ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಕೇಂದ್ರ ಸರ್ಕಾರ ಮಕ್ಕಳು ಮತ್ತು ಮಹಿಳೆಯರಿಗಾಗಿ ಕೊಡುವ ಸವಲತ್ತುಗಳಿಗೆ ಕಡಿತ ಹಾಕಿರುವುದನ್ನು ಖಂಡಿಸಿ ಅಂಗನವಾಡಿ ನೌಕರರ ಸಂಘ, ಬಿಸಿಯೂಟ ನೌಕರರ ಸಂಘ, ಸಿಐಟಿಯು ಜಂಟಿಯಾಗಿ ತುಮಕೂರು ನಗರದಲ್ಲಿ ಸಾವಿರಾರು ಜನ ಕಾರ್ಯಕರ್ತೆಯರು ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ನಡೆಸಿ ಸಂಸತ್ ಸದಸ್ಯರ ಕಚೇರಿ ಎದುರು ಧರಣಿ ನಡೆಸಿದರು.ಧರಣಿ ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲಾಧ್ಯಕ್ಷ ಸೈಯದ್ ಮುಜೀಬ್, ಸರ್ಕಾರ ಸಂಸತ್ ನ 146 ಜನ ಸದಸ್ಯರನ್ನು ಹೊರಗೆ ಹಾಕಿ ಲೋಕಸಭೆಯಲ್ಲಿ 18, ರಾಜ್ಯ ಸಭೆಯಲ್ಲಿ 17 ಬಿಲ್‌ಗಳನ್ನು ಮಂಡಿಸಿ ಅಂಗೀಕರಿಸಿದೆ. ಇದು ಪ್ರಜಾತಂತ್ರಕ್ಕೆ ಎಸಗಿದ ದ್ರೋಹ, ಬಡಜನತೆಯ ಯೋಜನೆಗಳಿಗೆ ಹಣ ನೀಡದ ಸರ್ಕಾರದೇಶದ ಬಂಡವಾಳಗಾರರು ಮತ್ತು ಕಾರ್ಪೋರೇಟ್ ಕಂಪನಿಗಳಿಗೆ 14.5 ಲಕ್ಷ ಕೋಟಿ ರು. ಸಾಲ ಮನ್ನ ಮಾಡಿದೆ. ರೈತ–ಕಾರ್ಮಿಕರ ಮತ್ತು ಜನತೆಯ ಪ್ರಶ್ನೆಗಳನ್ನು ಪರಿಹರಿಸದೆ ಜನ ವಿರೋಧಿಯಾಗಿ ವರ್ತಿಸುತ್ತಿದೆ ಎಂದರು.
ಅಂನಗವಾಡಿ ನೌಕರ ಸಂಘ ಜಿಲ್ಲಾ ಅಧ್ಯಕ್ಷೆ ಕಮಲಾ ಮಾತನಾಡಿ, ಮಹಿಳೆಯರ ಬಗ್ಗೆ ಮಾತಾನಾಡುವ ಕೇಂದ್ರ ಪ್ರಭುತ್ವ ಅಂಗನವಾಡಿ ನೌಕರರನ್ನು 4500 ರು. ಸಹಾಯಕಿಯರಿಗೆ 2250 ರು. ಬಿಸಿಯೂಟದವರಿಗೆ 600 ರು. ಆಶಾ ಕಾರ್ಯಕರ್ತೆರಿಗೆ 2 ಸಾವಿರ ರು. ಕೊಟ್ಟು ದುಡಿಸುವುದು ಸಾಮಾಜಿಕ ನ್ಯಾಯವೇ ಎಂದು ಪ್ರಶ್ನಿಸಿದರು.ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಭಾನು ಮಾತನಾಡಿ, ಆಹಾರ, ಆರೋಗ್ಯ, ಶಿಕ್ಷಣ ಮುಂತಾದ ಯೋಜನೆಗಳನ್ನು ಕಾಯಂ ಮಾಡುವ ಮುಖಾಂತರ ಈ ಹಕ್ಕುಗಳನ್ನು ಸಾರ್ವತ್ರಿಕಗೊಳಿಸಬೇಕು. ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಈ ಯೋಜನೆಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿ ಸೇರಿದಂತೆ 1 ಕೋಟಿ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ಕೊಟ್ಟು ನೌಕರರು ಎಂದು ಪರಿಗಣಿಸಬೇಕು.
ಜಿಲ್ಲಾ ಖಚಾಂಚಿ ಅನಸೂಯ ಮಾತನಾಡಿ 6 ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಕೊಡಲು ಕಾನೂನು ರೂಪಿಸಬೇಕು ಎಂದರು.ಪ್ರತಿಭಟನೆಯನ್ನುಉದ್ದೆಶಿಸಿ ಕರ್ನಾಟಕ ಪ್ರಾಂತರೈತ ಸಂಘದ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ, ಸಿಐಟಿಯು ಜಿಲ್ಲಾಖಜಾಂಚಿ ಎ. ಲೋಕೇಶ್, ಪುಟ್‌ಪಾತ್ ವ್ಯಾಪಾರಿಗಳ ಸಂಘದ ವಾಸಿಂ ಅಕ್ರಂಅವರು ಬೆಂಬಲಿಸ ಮಾತನಾಡಿದರು
ಹೋರಾಟದಲ್ಲಿ ಅಂಗನವಾಡಿ ನೌಕರರ ಸಂಘದ ಪಾರ್ವತಮ್ಮ, ಗೌರಮ್ಮ, ಶಾಂತಕುಮಾರಿ, ವನಜಾಕ್ಷಿ, ಶಿವಗಂಗಮ್ಮ, ಪುಷ್ಪ್, ಜಬೀನಾ, ಗಂಗಾ, ಪ್ರೇಮಾ, ಆಧಿಲಕ್ಷ್ಮಿ, ಸುಶಿಲಾ, ವಸಂತ ಕುಮಾರಿ, ಪಾರ್ವತಮ್ಮ ಶಿರಾ, ಸರೋಜ, ಅನಸೂಯ, ಮತ್ತಿತರೆ ವಿವಿಧ ತಾಲೂಕುಗಳ ಪಧಾದಿಕಾರಿಗಳು ಹಾಜರಿದ್ದು ಮಾತನಾಡಿದರು.ಬಿಸಿಯೂಟ ನೌಕರ ಸಂಘದ ನಾಗರತ್ನಮ್ಮ, ಶಾರದಮ್ಮ, ಮಮತಾ, ಶ್ವೇತಾ, ಸುಶಿಲಾ, ಮಾದೇವಿ ಇದ್ದರು. ಸಂಸತ್ ಸದಸ್ಯರ ಸಹಾಯಕರು ಸಂಸತ್ ಸದಸ್ಯರ ಜೊತೆಯಲ್ಲಿ ಎರಡು ಸಂಘಗಳ ಪದಾಧಿಕಾರಿಗಳ ಸಭೆ ನಡೆಸುವ ಭರವಸೆ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರೂಪರಣಾ ಅಧಿಕಾರಿಗಳು ಮೋಬೈಲ್, ಕರೆಸ್ಸಿ, ಮೊಟ್ಟೆ, ತರಕಾರಿ ಮತ್ತು ಇತರೆ ವಿಚಾರಗಳ ಬಗ್ಗೆ ಪೆಬ್ರವರಿ ತಿಂಗಳ ಮೂದಲ ವಾರದಲ್ಲಿ ಸಭೆ ನಡೆಸುವುದಾಗಿ ಭರವಸೆ ನೀಡಿದರು.