ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿ ಚಿನಕುರಳಿ ಕರ್ನಾಟಕ ಪಬ್ಲಿಕ್ ಸ್ಕೂಲ್ 10ನೇ ವಿದ್ಯಾರ್ಥಿಗಳಿಗೆ ಮೂರು ತಿಂಗಳ ಟ್ಯೂಷನ್ ಕ್ಲಾಸ್ ಸಮಾರೋಪ ಸಮಾರಂಭ ನಡೆಯಿತು.ಜಿಲ್ಲಾ ಯೋಜನಾ ನಿರ್ದೇಶಕ ಎಚ್.ಎಲ್.ಮುರಳಿಧರ್ ಮಾತನಾಡಿ, ಮಕ್ಕಳು ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ನೀಡುವ ಮೂಲಕ ಎಸ್ಸೆಸ್ಸೆಲ್ಸಿ ತರಗತಿ ವೇಳೆ ವಿದ್ಯಾರ್ಥಿಗಳು ಶ್ರದ್ಧೆ, ಏಕಾಗ್ರತೆ, ಸಮಯದ ಸದುಪಯೋಗ ಮಾಡಿಕೊಂಡು ಕಲಿಕೆಯತ್ತ ಗಮನಹರಿಸುವುದು ಬಹಳಮುಖ್ಯ ಎಂದರು.
ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳಿಗೆ ವಿದ್ಯಾರ್ಥಿಗಳಿಗೆ ವಿಶೇಷ ಬೋಧನ ತರಗತಿಯನ್ನು ಯೋಜನೆ ಜ್ಞಾನ ವಿಕಾಸ ಕಾರ್ಯಕ್ರಮದಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ ಎಂದರು.ಈ ವೇಳೆ ಜನಜಾಗೃತಿ ವೇದಿಕೆ ಸದಸ್ಯರಾದ ಸಿ.ಡಿ.ಮಹದೇವ್, ಸಂಸ್ಥೆ ಕೈಗೊಳ್ಳುವ ಮಾದರಿ ಕಾರ್ಯಕ್ರಮಗಳಿಂದ ಗ್ರಾಮೀಣ ಭಾಗದ ಜನ ಜೀವನ ಮಟ್ಟವು ಸಾಕಷ್ಟು ಸುಧಾರಿಸಿದೆ ಎಂದರು.
ಉಪ ಪ್ರಾಂಶುಪಾಲೆ ಎಂ.ಎಸ್.ಜಯಶ್ರೀ ಮಾತನಾಡಿ, ಸಂಸ್ಥೆಯು ಗ್ರಾಮೀಣ ಭಾಗ ಬಡ ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಿಶೇಷ ಬೋಧನ ತರಗತಿಗೆ ಸಹಕಾರ ನೀಡಿರುವುದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬಹಳ ಸಹಕಾರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಮಾರಂಭದಲ್ಲಿ ಬೋದಕ ಶಿಕ್ಷಕರಾದ ಕುಮಾರಿ ತೇಜಸ್ವಿನಿ, ತಾಲೂಕು ಯೋಜನಾಧಿಕಾರಿ ಯಶವಂತ್ ಎಸ್., ವಲಯ ಮೇಲ್ವಿಚಾರಕಿ ಸುಷ್ಮಾ ಸ್ವಾಗತಿಸಿ, ಸೇವಾಪ್ರತಿನಿಧಿ ಜಯಶೀಲಾ ವಂದಿಸಿ, ಜ್ಞಾನ ವಿಕಾಸ ಸಮನ್ವಯಾದಿಕಾರಿ ತೇಜಸ್ವಿ ನಿರೂಪಿಸಿದರು.
34 ವಿದ್ಯಾರ್ಥಿಗಳಿಗೆ 3.02 ಲಕ್ಷ ರು. ವಿದ್ಯಾರ್ಥಿವೇತನಮಂಡ್ಯ:ಸರ್ಕಾರಿ ಶಾಲೆ ಹಾಗೂ ಅನುದಾನಿತ ಶಾಲೆಗಳಿಗೆ ಸಿಎಸ್ಆರ್ ಯೋಜನೆ ಅಡಿಯಲ್ಲಿ 34 ವಿದ್ಯಾರ್ಥಿಗಳಿಗೆ ಒಟ್ಟು 3.02 ಲಕ್ಷ ರು. ವಿದ್ಯಾರ್ಥಿ ವೇತನದ ಚೆಕ್‌ನ್ನು ಶಾಸಕ ಪಿ.ರವಿಕುಮಾರ್ ವಿತರಿಸಿದರು,ನಗರದ ರೈತ ಸಭಾಂಗಣದಲ್ಲಿ ಮಲಬಾರ್ ಗೋಲ್ಡ್ ವತಿಯಿಂದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಲಬಾರ್ ಗೋಲ್ಡ್ ಟ್ರಸ್ಟ್ ವತಿಯಿಂದ ಸಮಾಜಮುಖಿ ಕೆಲಸ ಮಾಡುತ್ತಿರುವುದು ಮೆಚ್ಚುಗೆ ತಂದಿದೆ ಹಾಗೆಯೇ ಅಗತ್ಯ ಇರುವ ಕಡೆ ಮಲಬಾರ್ ಟ್ರಸ್ಟ್ ವತಿಯಿಂದ ಶುದ್ಧ ಕುಡಿಯುವ ಘಟಕವನ್ನು ನಿರ್ಮಿಸಿ ಬೇಸಿಗೆಯಲ್ಲಿ ಜನರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಮಾಡುವಂತೆ ಸಲಹೆ ನೀಡಿದರು.ಸಮಾರಂಭದಲ್ಲಿ ಮಲಬಾರ್ ಗೋಲ್ಡ್ ಶಾಖ ಮುಖ್ಯಸ್ಥ ದಿಲೀಪ್ ಹೆಗಡೆ ಪ್ರಾಂಶುಪಾಲರಾದ ತಮ್ಮೇಗೌಡ ನಾರಾಯಣ ಉಪನ್ಯಾಸಕರಾದ ಲಿಂಗೇಗೌಡ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.