ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ಸುಮಾರು 3.30ರ ವೇಳೆಗೆ ಕುರಿಯನ್ನು ಮೈತೊಳೆಯಲು ಹೋಗುವುದಾಗಿ ಹೇಳಿ ಇಬ್ಬರೂ ಜಾವಗಲ್ ದೊಡ್ಡ ಕೆರೆಗೆ ತೆರಳಿದ್ದರು. ಬಳಿಕ ಸಂಜೆ ಸುಮಾರು 4.30ರ ವೇಳೆಗೆ ಕುರಿಯನ್ನು ತೊಳೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು ಕೆರೆಯ ದಡದಲ್ಲಿ ಇಬ್ಬರ ಶವಗಳನ್ನು ಕಂಡುಬಂದಿವೆ. ಸ್ಥಳದಲ್ಲಿದ್ದ ಕುರಿಗಾಹಿಗಳ ಸಹಾಯದಿಂದ ಮಕ್ಕಳನ್ನು ಕೆರೆಯಿಂದ ಹೊರತೆಗೆದು ದಡಕ್ಕೆ ತರಲಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಅರಸೀಕೆರೆ: ತಾಲೂಕಿನ ಜಾವಗಲ್ ಪಟ್ಟಣದಲ್ಲಿ ದುಃಖಕರ ಘಟನೆ ಸಂಭವಿಸಿದ್ದು, ಕೆರೆಯಲ್ಲಿ ಮುಳುಗಿ ಇಬ್ಬರು ಸಹೋದರರು ಮೃತಪಟ್ಟಿದ್ದಾರೆ.ಮೃತರನ್ನು ಇಮಾನ್ (15) ಮತ್ತು ಯಾಸೀನ್ (13) ಎಂದು ಗುರುತಿಸಲಾಗಿದೆ. ಇವರು ಜಾವಗಲ್ ನಿವಾಸಿಗಳಾದ ಮುನೀರ್ ಅಹಮದ್ ಅವರ ಪುತ್ರರು ಎಂದು ತಿಳಿದುಬಂದಿದೆ. ಇಮಾನ್ 10ನೇ ತರಗತಿಯಲ್ಲಿ ಹಾಗೂ ಯಾಸೀನ್ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ಸುಮಾರು 3.30ರ ವೇಳೆಗೆ ಕುರಿಯನ್ನು ಮೈತೊಳೆಯಲು ಹೋಗುವುದಾಗಿ ಹೇಳಿ ಇಬ್ಬರೂ ಜಾವಗಲ್ ದೊಡ್ಡ ಕೆರೆಗೆ ತೆರಳಿದ್ದರು. ಬಳಿಕ ಸಂಜೆ ಸುಮಾರು 4.30ರ ವೇಳೆಗೆ ಕುರಿಯನ್ನು ತೊಳೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು ಕೆರೆಯ ದಡದಲ್ಲಿ ಇಬ್ಬರ ಶವಗಳನ್ನು ಕಂಡುಬಂದಿವೆ. ಸ್ಥಳದಲ್ಲಿದ್ದ ಕುರಿಗಾಹಿಗಳ ಸಹಾಯದಿಂದ ಮಕ್ಕಳನ್ನು ಕೆರೆಯಿಂದ ಹೊರತೆಗೆದು ದಡಕ್ಕೆ ತರಲಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.