ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಹೆಸರಾಂತ ತುಮ್ ಕೋಸ್ ಸಂಸ್ಥೆಯಿಂದ ಆರಂಭಿಸಿದ ಸೂಪರ್ ಮಾರ್ಕೆಟ್ ಸೇರಿ ಎಲೆಕ್ಟ್ರಿಕಲ್ ಸಾಮಗ್ರಿ, ಬಣ್ಣದ ಅಂಗಡಿ ಈ ಸಂಸ್ಥೆಯ ಉತ್ಪನ್ನಗಳು, ಆಹಾರ ಪದಾರ್ಥಗಳು ಗುಣಮಟ್ಟದಿಂದ ಕೂಡಿದ್ದು ಗ್ರಾಹಕರ ವಿಶ್ವಾಸಗಳಿಸುವಲ್ಲಿ ಶ್ರೇಷ್ಠತೆ ಪಡೆದಿದೆ ಎಂದು ಶಾಸಕ ಬಸವರಾಜು ವಿ.ಶಿವಗಂಗಾ ಹೇಳಿದರು.ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘ (ತುಮ್ ಕೋಸ್)ದಿಂದ ಸೋಮವಾರ ನೂತನವಾಗಿ ಆರಂಭಿಸಿದ ತುಮ್ ಕೋಸ್ ಮೆನ್ಸ್ ವೇರ್, ಹೋಂ ಫರ್ನಿಶಿಂಗ್ ವಿಭಾಗ ಹಾಗೂ ತುಮ್ ಕೋಸ್ ನ ಕೇಂದ್ರ ಕಚೇರಿ ಹರಾಜುಕಟ್ಟೆ ಕಟ್ಟಡದ ಮೇಲ್ಚಾವಣಿಗೆ ನೂತನವಾಗಿ ಅಳವಡಿಸಿರುವ 65 ಕಿ.ವ್ಯಾ. ಸಾಮರ್ಥ್ಯ ದ ಸೋಲಾರ್ ವಿದ್ಯುತ್ ಸ್ಥಾವರದ ಉದ್ಘಾಟನೆ ನೆರವೇರಿಸಿ ಮಾತನಾಡಿ ರೈತರ ಸಹಕಾರದಿಂದ ಸ್ಥಾಪಿತವಾದ ತುಮ್ ಕೋಸ್ ಸಂಸ್ಥೆ ಹೆಚ್ಚಿನ ಹೊರೆ ಇಲ್ಲದಂತೆ ಎಲ್ಲಾ ರೀತಿಯ ಗ್ರಾಹಕರಿಗೆ ಅನುಕೂಲವಾಗುವ ದರದಲ್ಲಿ ಮಾರಾಟ ಮಾರುವುದರಿಂದ ಸಂಸ್ಥೆಗೆ ಉತ್ತಮ ಹೆಸರು ಬರಲು ಸಾಧ್ಯವಾಗಿದೆ ಎಂದರು. ತುಮ್ ಕೋಸ್ ಸಂಸ್ಥೆ ತನ್ನದೇ ಆದ 65 ಕಿ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್ ಸ್ಥಾವರ ಆರಂಭಿಸಿ ಸಂಸ್ಥೆಗೆ ಬೇಕಾದ ವಿದ್ಯುತ್ ನ್ನು ಸ್ವಯಾರ್ಜಿತವಾಗಿ ಬಳಕೆಗೆ ಮಾಡಿರುವ ವ್ಯವಸ್ಥೆ ಬಗ್ಗೆ ಪ್ರಶಂಸಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಧು ಮಾತನಾಡಿ ತುಮ್ ಕೋಸ್ ಸಂಸ್ಥೆ ವತಿಯಿಂದ ದಿನಸಿ ವಸ್ತುಗಳು, ಕೃಷಿ ಪರಿಕರಗಳು ಸೇರಿ ಇನ್ನಿತರೆ ಗುಣಮಟ್ಟದ ವಸ್ತುಗಳ ತಲುಪಿಸುವ ಉದ್ದೇಶದಿಂದ ಸಂಸ್ಥೆಯ ವತಿಯಿಂದ ಸೂಪರ್ ಮಾರ್ಕೆಟ್, ಎಲೆಕ್ಟ್ರಾನಿಕ್ ಉಪಕರಣಗಳ ಅಂಗಡಿ, ಪೆಟ್ರೋಲ್ ಬಂಕ್ ಸೇರಿ ಇನ್ನು ಅನೇಕ ಉದ್ದಿಮೆಗಳ ಪ್ರಾರಂಭಿಸಿದ್ದು ಇದರ ಉಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಟಿ.ವಿ.ರಾಜು ಪಟೇಲ್, ಎಂ.ಸಿ.ದೇವರಾಜ್, ಜಿ.ಆರ್.ಶಿವಕುಮಾರ್, ಎ.ಎಂ.ಚಂದ್ರಶೇಖರ್, ಎನ್.ಗಂಗಾಧರಪ್ಪ, ದೇವೇಂದ್ರಪ್ಪ, ಜಿ.ಆರ್.ಪ್ರೇಮಾ ಲೋಕೇಶ್, ಎಚ್.ಎಸ್.ಶಿವಕುಮಾರ್, ಕೆ.ಜಿ.ಚಂದ್ರಮೋಹನ್, ಜಿ.ಸಿ.ಶಿವಕುಮಾರ್, ಸಿ.ಮಲ್ಲಪ್ಪ, ಆರ್.ಕೆಂಚಪ್ಪ, ರಮೇಶ್ ನಾಯ್ಕ್, ಆರ್.ಪಾರ್ವತಮ್ಮ, ಹಿರೇಮಳಲಿ ಲೋಕಣ್ಣ ಸೇರಿ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.
ಹೆಚ್ಚುವರಿ ಬಳಕೆ ವಿದ್ಯುತ್ ಬೆಸ್ಕಾಂಗೆ ಮಾರಾಟಸಂಸ್ಥೆಯ ಅಧ್ಯಕ್ಷ ಆರ್.ಎಂ.ರವಿ ಮಾತನಾಡಿ 65 ಕಿ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್ ಅಳವಡಿಸಿದ್ದರಿಂದ ಸಂಸ್ಥೆಗೆ ಮಾಸಿಕ ₹40ರಿಂದ 45ಸಾವಿರ ವಿದ್ಯುತ್ ಬಿಲ್ ವೆಚ್ಚ ಇಳಿಕೆಯಾಗಲಿದ್ದು, ಸಂಸ್ಥೆಗೆ ಬೇಕಾದಷ್ಟು ವಿದ್ಯುತ್ ಬಳಸಿ ಹೆಚ್ಚುವರಿ ವಿದ್ಯುತ್ ನ್ನು ಬೆಸ್ಕಾಂಗೆ ಮಾರಾಟ ಮಾಡಾಲು ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. 1700 ಯೂನಿಟ್ ವಿದ್ಯುತ್ ಪ್ರತಿದಿನ ಬೆಸ್ಕಾಂಗೆ ಮಾರಲಾಗುತ್ತದೆ ಎಂದರು.