10 ರಂದು ಎರಡು ಕೃತಿಗಳ ಲೋಕಾರ್ಪಣೆ

| Published : Feb 07 2024, 01:45 AM IST

ಸಾರಾಂಶ

ಎಸ್. ಶಿಶಿರಂಜನ್ ಅವರ ನವಭಾರತ ಜನನಿಯ ತನುಜಾತೆ- ಕವನ ಸಂಕಲನ, ನಾಗೇಶ ತಳವಾರ ಅವರ ಚಿಮಣಿ ಬೆಳಕಿನ ಬದುಕು-

ಕನ್ನಡಪ್ರಭ ವಾರ್ತೆ ಮೈಸೂರು

ಎಸ್. ಶಿಶಿರಂಜನ್ ಅವರ ನವಭಾರತ ಜನನಿಯ ತನುಜಾತೆ- ಕವನ ಸಂಕಲನ, ನಾಗೇಶ ತಳವಾರ ಅವರ ಚಿಮಣಿ ಬೆಳಕಿನ ಬದುಕು- ನಾಟಕ ಕೃತಿಗಳು ಫೆ.10 ರಂದು ಸಂಜೆ 4.30ಕ್ಕೆ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಲೋಕಾರ್ಪಣೆಯಾಗಲಿವೆ.

ಸ್ವಜನ್ಯ ಕಲಾ ವೇದಿಕೆ, ಸಿಂದಗಿಯ ಮಾಧ್ಯಮರಂಗ ಫೌಂಡೇಷನ್ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಚಾಮರಾಜನಗರ ವಿವಿ ಕುಲಪತಿ ಪ್ರೊ.ಎಂ.ಆರ್. ಗಂಗಾಧರ ಕೃತಿಗಳನ್ನು ಬಿಡುಗಡೆ ಮಾಡುವರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸುವರು. ಕೃತಿಗಳನ್ನು ಕುರಿತು ಕ್ರಮವಾಗಿ ವಿಮರ್ಶಕ ಡಾ.ಎಚ್.ಎಸ್. ಸತ್ಯನಾರಾಯಣ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ. ವಿಜಯಕುಮಾರಿ ಎಸ್. ಕರಿಕಲ್ ಮಾತನಾಡುವರು. ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಎಸ್ ಬಿಎಂ ಪ್ರಸನ್ನ, ಜಿಲ್ಲಾ ಕಸಾಪ ಅದ್ಯಕ್ಷ ಮಡ್ಡೀಕೆರ ಗೋಪಾಲ್, ಮಾಧ್ಯಮರಂಗ ಫೌಂಡೇಷನ್ ಉಪಾಧ್ಯಕ್ಷ ಪ್ರಕಾಶ್ ಏಳುಗುಡ್ಡ ಮುಖ್ಯ ಅತಿಥಿಗಳಾಗಿರುವರು.

ಸ್ವಜನ್ಯ ಕಲಾ ವೇದಿಕೆ ಸಂಚಾಲಕ ಎಲ್. ಶ್ರೇಯಸ್, ಮಾಧ್ಯಮರಂಗ ಫೌಂಡೇಷನ್ ಪ್ರಧಾನ ಕಾರ್ಯದರ್ಶಿ ಎಸ್.ಪಿ. ವಿಜಯಕುಮಾರ ಉಪಸ್ಥಿತರಿರುವರು. ಎರಡು ಕೃತಿಗಳು