ಕಾರ್ಕಳದ ವಿವಾಹಿತೆ ಹಿಂದು ಮಹಿಳೆ ಮತ್ತು ಮುಸ್ಲಿಂ ಯುವಕನ ಬಗ್ಗೆ ಧರ್ಮಗಳ ನಡುವೆ ವೈಮನಸ್ಸು ಉಂಟುಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ದ.ಕ. ಜಿಲ್ಲೆಯ ಇಬ್ಬರು ಯುವಕರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಉಡುಪಿ: ಕಾರ್ಕಳದ ವಿವಾಹಿತೆ ಹಿಂದು ಮಹಿಳೆ ಮತ್ತು ಮುಸ್ಲಿಂ ಯುವಕನ ಬಗ್ಗೆ ಧರ್ಮಗಳ ನಡುವೆ ವೈಮನಸ್ಸು ಉಂಟುಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ದ.ಕ. ಜಿಲ್ಲೆಯ ಇಬ್ಬರು ಯುವಕರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಪುತ್ತೂರು ರಸ್ತೆಯ ನಿವಾಸಿ ನಿತೇಶ್ ಕೆ. (20) ಮತ್ತು ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ ನಿವಾಸಿ ಹಿತೇಶ್ ಎ. (19) ಬಂಧಿತರು.ಅವರು 2025ರ ಮೇ 16ರಂದು ಇನ್ಸ್‌ಟಾಗ್ರಾಂ ನಲ್ಲಿ ಈ ಧಾರ್ಮಿಕ ವೈಷಮ್ಯ ಹರಡುವಂತಹ ಪೋಸ್ಟ್ ಹಾಕಿದ್ದು, ಅವರ ಮೇಲೆ ಮಣಿಪಾಲ ಠಾಣೆಯಲ್ಲಿ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದರು. ಅದರಂತೆ ಜ. 30ರಂದು ನಿತೇಶ್‌ನನ್ನು ಪುತ್ತೂರು ತಾಲೂಕಿನ ಕಲ್ಲಬ ಜಂಕ್ಷನ್ ಬಳಿಯಿಂದ ಹಾಗೂ ಫೆ. 1ರಂದು ಹಿತೇಶ್‌ನನ್ನು ಮಂಗಳೂರು ಲಾಲ್‌ಬಾಗ್‌ನಲ್ಲಿ ಬಂಧಿಸಿ ಅವರ ಮೊಬೈಲುಗಳನ್ನು ಜಫ್ತು ಮಾಡಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.