ತುಮಕೂರು: ಜಾತಿ ಗಣತಿ ವರದಿಗೆ ಮಠಾಧೀಶರು ತೀವ್ರ ವಿರೋಧ

| Published : Mar 02 2024, 01:50 AM IST

ತುಮಕೂರು: ಜಾತಿ ಗಣತಿ ವರದಿಗೆ ಮಠಾಧೀಶರು ತೀವ್ರ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಸ್ವೀಕರಿಸಿರುವ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿದ್ದ ಜಾತಿಗಣತಿ ವರದಿಗೆ ಜಿಲ್ಲೆಯ ವಿವಿಧ ಮಠಾಧೀಶರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿದ್ದ ಜಾತಿವಾರು ಜನಗಣತಿಯನ್ನು ಸರ್ಕಾರ ಅಂಗೀಕರಿಸಬಾರದು ಎಂದು ಮಠಾಧೀಶರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಸರ್ಕಾರ ಸ್ವೀಕರಿಸಿರುವ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿದ್ದ ಜಾತಿಗಣತಿ ವರದಿಗೆ ಜಿಲ್ಲೆಯ ವಿವಿಧ ಮಠಾಧೀಶರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿದ್ದ ಜಾತಿವಾರು ಜನಗಣತಿಯನ್ನು ಸರ್ಕಾರ ಅಂಗೀಕರಿಸಬಾರದು ಎಂದು ಮಠಾಧೀಶರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಒತ್ತಾಯಿಸಿದರು.

ಗುಬ್ಬಿ ತಾಲೂಕಿನ ಬೆಟ್ಟದಹಳ್ಳಿ ಮಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಇಡೀ ಅಖಂಡ ಸಮಾಜವನ್ನು ಗಮನದಲ್ಲಿಟ್ಟುಕೊಂಡು ಬಡತನ ರೇಖೆಗಿಂತ ಕೆಳಗಿರುವವರನ್ನು ಮೇಲೆತ್ತುವುದು ಸಮಾಜ ಮತ್ತು ಸರ್ಕಾರದ ಆದ್ಯ ಕರ್ತವ್ಯ ಎಂದರು.

ಜಾತಿಗಳನ್ನು ಎಣಿಸಿಕೊಂಡರು ಹೋದರೆ ಮುಂದಿನ ದಿನಗಳಲ್ಲಿ ಕಷ್ಟವಾಗುತ್ತದೆ. ಯಾವ ದೃಷ್ಟಿಕೋನ ಇಟ್ಟುಕೊಂಡು ಜಾತಿಗಣತಿ ಮಾಡಿದ್ದಾರೋ ಗೊತ್ತಿಲ್ಲ. ಸವಲತ್ತಿಗೋಸ್ಕರ ಜಾತಿ ಗಣತಿ ಮಾಡುತ್ತಾರೆ. ಅನುಕೂಲ ಇಲ್ಲದವರಿಗೆ ಅನುಕೂಲ ಮಾಡಿಕೊಡಬೇಕು ಎಂದರು.ಜಾತಿಗಣತಿ ವರದಿಗೆ ಪರ-ವಿರೋಧದ ಪ್ರಶ್ನೆಯಲ್ಲ, ಬಡತನ ರೇಖೆಗಿಂತ ಕೆಳಗೆ ಇರುವವರಿಗೆ ಸೌಲಭ್ಯ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯೋನ್ಮುಖವಾಗಬೇಕು. ಆದರೆ ಎಂದೋ ನಡೆಸಿದ್ದ ಜಾತಿಗಣತಿಯನ್ನು ಈಗ ಸರ್ಕಾರ ಸ್ವೀಕರಿಸುತ್ತಿರುವುದು ಸಮಂಜಸವಲ್ಲ. ಇದಕ್ಕೆ ನಮ್ಮ ವಿರೋಧವಿದೆ ಎಂದರು.

ತಮ್ಮಡಿಹಳ್ಳಿ ಮಠಾಧ್ಯಕ್ಷ ಅಭಿನವ ಮಲ್ಲಿಕರ್ಜುನ ಸ್ವಾಮೀಜಿ ಮಾತನಾಡಿ, ಹಿಂದುಳಿದ ವರ್ಗದ ಶಾಶ್ವತ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ಜಾತಿಗಣತಿ ವರದಿ ನನ್ನ ದೃಷ್ಠಿಯಲ್ಲಿ ಅವೈಜ್ಞಾನಿಕ. ಎಲ್ಲೋ ಕುಳಿತುಕೊಂಡು ವರದಿ ಬರೆದಿದ್ದಾರೆ. ಈ ವರದಿಗೆ 155 ಕೋಟಿ ರು. ವೆಚ್ಚ ಮಾಡಿದ್ದಾರೆ. ವರದಿ ಇನ್ನೂ ನೋಡಿಲ್ಲ, ಮಠಕ್ಕೆ ಯಾರೂ ಬಂದು ನಮ್ಮನ್ನು ವೈಯುಕ್ತಿಕವಾಗಿ ಕೇಳಿಲ್ಲ. ವರದಿ ಅಸ್ಪಷ್ಟವಾಗಿದೆ ಎನ್ನುವುದು ನನ್ನ ಭಾವನೆ ಎಂದರು.

ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ ಮಾತನಾಡಿ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವುದು ಜಾತಿ ಗಣತಿ ಅಂದ ಮೇಲೆ ಪ್ರತಿಯೊಬ್ಬ ಮನುಷ್ಯರನ್ನು ಕೇಳಬೇಕಿತ್ತು. ಇದು ಜಾತ್ಯಾತೀತತೆ ಮನೋಭಾವ ಅಲ್ವೇ ಅಲ್ಲ ಎಂದರು.ನಮ್ಮ ಮಠದ ಅಕ್ಕಪಕ್ಕ ಎಲ್ಲಕಡೆ ಕೇಳಿದ್ದೇವೆ, ಕೆಲವರು ಗಣತಿ ಮಾಡಿಲ್ಲ ಎಂದು ಹೇಳಿದರೆ, ಕೆಲವರು ಗಣತಿ ಮಾಡಿದ್ದಾರೆ ಎಂದು ಹೇಳುತ್ತಾರೆ. ಒಂದೇ ಊರಿನಲ್ಲಿ ಎರಡೆರಡು ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು ಎಂದರು.ನಮ್ಮ ಮಠದಲ್ಲೂ ಮಕ್ಕಳಿದ್ದಾರೆ. ಅಲ್ಲಿ ಜಾತಿ ಗಣತಿ ಆಗಿದೆಯೋ, ಇಲ್ಲವೋ ಎಂಬುದರ ಬಗ್ಗೆ ಗಮನ ಹರಿಸಬೇಕು. ಜಾತಿ ಇಟ್ಟುಕೊಂಡು ಬಂದಾಗ ಎಲ್ಲರನ್ನು ಕೇಳಬೇಕು. ಆದರೆ ಇದ್ಯಾವುದನ್ನೂ ಮಾಡದೆ ಇರುವುದನ್ನು ನೋಡಿದರೆ ಈ ವರದಿ ಅವೈಜ್ಞಾನಿಕ ಎನಿಸುತ್ತದೆ ಎಂದರು.