ಇಬ್ಬರು ಬೈಕ್ ಕಳ್ಳರ ಬಂಧನ: 4 ದ್ವಿಚಕ್ರ ವಾಹನ ವಶ

| Published : Aug 20 2025, 01:30 AM IST

ಸಾರಾಂಶ

ತಾತಗುಣಿ ಬಸ್ ನಿಲ್ದಾಣದ ಬಳಿ ಲಿಂಗರಾಜುಗೌಡ ಮತ್ತು ರಘು ಡಿಯೋ ಗಾಡಿ ನಿಲ್ಲಿಸಿಕೊಂಡು ನಿಂತಿದ್ದರು. ಪೊಲೀಸ್ ಪೇದೆಗಳಾದ ಮುರಳೀಧರ ಮತ್ತು ರಾಹುಲ್ ಅವರನ್ನು ನೋಡಿದಾಕ್ಷಣ ಅವರಿಬ್ಬರು ಪರಾರಿಯಾಗಲು ಯತ್ನಿಸಿದರು.

ರಾಮನಗರ:

ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿರುವ ಕಗ್ಗಲೀಪುರ ಠಾಣೆ ಪೊಲೀಸರು 2.50 ಲಕ್ಷ ರುಪಾಯಿ ಮೌಲ್ಯದ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಹಾರೋಹಳ್ಳಿ ತಾಲೂಕು ಮೇಡಮಾರನಹಳ್ಳಿ ಗ್ರಾಮದ ಲಿಂಗರಾಜು ಗೌಡ ಮತ್ತು ಬೆಂಗಳೂರು ದಕ್ಷಿಣ ತಾಲೂಕು ಹೊಸಪಾಳ್ಯ ಕಾಲೋನಿ ವಾಸಿ ರಘು ಬಂಧಿತ ಆರೋಪಿಗಳು.

ತಾತಗುಣಿ ಬಸ್ ನಿಲ್ದಾಣದ ಬಳಿ ಲಿಂಗರಾಜುಗೌಡ ಮತ್ತು ರಘು ಡಿಯೋ ಗಾಡಿ ನಿಲ್ಲಿಸಿಕೊಂಡು ನಿಂತಿದ್ದರು. ಪೊಲೀಸ್ ಪೇದೆಗಳಾದ ಮುರಳೀಧರ ಮತ್ತು ರಾಹುಲ್ ಅವರನ್ನು ನೋಡಿದಾಕ್ಷಣ ಅವರಿಬ್ಬರು ಪರಾರಿಯಾಗಲು ಯತ್ನಿಸಿದರು.

ಇದರಿಂದ ಅನುಮಾನಗೊಂಡ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆಗೆ ಒಳ ಪಡಿಸಿದಾಗ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಪೊಲೀಸರು ಹಾರೋಹಳ್ಳಿ ಠಾಣೆ ಸರಹದ್ದಿನಲ್ಲಿ ಹೊಂಡಾ ಡಿಯೋ, ಬೆಂಗಳೂರು ನಗರ ತಲಘಟ್ಟಪುರ ಠಾಣೆ ಸಹಹದ್ದಿನಲ್ಲಿ 2 ಬೈಕ್‌ ಹಾಗೂ ಕುಂಬಳಗೂಡು ಠಾಣೆ ಸರಹದ್ದಿನಲ್ಲಿ ಒಂದು ಬೈಕ್‌ ಅನ್ನು ವಶ ಪಡಿಸಿಕೊಂಡದ್ದು, ಇದರ ಮೌಲ್ಯ 2 ಲಕ್ಷ 50 ಸಾವಿರ ರು.ಗಳಾಗಿದೆ. ಈ ಸಂಬಂಧ ಕಗ್ಗಲೀಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.