ಸಾರಾಂಶ
ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದೀಪಾವಳಿ ಪ್ರಯುಕ್ತ ತುಳಸಿ ಪೂಜೆ ಹಾಗೂ ಗೋ ಪೂಜೆ ಶ್ರದ್ಧಾ ಭಕ್ತಿಯಿಂದ ನಡೆಯಿತು.
ವಿರಾಜಪೇಟೆ : ಸಮೀಪದ ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದೀಪಾವಳಿಯ ಪ್ರಯುಕ್ತ ತುಳಸಿ ಪೂಜೆ ಹಾಗೂ ಗೋ ಪೂಜೆಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್ ರವರು ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು. ಮೊದಲಿಗೆ ಅರ್ಚಕರು ದೇವಸ್ಥಾನದ ಆವರಣದಲ್ಲಿರುವ ಶ್ರೀ ಮಹಾಗಣಪತಿ ದೇವರಿಗೆ, ಶ್ರೀ ಅಯ್ಯಪ್ಪ ಸ್ವಾಮಿಗೆ, ಶ್ರೀ ನಾಗ ದೇವರಿಗೆ, ಶ್ರೀ ವನದುರ್ಗೆ ಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.ತದನಂತರ ತುಳಸಿ ಪೂಜೆಯನ್ನು ಮಾಡಿದರು. ಕುಂಕುಮಾರ್ಚನೆ, ಪುಷ್ಪರ್ಚನೆ ಹಾಗೂ ಪಂಚಾಮೃತ ಸೇವೆಯನ್ನು ನಡೆಸಿ ನೈವೇದ್ಯವನ್ನು ಅರ್ಪಿಸಿದರು. ಬಳಿಕ ಮಹಾಮಂಗಳಾರತಿಯನ್ನು ಮಾಡಿದರು. ತದನಂತರ ದೇವಸ್ಥಾನದ ಒಳ ಆವರಣದಲ್ಲಿ ಗೋ ಪೂಜೆಯನ್ನು ನೆರವೇರಿಸಲಾಯಿತು. ಗೋವುವಿಗೆ ಕುಂಕುಮವನ್ನು ಇಟ್ಟು ವಸ್ತ್ರವನ್ನಿಡಲಾಯಿತು. ತದನಂತರ ಹೂವನ್ನು ಮುಡಿಸಿ ಆರತಿಯನ್ನು ಬೆಳಗಲಾಯಿತು. ಗೋವಿಗೆ ನೈವೇದ್ಯ ಆಹಾರವನ್ನು ನೀಡಲಾಯಿತು. ನೆರೆದಿದ್ದ ಭಕ್ತಾದಿಗಳು ತುಳಸಿ ಕಟ್ಟೆಗೆ ಹಾಗೂ ಗೋ ಮಾತೆಗೆ ನಮಿಸಿ ಪ್ರಾರ್ಥಿಸಿದರು. ಅರ್ಚಕರು ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸಿದರು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯವರು, ಭಕ್ತಾದಿಗಳು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))