ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಅರ್ಧದಶಕದಿಂದ ದೇವರ ವಿಗ್ರಹಗಳಿಗೆ ರಜತ ಶಿಲ್ಪಕಲೆ ಮೂಲಕ ರೂಪ ನೀಡುವ ಕಾಯಕದಲ್ಲಿ ನಿರತರಾಗಿರುವ ಬಾಗಲಕೋಟೆ ನಗರದ ನಾಗಲಿಂಗಪ್ಪ ಗಂಗೂರ ಅವರಿಗೆ 2025ನೇ ಸಾಲಿನ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.ಬಾಗಲಕೋಟೆ, ವಿಜಯಪುರ, ಬೆಳಗಾವಿ, ಗದಗ, ರಾಯಚೂರು, ಬೆಂಗಳೂರು ಸೇರದಂತೆ ರಾಜ್ಯದ ವಿವಿಧ ಜಿಲ್ಲೆ, ನೆರೆರಾಜ್ಯಗಳ ಹಲವು ದೇಗುಲಗಳಲ್ಲಿ ನಾಗಲಿಂಗಪ್ಪ ಗಂಗೂರ ಅವರು ಸಿದ್ಧಪಡಿಸಿದ ಮೂರ್ತಿಗಳು, ಪುರಾತನ ಮೂರ್ತಿಗಳಿಗೆ ಅಚ್ಛಾಗಿ ಸಿದ್ಧಪಡಿಸಿದ ಬೆಳ್ಳಿ ಕವಚಗಳು ಕಾಣಸಿಗುತ್ತವೆ. ಅತ್ಯಂತ ಸೂಕ್ಷ್ಮವಾಗಿ ಮೂಲ ವಿಗ್ರಹದ ರೀತಿಯಲ್ಲೇ ಬೆಳ್ಳಿ ಮೂರ್ತಿಗಳನ್ನು ಸಿದ್ಧಪಡಿಸುವ ಕಲೆ ಮೈಗೂಡಿಸಿಕೊಂಡಿರುವ ಅವರು ದೇವರ ಕಾರ್ಯಗಳನ್ನು ಅಷ್ಟೇ ಶ್ರದ್ಧಾ-ಭಕ್ತಿಯಿಂದ ಮಾಡುತ್ತ ಬಂದಿದ್ದಾರೆ.72ರ ಇಳಿವಯಸ್ಸಿನಲ್ಲೂ ಹಗಲುರಾತ್ರಿ ಎನ್ನದೇ ಮೂರ್ತಿ ತಯಾರಿಕೆ ಕೆಲಸದಲ್ಲಿ ನಿರತರಾಗಿದ್ದಾರೆ. 2021ರಲ್ಲಿ ಅವರಿಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿಯೂ ಲಭಿಸಿತ್ತು. ಅವರ ಕಾರ್ಯಕ್ಕೆ ಪುತ್ರರಾದ ಕಾಶಿನಾಥ, ಕಿರಣ ಅವರು ಸಾಥ್ ನೀಡುತ್ತಿದ್ದು, ಕುಟುಂಬದವರಾದ ಸುನೀಲ, ಗೌತಮ್ ಕೂಡ ಜತೆಯಾಗಿದ್ದಾರೆ. ರಜತ ಶಿಲ್ಪ ಕಲೆಯಲ್ಲಿನ ಸಾಧನೆಯನ್ನು ದೇವರಿಗೆ ಅರ್ಪಿಸುವ ಅವರು, ದೇವರೇ ನನ್ನ ಹಿಂದೆ ನಿಂತು ತನ್ನ ಕೆಲಸ ಮಾಡಿಸಿಕೊಳ್ಳುತ್ತಾನೆ. ಅದಕ್ಕಾಗಿಯೇ ಅಷ್ಟು ಅಚ್ಚುಕಟ್ಟಾದ ರೂಪ ಮೂಡಿರುತ್ತದೆ ಎಂದು ನಾಗಲಿಂಗಪ್ಪ ಗಂಗೂರ ಹೇಳುತ್ತಾರೆ. ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ.--
ನ್ಯಾಯಾಂಗ ಕ್ಷೇತ್ರದಲ್ಲಿನ ಸೇವೆಗೆ ಗೌರವನ್ಯಾ.ಪವನಕುಮಾರ್ ಭಜಂತ್ರಿ: ಬಾಗಲಕೋಟೆ ಜಿಲ್ಲೆಯ ಮುರನಾಳ ಗ್ರಾಮದ ನಿವಾಸಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಪವನಕುಮಾರ್ ಭಜಂತ್ರಿ ಅವರಿಗೆ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ತಾಲೂಕಿನ ಮುರನಾಳ ಗ್ರಾಮದವರಾದ ಅವರು, ಕರ್ನಾಟಕ, ಪಂಜಾಬ್, ಹರಿಯಾಣ ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಪವನಕುಮಾರ್ ಅವರ ತಂದೆ ಭೀಮಪ್ಪ ಅವರು ರಾಜ್ಯ ಸರ್ಕಾರದ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿ 1988ರಲ್ಲಿ ನಿವೃತ್ತರಾಗಿದ್ದರು. ವಕೀಲಿ ವೃತ್ತಿಯಲ್ಲಿ 25 ವರ್ಷಗಳ ಅನುಭವ ಹೊಂದಿರುವ ಪವನಕುಮಾರ್ ಅವರ ಬೆಳವಣಿಗೆ ಹಿಂದೆ ಕಠಿಣ ಪರಿಶ್ರಮ, ಸತತ ಪ್ರಯತ್ನವಿದೆ. 2025ರ ಸೆ.21ರಂದು ಬಿಹಾರ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ವಹಿಸಿಕೊಂಡಿದ್ದರು. ಅ.22ರಂದು ನಿವೃತ್ತರಾಗಿದ್ದಾರೆ. ನ್ಯಾಯಮೂರ್ತಿಗಳಾಗಿ 10 ವರ್ಷ 9 ತಿಂಗಳು 19 ದಿನ ಸೇವೆ ಸಲ್ಲಿಸಿರುವ ಅವರು 40 ಸಾವಿರಕ್ಕೂ ಅಧಿಕ ಪ್ರಕರಣ ಇತ್ಯರ್ಥಗೊಳಿಸಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))