ವಾರ್ತಾಧಿಕಾರಿ ನಿಧನ

| Published : Aug 03 2024, 12:36 AM IST

ಸಾರಾಂಶ

ತುಮಕೂರು ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಎಂ ಆರ್ ಮಮತ ನಿಧನ

ಕನ್ನಡಪ್ರಭ ವಾರ್ತೆ ತುಮಕೂರುವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಎಂ ಆರ್ ಮಮತ (47) ಅವರು ಶುಕ್ರವಾರ ಅಲ್ಪಕಾಲದ ಅಸ್ವಸ್ಥತೆಯಿಂದ ಕೊನೆಯುಸಿರೆಳೆದರು. ಮಿದುಳು ರಕ್ತಸ್ರಾವದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಕಳೆದ ಕೆಲದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.ಮಮತ ಅವರಿಗೆ ಮೊದಲು ಮಿದುಳಿನ ಒಳಗೆ ರಕ್ತಸ್ರಾವ ಆಗಿ ಆಸ್ಪತ್ರೆ ಗೆ ಸೇರಿಸಲಾಗಿತ್ತು. ಅಲ್ಲದೇ ತುರ್ತು ಆಪರೇಷನ್ ಕೂಡ ಆಗಿತ್ತು. ಒಂದೆರಡು ದಿನ ಕೋಮಾ‌ ಹಂತದಲ್ಲಿ ಇದ್ದ ಅವರು ಚೇತರಿಸಿಕೊಂಡು ಮನೆಗೆ ಬಂದಿದ್ದರು. ನಂತರ ಡೆಂಘಿ ಜ್ವರ ಬಂದು ಪ್ಲೇಟ್ ಲೇಟ್ 9000 ಕ್ಕೆ ಇಳಿದಿತ್ತು ಮತ್ತೆ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪತಿ‌ ಹಿರಿಯ ಪತ್ರಕರ್ತ ಎಚ್ ಆರ್ ರವೀಶ್, ಮಗ ಪ್ರಜ್ವಲ್ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ತುಮಕೂರು ತಾಲೂಕು ಹಾಲನೂರು ಗ್ರಾಮದ ಅವರ ತೋಟದಲ್ಲಿ ಶನಿವಾರ ಮಧ್ಯಾಹ್ನ ನೆರವೇರಲಿದೆ.