ಕನ್ನಡಪ್ರಭ ವಾರ್ತೆ ಅಥಣಿ ಕಬ್ಬು ಸಾಗಿಸುವ ಡಂಪಿಂಗ್ ಮಷಿನ್ ಚಾಲಕ ಕೂಲಿ ಕೆಲಸದಲ್ಲಿ ನಿರತವಾಗಿದ್ದ ಮಹಿಳೆಯರನ್ನು ಗಮನಿಸದೆ ಹಿಮ್ಮುಖವಾಗಿ ವಾಹನ ಚಲಾಯಿಸಿದ ಪರಿಣಾಮ ಇಬ್ಬರು ರೈತ ಮಹಿಳೆಯರು ಸಾವನ್ನಪ್ಪಿದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.ಸತ್ತಿ ಗ್ರಾಮದ ನಿವಾಸಿಗಳಾದ ಬೌರವ್ವ ಲಕ್ಷ್ಮಣ ಕೋಬಡಿ (60) ಹಾಗೂ ಲಕ್ಷ್ಮಿಬಾಯಿ ಮಲ್ಲಪ್ಪ ರುದ್ರಗೌಡರ(65) ಮೃತ ಮಹಿಳೆಯರು.
ಕನ್ನಡಪ್ರಭ ವಾರ್ತೆ ಅಥಣಿ
ಕಬ್ಬು ಸಾಗಿಸುವ ಡಂಪಿಂಗ್ ಮಷಿನ್ ಚಾಲಕ ಕೂಲಿ ಕೆಲಸದಲ್ಲಿ ನಿರತವಾಗಿದ್ದ ಮಹಿಳೆಯರನ್ನು ಗಮನಿಸದೆ ಹಿಮ್ಮುಖವಾಗಿ ವಾಹನ ಚಲಾಯಿಸಿದ ಪರಿಣಾಮ ಇಬ್ಬರು ರೈತ ಮಹಿಳೆಯರು ಸಾವನ್ನಪ್ಪಿದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.ಸತ್ತಿ ಗ್ರಾಮದ ನಿವಾಸಿಗಳಾದ ಬೌರವ್ವ ಲಕ್ಷ್ಮಣ ಕೋಬಡಿ (60) ಹಾಗೂ ಲಕ್ಷ್ಮಿಬಾಯಿ ಮಲ್ಲಪ್ಪ ರುದ್ರಗೌಡರ(65) ಮೃತ ಮಹಿಳೆಯರು. ತಾಲೂಕಿನ ಸತ್ತಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಇಬ್ಬರು ರೈತ ಮಹಿಳೆಯರು ಕೆಲಸ ಮಾಡುತ್ತಿದ್ದರು. ಈ ವೇಳೆ ಕಬ್ಬು ಕಟಾವು ಮಾಡುವ ಮಷಿನ್ ಜೊತೆ ಇರುವ ಕಬ್ಬಿನ ಡಂಪಿಂಗ್ ಟ್ರ್ಯಾಕ್ಟರ್ ಡಬ್ಬಿ ಹಿಂಬದಿಯಿಂದ ಗುದ್ದಿದ ಪರಿಣಾಮ ಸ್ಥಳದಲ್ಲಿಯೇ ಇಬ್ಬರೂ ಮೃತಪಟ್ಟಿದ್ದಾರೆ. ಇಳಿ ವಯಸ್ಸಿನಲ್ಲಿ ತಮ್ಮ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸಲು ನಿತ್ಯ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಈ ಮಹಿಳೆಯರ ದಾರುಣ ಸಾವು ಕುಟುಂಬ ಸದಸ್ಯರಿಗೆ ಬರಸಿಡಿಲು ಬಡಿದಂತಾಗಿದೆ. ಇಬ್ಬರೂ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪ್ರಕರಣದ ದಾಖಲಿಕೊಂಡಿದ್ದಾರೆ. ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.