ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವಂತೆ, ಕೇರಳದಲ್ಲೂ ತುಳುವಿಗೆ ಅಧಿಕೃತ ಭಾಷೆ ಸ್ಥಾನಮಾನ ನೀಡಬೇಕು. ತುಳು ಭಾಷೆಯ ಆಡಳಿತಾತ್ಮಕ ಅನುಷ್ಠಾನಕ್ಕೆ ಕನಿಷ್ಠ 5 ಕೋಟಿ ರು. ಅನುದಾನ ನೀಡಬೇಕು ಎಂದು ಜೈ ತುಳುನಾಡ್ ಸ್ಥಾಪಕ ಸದಸ್ಯ ಕಿರಣ್ ತುಲುವೆ
ಮಂಗಳೂರು: ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವಂತೆ, ಕೇರಳದಲ್ಲೂ ತುಳುವಿಗೆ ಅಧಿಕೃತ ಭಾಷೆ ಸ್ಥಾನಮಾನ ನೀಡಬೇಕು. ತುಳು ಭಾಷೆಯ ಆಡಳಿತಾತ್ಮಕ ಅನುಷ್ಠಾನಕ್ಕೆ ಕನಿಷ್ಠ 5 ಕೋಟಿ ರು. ಅನುದಾನ ನೀಡಬೇಕು ಎಂದು ಜೈ ತುಳುನಾಡ್ ಸ್ಥಾಪಕ ಸದಸ್ಯ ಕಿರಣ್ ತುಲುವೆ ಒತ್ತಾಯಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತುಳು ಭಾಷೆಯ ಸಮಗ್ರ ಅಭಿವೃದ್ಧಿ ಮತ್ತು ಆಡಳಿತಾತ್ಮಕ ಮಾನ್ಯತೆಗಾಗಿ ಮುಂದುವರಿದ ಭಾಗವಾಗಿ ತುಳು ಭಾಷೆಯ ಸಮಗ್ರ ಅಭಿವೃದ್ಧಿ, ಸಂರಕ್ಷಣೆ ಹಾಗೂ ಪರಿಣಾಮಕಾರಿ ಆಡಳಿತಾತ್ಮಕ ಅನುಷ್ಠಾನಕ್ಕಾಗಿ ಜೈ ತುಳುನಾಡ್ ಕುಡ್ಲ ಘಟಕ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಡುತ್ತಿದೆ ಎಂದರು.ಕೇರಳ ರಾಜ್ಯದಲ್ಲಿ ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಗುರುತಿಸುವಂತೆ ಕೇರಳ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ನಾವು ಈಗಾಗಲೇ #TuluOfficialinKeralam ಎಂಬ ಸಾಮಾಜಿಕ ಜಾಲತಾಣದ ಅಭಿಯಾನ ಆರಂಭಿಸಿದ್ದೇವೆ ಎಂದರು.
ಉದ್ಯೋಗದ ನಿಮಿತ್ತ ತಮ್ಮ ಕುಟುಂಬ ಹಾಗೂ ಊರನ್ನು ತೊರೆದು ಹೊರಗಡೆ ನೆಲೆಸಿರುವ ಯುವ ಪೀಳಿಗೆ ‘ಬ್ರ್ಯಾಂಡ್ ಮಂಗಳೂರು’ ಮೂಲಕ ಮತ್ತೆ ತಮ್ಮ ಊರಿಗೆ ಮತ್ತೆ ಮರುಳುವಂತಾಗಬೇಕು ಎಂದರು.ಮಾಜಿ ಅಧ್ಯಕ್ಷ ಸುದರ್ಶನ್ ಸುರತ್ಕಲ್, ಅಧ್ಯಕ್ಷೆ ರಾಜಶ್ರೀ ಚಂದ್ರಶೇಖರ್, ಉಪಾಧ್ಯಕ್ಷ ಚೇತನ್ ಅಂಚನ್ ಮಂಜಲ್‌ಕಟ್ಟೆ, ಮಾಜಿ ಅಧ್ಯಕ್ಷ ಉದಯ್ ಪೂಂಜಾ ತಾರಿಪಾಡಿಗುತ್ತು, ಸಂಘಟನಾ ಕಾರ್ಯದರ್ಶಿ ನಿರಂಜನ್ ಕರ್ಕೇರ ಪೊರ್ಕೋಡಿ ಇದ್ದರು.