ಕುದೂರು: ಗ್ರಾಪಂ ಅನುಮತಿ ಪಡೆಯದೆ ಒಂದು ರಸ್ತೆಗೆ ಎರಡೆರೆಡು ಹೆಸರಿಟ್ಟು ಗ್ರಾಪಂ ಮಾಜಿ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಕುದೂರು: ಗ್ರಾಪಂ ಅನುಮತಿ ಪಡೆಯದೆ ಒಂದು ರಸ್ತೆಗೆ ಎರಡೆರೆಡು ಹೆಸರಿಟ್ಟು ಗ್ರಾಪಂ ಮಾಜಿ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುದೂರು ಗ್ರಾಪಂ ಕಟ್ಟಡದ ಪಕ್ಕದಲ್ಲಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ರಸ್ತೆಗೆ ಪಂಪ ಮಹಾಕವಿ ರಸ್ತೆ ಎಂದು ಹೆಸರಿಡಲಾಗಿತ್ತು. ಈಗ ಅದೇ ರಸ್ತೆಗೆ ದೇವರದಾಸಿಮಯ್ಯ ರಸ್ತೆ ಎಂದು ಮರು ನಾಮಕರಣ ಮಾಡಿದ್ದಾರೆ.

2008ರಲ್ಲಿ ಅವಿಭಜಿತ ರಾಮನಗರ ಜಿಲ್ಲೆಯಾದ ಸಂದರ್ಭದಲ್ಲಿ (ಈಗಿನ ಬೆಂಗಳೂರು ದಕ್ಷಿಣ ಜಿಲ್ಲೆ) ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿತ್ತು. ಆಗ ಈ ಎರಡೂ ಜಿಲ್ಲೆಯೂ ಸೇರಿ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕುದೂರು ಗ್ರಾಮದಲ್ಲಿ ಆಯೋಜಿಸಲಾಗಿತ್ತು.

ಆ ಸಮ್ಮೇಳನದ ಅಧ್ಯಕ್ಷತೆಯನ್ನು ಡಾ.ಟಿ.ವಿ,ವೆಂಕಟಾಚಲಶಾಸ್ತ್ರಿ ವಹಿಸಿದ್ದರು. ಈ ನೆನಪಿಗಾಗಿ ಕುದೂರು ಗ್ರಾಮದ ಬಸ್‌ ನಿಲ್ದಾಣ, ಬೈಪಾಸ್, ನಿಶ್ಯಭ್ದನಗರ ಮತ್ತು ಲಕ್ಷ್ಮೀದೇವಿನಗರ ಮತ್ತು ರಾಮಮಂದಿರ ಬಡವಾವಣೆಯ ರಸ್ತೆಗಳಿಗೆ ಕನ್ನಡ ಕವಿಗಳ ಹೆಸರಿಡಲು ಗ್ರಾಪಂ ನಡಾವಳಿಯನ್ನು ಮಾಡಿ ಅನುಮೋದನೆ ನೀಡಲಾಗಿತ್ತು.

ಆಗ ಬಸ್ ನಿಲ್ಧಾಣದಿಂದ ಬೈಪಾಸ್‌ ಹೊಂದಿಕೊಂಡಿರುವ ರಸ್ತೆಗೆ ಪಂಪ ಮಹಾಕವಿ ರಸ್ತೆ ಎಂದು ನಾಮಕರಣ ಮಾಡಲಾಗಿತ್ತು. ಗ್ರಾಪಂ ಚುನಾವಣೆಯ ಹಿನ್ನೆಲೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಬಿ.ಬಾಲರಾಜ್ ಈಗಾಗಲೆ ಹೆಸರಿಟ್ಟಿರುವ ರಸ್ತೆಗೆ ಮತ್ತೊಮ್ಮೆ ದೇವರದಾಸಿಮಯ್ಯ ರಸ್ತೆ ಎಂದು ಮರು ನಾಮಕರಣ ಮಾಡಿದ್ದಾರೆ. ಇದಕ್ಕೆ ಪಂಚಾಯ್ತಿ ನಡಾವಳಿಯಾಗಿಲ್ಲ. ಈ ಬಗ್ಗೆ ಚರ್ಚೆಯೂ ಆಗಿಲ್ಲ. ಏಕಾಏಕಿ ಗ್ರಾಮದಲ್ಲಿ ಪ್ರಶ್ನಿಸುವವರು ಇಲ್ಲ ಎಂದು ಇಂತಹ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೇ ಎಲ್ಲಾ ರಸ್ತೆಗಳಿಗೆ ಕನ್ನಡ ಕವಿಗಳ ಹೆಸರಿಡುವ ಸಂದರ್ಭದಲ್ಲಿ ಗ್ರಾಮದ ಲಕ್ಷ್ಮೀದೇವಿ ನಗರದ ಒಂದು ರಸ್ತೆಗೆ ದೇವರದಾಸಿಮಯ್ಯ ರಸ್ತೆ ಹೆಸರಿಡಲಾಗಿದೆ. ಪಂಪಮಹಾಕವಿ ಮಹಾಕವಿ ರಸ್ತೆಯ ನಾಮಫಲಕವನ್ನು ಬ್ಯಾಂಕ್ ಮುಂದಿರುವ ಮರಕ್ಕೆ ತಿರುವಿ ಹಾಕಲಾಗಿದೆ.

ಕೋಟ್ ................

ದೇವರ ದಾಸಿಮಯ್ಯ ಬಗೆಗಾಗಲಿ, ಪಂಪ ಮಹಾಕವಿಯ ಬಗೆಗಾಗಲಿ ಜನರಿಗೆ ಭಕ್ತಿ ಗೌರವಗಳಿವೆ. ಆದರೆ ಚುನಾವಣಾ ತಂತ್ರಕ್ಕೆ ಕವಿಗಳ ಹೆಸರನ್ನು ಹೀಗೆ ಅವಮಾನ ಮಾಡುವುದು ಸರಿಯಲ್ಲ. ಮಹರ್ಷಿಗಳ ಪುತ್ಥಳಿಯನ್ನು ಗಣಪತಿ ದೇವಾಲಯದ ಮುಂದೆ ಅನಾವರಣ ಮಾಡಲು ಮರ ಕಡಿದಿದ್ದಾರೆ. ಮಹರ್ಷಿಗಳ ಪುತ್ಥಳಿಯನ್ನು ಈಗಿರುವ ಜಾಗದಲ್ಲಿ ಅನಾವರಣ ಮಾಡುತ್ತಿರುವುದು ಸರಿಯಲ್ಲ.

- ಕೆ.ಟಿ.ನರಸಿಂಹಮೂರ್ತಿ, ಕಾರ್ಯದರ್ಶಿ, ಕೆಆರ್‌ಎಸ್ ಪಕ್ಷ

4ಕೆಆರ್ ಎಂಎನ್ 3,4.ಜೆಪಿಜಿ

3.ಮರವೊಂದಕ್ಕೆ ಪಂಪಮಹಾಕವಿಯ ನಾಮಫಲಕವನ್ನು ತಲೆಕೆಳಗು ಮಾಡಿ ಒರಗಿಸಿರುವುದು.

4.ಈಗಾಗಲೇ ನಾಮಕರಣಗೊಂಡಿರುವ ರಸ್ತೆಗೆ ಮತ್ತೊಮ್ಮೆ ದೇವರದಾಸಿಮಯ್ಯು ರಸ್ತೆ ಎಂದು ಹೆಸರಿಟ್ಟಿರುವುದು.