ಮಂಡ್ಯ ಸಮೀಪ ಬೀಡುಬಿಟ್ಟ ಎರಡು ಕಾಡಾನೆಗಳು

| Published : Aug 07 2024, 01:06 AM IST

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ಹಲವು ಹಳ್ಳಿಗಳಲ್ಲಿ ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆ ಹಾನಿ ಮಾಡಿದ್ದವು. ಕಳೆದ ರಾತ್ರಿ ಮಂಡ್ಯ ನಗರಕ್ಕೆ ಪ್ರವೇಶ ಮಾಡಿರುವ ಆನೆಗಳು ಕಲ್ಲಹಳ್ಳಿ ವಿವಿ ನಗರ ಭಾಗದಲ್ಲಿ ಅಡ್ಡಾಡಿದ್ದವು, ನಾಯಿ ಬೊಗಳುತ್ತಿರುವುದನ್ನು ಕಂಡ ಸ್ಥಳೀಯರು ನೋಡಲಾಗಿ ಆನೆಗಳು ಸಂಚರಿಸುತ್ತಿರುವುದನ್ನು ನೋಡಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾಡು ತೊರೆದು ಗ್ರಾಮೀಣ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಎರಡು ಆನೆಗಳು ಮಂಡ್ಯದತ್ತ ಮುಖ ಮಾಡಿದ್ದು, ನಗರದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿವೆ.

ಮಂಡ್ಯ- ಕಿರುಗಾವಲು ಮಾರ್ಗದ ಸದ್ವಿದ್ಯಾ ಶಾಲೆ ಸಮೀಪದ ಕಬ್ಬಿನ ಗದ್ದೆಯಲ್ಲಿ ಎರಡು ಆನೆಗಳು ಪ್ರತ್ಯಕ್ಷಗೊಂಡಿದ್ದು, ಆನೆಗಳನ್ನು ನೋಡಲು ಜನತೆ ಮುಗಿಬಿದ್ದಿದ್ದಾರೆ.

ಕಾಡಿನಿಂದ ನಾಡಿನತ್ತ ಮುಖ ಮಾಡಿದ್ದ ಆನೆಗಳು ಶ್ರೀರಂಗಪಟ್ಟಣ ತಾಲೂಕಿನ ಹಲವು ಹಳ್ಳಿಗಳಲ್ಲಿ ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆ ಹಾನಿ ಮಾಡಿದ್ದವು. ಕಳೆದ ರಾತ್ರಿ ಮಂಡ್ಯ ನಗರಕ್ಕೆ ಪ್ರವೇಶ ಮಾಡಿರುವ ಆನೆಗಳು ಕಲ್ಲಹಳ್ಳಿ ವಿವಿ ನಗರ ಭಾಗದಲ್ಲಿ ಅಡ್ಡಾಡಿದ್ದವು, ನಾಯಿ ಬೊಗಳುತ್ತಿರುವುದನ್ನು ಕಂಡ ಸ್ಥಳೀಯರು ನೋಡಲಾಗಿ ಆನೆಗಳು ಸಂಚರಿಸುತ್ತಿರುವುದನ್ನು ನೋಡಿದ್ದರು. ಮುಂಜಾನೆ ವೇಳೆಗೆ ಜಾಗ ಬದಲಾಯಿಸಿದ್ದ ಎರಡು ಆನೆಗಳು ಮಂಡ್ಯ-ಕಿರುಗಾವಲು ಮಾರ್ಗದಲ್ಲಿರುವ ಸದ್ವಿದ್ಯಾ ಶಾಲೆ ಬಳಿಯ ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷವಾಗಿವೆ.

ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆ ಆನೆ ಮಾಡುತ್ತಾ ಅಡ್ಡಾಡುತ್ತಿರುವ ಎರಡು ಆನೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಜನತೆ ನೋಡಲು ಮುಗಿ ಬಿದ್ದಿದ್ದು, ಅರುಣ ಇಲಾಖೆ ಸಿಬ್ಬಂದಿ ಮುನ್ನೆಚ್ಚರಿಕೆವಹಿಸಿ ಆನೆಗಳ ಸಮೀಪ ಜನತೆ ಸುಳಿಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.

ರಾತ್ರಿ ವೇಳೆಗೆ ಕಾರ್ಯಾಚರಣೆ ನಡೆಸಿ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಅಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಸಿದ್ಧತೆ ಕೈಗೊಂಡಿದ್ದಾರೆ.