಅಗತ್ಯ ಔಷಧಿಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿಯೇ ನೀಡುತ್ತಿದೆ ಎಂದರು. ಕ್ಷಯ ರೋಗಕ್ಕೆ ತುತ್ತಾದ ರೋಗಿಗಳಿಗೆ ಇಂದು ಲಯನ್ಸ್ ಸಂಸ್ಥೆ ಪ್ರೋಟೀನ್‌ಯುಕ್ತ ಪೌಡರ್‌ನ್ನು ಉಚಿತವಾಗಿ ನೀಡುವ ಮೂಲಕ ರೋಗ ನಿಯಂತ್ರಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಲಯನ್ಸ್ ಸಂಸ್ಥೆಯ ಶ್ಲಾಘನೀಯ ಕಾರ್ಯಕ್ರಮ ಎಂದು ತಿಳಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಟಿ. ನಾರಾಯಣಸ್ವಾಮಿ ಮಾತನಾಡಿ, ಸೇವೆಯನ್ನೇ ಗುರಿಯಾಗಿಟ್ಟುಕೊಂಡು ಸಮಾಜ ಮುಖಿ ಕೆಲಸ ಮಾಡುತ್ತಿರುವ ಲಯನ್ಸ್ ಸಂಸ್ಥೆ ನಾಡಪ್ರಭು ಕೆಂಪೇಗೌಡ ಜಯಂತಿಯಂದು ಕ್ಷಯ ರೋಗಿಗಳಿಗೆ ಪ್ರೋಟೀನ್ ಯುಕ್ತ ಪೌಡರ್ ವಿತರಣೆ ಮಾಡಲಾಗುತ್ತಿದೆ. ಕ್ಷಯ ರೋಗಿಗಳು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ರೋಗಮುಕ್ತರಾಗಬೇಕೆಂದರು. ಕ್ಲಬ್‌ನ ನಿಯೋಜಿತ ಅಧ್ಯಕ್ಷ ಕೆ. ಪುಷ್ಪರಾಜ್, ಕಾರ್ಯದರ್ಶಿ ಗೋಪಿಕೃಷ್ಣ, ಮಾಜಿ ಗೌರ್‍ನರ್ ಎಚ್.ಆರ್. ಹರೀಶ್ ಕ್ಷಯ ರೋಗಿಗಳಿಗೆ ಪ್ರೋಟೀನ್ ಯುಕ್ತ ಪೌಡರ್ ವಿತರಿಸಿದರು. ಜಿಲ್ಲಾ ಕ್ಷಯ ರೋಗ ಕಾರ್ಯಕ್ರಮ ಅಧಿಕಾರಿ ಬಾಲಕೃಷ್ಣ ಹಾಗೂ ಕೃಷ್ಣ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕ್ಷಯರೋಗ ನಿಯಂತ್ರಣ ವಿಭಾಗದ ಅಧಿಕಾರಿ ಕಿರಣ್‌ಕುಮಾರ್ ಸ್ವಾಗತಿಸಿ, ವಂದಿಸಿದರು.ಪೋಟೋ ಫೈಲ್ ನೇಮ್ 30 ಕೆಸಿಕೆಎಂ 3