ಆನೆಧಾಮಕ್ಕಾಗಿ ಎರಡು ಸಾವಿರ ಹೆಕ್ಟೇರ್ ಭೂಮಿ

| Published : Mar 05 2025, 12:32 AM IST

ಆನೆಧಾಮಕ್ಕಾಗಿ ಎರಡು ಸಾವಿರ ಹೆಕ್ಟೇರ್ ಭೂಮಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಹಾಸನ ಮತ್ತು ಮಡಿಕೇರಿ ಜಿಲ್ಲೆಗೆ ಸಂಬಂಧಿಸಿದಂತೆ ಆನೆಧಾಮಕ್ಕಾಗಿ ಎರಡು ಸಾವಿರ ಹೆಕ್ಟೇರ್ ಭೂಮಿ ಮೀಸಲಿಟ್ಟಿದ್ದು, ಈ ಭಾರಿಯ ಬಜೆಟ್‌ನಲ್ಲಿ 100 ಕೋಟಿ ರು. ಆಯವ್ಯಯ ಹಣ ನೀಡಲಾಗುತ್ತದೆ ಎಂದು ಅರಣ್ಯ ಜೀವಿಶಾಸ್ತ್ರ ಹಾಗೂ ಪರಿಸರ ಮಂತ್ರಿ ಈಶ್ವರ್ ಬಿ ಖಂಡ್ರೆ ಹೇಳಿದರು. ಆನೆಗಳ ಕಾರಿಡಾರ್ ನಿರ್ಮಿಸಿ ಆನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಬೇಲೂರು: ಚಿಕ್ಕಮಗಳೂರು, ಹಾಸನ ಮತ್ತು ಮಡಿಕೇರಿ ಜಿಲ್ಲೆಗೆ ಸಂಬಂಧಿಸಿದಂತೆ ಆನೆಧಾಮಕ್ಕಾಗಿ ಎರಡು ಸಾವಿರ ಹೆಕ್ಟೇರ್ ಭೂಮಿ ಮೀಸಲಿಟ್ಟಿದ್ದು, ಈ ಭಾರಿಯ ಬಜೆಟ್‌ನಲ್ಲಿ 100 ಕೋಟಿ ರು. ಆಯವ್ಯಯ ಹಣ ನೀಡಲಾಗುತ್ತದೆ ಎಂದು ಅರಣ್ಯ ಜೀವಿಶಾಸ್ತ್ರ ಹಾಗೂ ಪರಿಸರ ಮಂತ್ರಿ ಈಶ್ವರ್ ಬಿ ಖಂಡ್ರೆ ಹೇಳಿದರು.

ತಾಲೂಕಿನ ಅರೇಹಳ್ಳಿ ಹಾಗೂ ಬಿಕ್ಕೋಡು ಹೋಬಳಿಯಾದ್ಯಂತ ಕಾಡಾನೆ ಹಾವಳಿ ಮಿತಿ ಮೀರಿದ ಹಿನ್ನೆಲೆಯಲ್ಲಿ ಹಾಗೂ ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಆಗಮಿಸಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ ವಾಪಸ್ ತೆರಳುವ ವೇಳೆ ರಾಜ್ಯ ಕಿಸಾನ್ ಘಟಕದ ಸಂಚಾಲಕ ತುಳಸೀದಾಸ್‌ರವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ, ರೈತರ ಬೆಳೆ ನಷ್ಟಕ್ಕೆ ನೀಡುತ್ತಿರುವ ಪರಿಹಾರ ಸಾಲುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ನೇಮಕ ಮಾಡಿ ಸೂಕ್ತ ಪರಿಹಾರ ನೀಡಲು ವರದಿ ತರಿಸಲಾಗುವುದು. ಈಗಾಗಲೇ ಬೆಳೆ ನಷ್ಟ ಹೊಂದಿದ ಬೆಳೆಗಾರರಿಗೆ ಪರಿಹಾರ ಘೋಷಣೆ ಮಾಡಲಾಗಿದ್ದು, ವಿಳಂಬವಾದರೂ ವಿತರಣೆಯಂತೂ ಆಗುತ್ತದೆ. ಆನೆಗಳ ಕಾರಿಡಾರ್ ನಿರ್ಮಿಸಿ ಆನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಸತತ ಮೂರು ದಿನ ಆನೆ ದಾಳಿಗೆ ಚಂದ್ರೇಗೌಡ ಎಂಬುವರ ತೋಟ ನಾಶವಾಗಿದ್ದು ಕಾಡಾನೆಯಿಂದ ಬೆಳೆ ಹಾನಿ ಒಳಗಾದವರ ಪಟ್ಟಿಯನ್ನು ಶೀಘ್ರದಲ್ಲಿ ತರಿಸಿಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ ಶಿವರಾಂ, ಶಾಸಕ ಸುರೇಶ್, ಎಚ್.ಡಿ ತುಳಸೀದಾಸ್, ಮಮತಾ ತುಳಸೀದಾಸ್, ಅಣ್ಣಪ್ಪ, ಶಶಿ ಕುಮಾರ್, ಸೀರಾಜ್ ಅಹ್ಮದ್, ಶೇಖ್ ಅಬ್ದುಲ್ಲಾ, ಭೂಪಾಲ್, ವರುಣ್, ಸುಬ್ರಹ್ಮಣ್ಯ, ಅನಿಲ್, ಹೇಮಂತ್, ಮಂಜುನಾಥ್ ಹಾಗೂ ಇನ್ನಿತರ ಸ್ಥಳೀಯ ಮುಖಂಡರು ಇದ್ದರು.