ಬಿಜೆಪಿ ಪಾದಯಾತ್ರೆ ಆರಂಭಕ್ಕು ಮುನ್ನವೇ ಕಾಂಗ್ರೆ ಸಚಿವ ಸಂಪುಟದ ಒಂದು ವಿಕೆಟ್‌ ಪತನಗೊಂಡಿದ್ದು, ಯಾತ್ರೆ ಬಳ್ಳಾರಿ ತಲುಪುವಷ್ಟರಲ್ಲಿ ಇನ್ನೂ ಎರಡು ವಿಕೆಟ್‌ ಗಳು ಬೀಳಲಿವೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು (ರಾಯಚೂರು)

ಬಿಜೆಪಿ ಪಾದಯಾತ್ರೆ ಆರಂಭಕ್ಕು ಮುನ್ನವೇ ಕಾಂಗ್ರೆ ಸಚಿವ ಸಂಪುಟದ ಒಂದು ವಿಕೆಟ್‌ ಪತನಗೊಂಡಿದ್ದು, ಯಾತ್ರೆ ಬಳ್ಳಾರಿ ತಲುಪುವಷ್ಟರಲ್ಲಿ ಇನ್ನೂ ಎರಡು ವಿಕೆಟ್‌ ಗಳು ಬೀಳಲಿವೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.

ಜಿಲ್ಲೆ ಲಿಂಗಸುಗೂರು ಪಟ್ಟಣದ ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬಳ್ಳಾರಿ ಚಲೋ ಪಾದಯಾತ್ರೆ ಸಮಾವೇಶದಲ್ಲಿ ಮಾತನಾಡಿ, ರಾಜ್ಯದ ಕಾಂಗ್ರೆಸ್‌ ಸರ್ಕಾರ ಮುಳುಗುವ ಹಡಗಾಗಿದೆ, ಕೊಟ್ಟ ಕುದುರೆಯನ್ನು ಹೇರಲು ಸಿಎಂ ಡಿ.ಕೆ.ಶಿವಕುಮಾರ ಬಹಳ ಪರಿಶ್ರಮ ಪಡುತ್ತಿದ್ದಾರೆ. ಕೊಟ್ಟ ಕುದುರೆಯನ್ನು ಏರದ ಡಿ.ಕೆ.ಶಿವಕುಮಾರ ವೀರನೂ ಅಲ್ಲ ಧೀರನೂ ಅಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ನೀರಾವರಿ ಸಾವಿರಾರು ಕೋಟಿ ಅನುದಾನ ನೀಡಿ ರೈತ ಹಿತ ಕಾಯುವ ಕೆಲಸ ಮಾಡಿದ್ದೇವೆ ಎಂದು ಯಡಿಯೂರಪ್ಪನವರನ್ನು ಕೊಂಡಾಡಿದ ಅವರು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರ ಮೂರು ವರ್ಷದಲ್ಲಿ ನೀರಾವರಿಗೆ ಬಿಡಿಗಾಸೂ ಕೊಟ್ಟಿಲ್ಲ, ಉತ್ತರ ಕರ್ನಾಟಕದ ನೀರಾವರಿ ಯೋಜನೆ ಸಂಪೂರ್ಣ ಸ್ಥಗಿತಗೊಂಡಿದ್ದು, ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಬೇಕು ಇಲ್ಲವಾದಲ್ಲಿ ಉತ್ತರ ಕರ್ನಾಟಕದಲ್ಲಿ ಸಚಿವ ಸಂಪುಟದ ಸಚಿವರು ಓಡಾಟ ಕಷ್ಟವಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ದಲಿತರನ್ನು ಕಡೆಗಣಿಸಿದೆ, ಬಿಜೆಪಿ ಎಸ್ಸಿಗೆ 15 ರಿಂದ 17 ಮತ್ತು ಎಸ್ಟಿ ಸಮುದಾಯಕ್ಕೆ 3 ರಿಂದ 7 ಮೀಸಲಾತಿ ಹೆಚ್ಚಳ ಮಾಡಿತ್ತು, ಆದರೆ ಕಾಂಗ್ರೆಸ್‌ ಅದನ್ನು ಪಾಲಿಸಿಲ್ಲವೆಂದು ಆರೋಪಿಸಿದರು.

ರಾಜ್ಯದಲ್ಲಿ ಬರ ಆವರಿಸಿದ್ದು, 101 ತಾಲೂಕುಗಳನ್ನು ಬರ ಪೀಡಿತ ಅಂತ ಘೊಷಣೆ ಮಾಡಿದರೆ ಸಾಲದು ಎಲ್ಲ ತಾಲೂಕುಗಳನ್ನು ಬರ ಪ್ರದೇಶವೆಂದು ಪರಿಗಣಿ ಸಬೇಕು, ದೆಹಲಿ ಮತ್ತು ಬೆಂಗಳೂರಿಗೆ ವಿಮಾನದಲ್ಲಿ ಹಾರಾಡುತ್ತಿರುವ ಸರ್ಕಾರದ ನಾಯಕರು ಭೂಮಿಯ ಮೇಲೆ ನಡೆದಾಡಬೇಕು ಹಾಗ ಬರದ ನಿಜವಾದ ಪರಿಸ್ಥಿತಿ ಅರಿವಿಗೆ ಬರಲಿದೆ ಆ ಕಾರ್ಯವನ್ನು ನಾವೆಲ್ಲ ಮಾಡಬೇಕು ಎಂದರು.