ತುಮಕುರು: ಜಮೀನು ಮರಳಿ ವಕ್ಫ ಮಂಡಳಿಯ ಸುಪರ್ದಿಗೆ

| Published : Feb 28 2024, 02:38 AM IST

ಸಾರಾಂಶ

ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಬೆಳ್ಳಾರ ಗ್ರಾಮದಲ್ಲಿ 1 ಎಕರೆ 20 ಗುಂಟೆ ಜಮೀನು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಗೆ ಸೇರಿದ ವಕ್ಫ್‌ ಆಸ್ತಿಯಾಗಿದ್ದು, ಈ ಜಮೀನನ್ನು ಮರಳಿ ವಕ್ಫ್ ಮಂಡಳಿ ಸುಪರ್ದಿಗೆ ಪಡೆಯಲಾಗಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಬೆಳ್ಳಾರ ಗ್ರಾಮದಲ್ಲಿ 1 ಎಕರೆ 20 ಗುಂಟೆ ಜಮೀನು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಗೆ ಸೇರಿದ ವಕ್ಫ್‌ ಆಸ್ತಿಯಾಗಿದ್ದು, ಈ ಜಮೀನನ್ನು ಮರಳಿ ವಕ್ಫ್ ಮಂಡಳಿ ಸುಪರ್ದಿಗೆ ಪಡೆಯಲಾಗಿದೆ.

ಇದು ಕರ್ನಾಟಕ ರಾಜ್ಯ ಪತ್ರದಲ್ಲಿ ನೊಂದಾಯಿತ ವಕ್ಫ್‌ ಆಸ್ತಿಯಾಗಿದೆ. ಹುಳಿಯಾರು ಜಾಮೀಯಾ ಮಸೀದಿಗೆ ಸೇರಿದ ಬೆಳ್ಳಾರ ಗ್ರಾಮದ ಸರ್ವೆ ನಂ. 230 ವಿಸ್ತೀರ್ಣ 1 ಎಕರೆ 20 ಗುಂಟೆ ಜಾಗವನ್ನು ಮುಸ್ಲಿಂ ಜನಾಂಗದ ಉರ್ದು ಶಾಲೆಯ ಮಕ್ಕಳ ಜೀರ್ಣೋದ್ಧಾರಕ್ಕಾಗಿ ಆದೇಶ ಸಂಖ್ಯೆ: 82/46-47, ದಿನಾಂಕ: 08.12.1946 ರಂತೆ ಮಂಜೂರು ಮಾಡಿದ್ದಾರೆ.

ಇದನ್ನು ಅಂದಿನ ಜಾಮೀಯಾ ಮಸೀದಿಯ ಕಾರ್ಯಕಾರಿ ಸಮಿತಿಯ ಮಾಜಿ ಅಧ್ಯಕ್ಷರು ಈ ವಕ್ಫ್ ಆಸ್ತಿಯನ್ನು ಅಕ್ರಮವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ಮಾರಾಟ ಮಾಡಿದ್ದು, ಇದನ್ನು ವಿಚಾರಣಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ, ಬೆಂಗಳೂರು ರವರಲ್ಲಿ ವಕ್ಫ್‌ ಕಾಯ್ದೆ 1995 ಹಾಗೂ ತಿದ್ದು ಪಡಿ ಕಾಯ್ದೆ 2013ರ ಸೆಕ್ಷನ್ 52 ರಂತೆ ಪ್ರಕರಣ ದಾಖಲಾಗಿಸಿ ಇತ್ಯರ್ಥ ಪಡಿಸಿದ್ದಾರೆ.

ವಕ್ಫ್ ಆಸ್ತಿಯನ್ನು ವಾಪಸ್ಸು (ಹಿಂದಕ್ಕೆ) ಪಡೆಯುವ ಬಗ್ಗೆ ಕರ್ನಾಟಕ ವಕ್ಫ್ ನಿಯಮ 2017ರ ನಿಯಮ 65(5)ರ ಅಡಿಯಲ್ಲಿ ನಮೂನೆ ಸಂಖ್ಯೆ: 62ಮತ್ತು ಕರ್ನಾಟಕ ವಕ್ಫ್ ನಿಯಮ 2017 ರ ನಿಯಮ 65(4)ರ ಅಡಿಯಲ್ಲಿ ನಮೂನೆ ಸಂಖ್ಯೆ: 61 ರಂತೆ ಜಿಲ್ಲಾಧಿಕಾರಿಗಳು ತುಮಕೂರು ರವರಲ್ಲಿ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೋರಿದ ಮೇರೆಗೆ ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ ಚಿಕ್ಕನಾಯಕನಹಳ್ಳಿ ಅವರಿಗೆ ವಕ್ಫ್ ಆಸ್ತಿಯನ್ನು ವಾಪಸ್ ಪಡೆಯಲು ಸೂಕ್ತ ನಿರ್ದೇಶನ ನೀಡಿದ್ದಾರೆ. ಇದರನ್ವಯ ಸೂಕ್ತ ಪೊಲೀಸ್ ಬಂದೋಬಸ್ತ್ ನೊಂದಿಗೆ ತಾಲೂಕು ಸರ್ವೆ ಅಧಿಕಾರಿಗಳೊಂದಿಗೆ ಸರ್ವೆ ಮಾಡಿಸಿ ವಕ್ಫ್ ಆಸ್ತಿಯನ್ನು ಮರಳಿ ವಕ್ಫ್ ಮಂಡಳಿಯ ಸುಪರ್ದಿಗೆ ವಾಪಸ್ಸು ಪಡೆಯಲಾಗಿದ್ದು, ಜಿಲ್ಲಾ ವಕ್ಫ್ ಅಧಿಕಾರಿ ನವೀದ್ ಪಾಷ ರವರಿಗೆ ಹಸ್ತಾಂತರಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಮಹಮ್ಮದ್ ಅಪ್ರೋಜ್ ಅಹಮ್ಮದ್, ಉಪಾಧ್ಯಕ್ಷ ಹಮೀದ್ ಪಾಷ, ಶಬ್ಬಿರ್‌ ಆಹಮ್ಮದ್, ಹಫೀಜ್ ವುಲ್ಲಾ ಖಾನ್ (ಬಾಬು) ಸದಸ್ಯರಾದ ಜಬೀವುಲ್ಲಾ, ಅಮೀಮ್ ಆಹಮ್ಮದ್, ನೂರ್‌ ಮಹುಮ್ಮದ ಜಾಮೀಯಾ ಮಸೀದಿಯ ಅಧ್ಯಕ್ಷ ಆರಿಫ್ ವುಲ್ಲಾ ಖಾನ್, ಉಪಾಧ್ಯಕ್ಷ ಸಾಧತ್ ಷರಿಪ್, ಕಾರ್ಯದರ್ಶಿ ನದೀಮ್, ಮಹಮ್ಮದ್ ಅಲಾಂ, ಆಸೀಫ್ ಅಲಿ, ಮಹುಮ್ಮದ್ ಅಲಿ ಖಾನ್, ಮಹುಮ್ಮದ್ ಆಕ್ಟರ್‌, ಖದೀರ್‌ ಹಾಗೂ ಸದಸ್ಯರು ಉಪಸ್ಥಿತರಿದ್ದರು.