Two youths who went swimming and went missing found dead

ತೀರ್ಥಹಳ್ಳಿ: ಕಳೆದ ಸೋಮವಾರ ಪಟ್ಟಣ ಸಮೀಪ ತುಂಗಾನದಿಯಲ್ಲಿ ಸ್ನಾನಕ್ಕೆ ಹೋಗಿದ್ದು ಕಾಣೆಯಾಗಿದ್ದ ಇಬ್ಬರು ಯುವಕರ ಶವ ಬುಧವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಪಟ್ಟಣದ ಬಾಳೇಬೈಲು ಕುಡಿಯುವ ನೀರು ಸರಬರಾಜು ಕೇಂದ್ರದ ಬಳಿ ದೊರೆತಿದೆ. ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದ 26 ವರ್ಷದ ಶಿವು ಮತ್ತು ದಾವಣಗೆರೆ ತಾಲೂಕು ಬಲ್ಲೂರು ಗ್ರಾಮದ ರುದ್ರೇಶ 21 ವರ್ಷ ಮೃತರು. ಸೋಮವಾರ ಕೆಲಸ ಮುಗಿಸಿ ನದಿಗೆ ಸ್ನಾನಕ್ಕೆ ಇಳಿದಾದ ಮುಳುಗಿ ಸಾವನ್ನಪ್ಪಿದ್ದಾರೆ. ಕೂಲಿಗಾಗಿ ಇಲ್ಲಿಗೆ ಬಂದಿದ್ದ ಈ ಯುವಕರು ನದಿದಡದಲ್ಲಿ ಮೀನು ಹಿಡಿಯುತ್ತಿದ್ದವರ ಎಚ್ಚರಿಕೆಯನ್ನೂ ಮೀರಿ ನೀರಿಗೆ ಇಳಿದಿದ್ದರು ಎನ್ನಲಾಗಿದೆ. ಶವಗಳನ್ನು ಮೇಲಕ್ಕೆತ್ತುವಲ್ಲಿ ಮುಳುಗು ತಜ್ಞರಾದ ಈಶ್ವರ ಮಲ್ಪೆ ತಂಡದವರು ಹಾಗೂ ಸ್ಥಳೀಯ ಅಗ್ನಿಶಾಮಕದಳದವರು ಸಾರ್ವಜನಿಕರು ಶ್ರಮಿಸಿದ್ದರು. ಶವ ಪರೀಕ್ಷೆಯ ನಂತರ ಶವಗಳನ್ನು ಮೃತರ ಊರಿಗೆ ಕೊಂಡೊಯ್ಯಲಾಗಿದೆ. ಪಿ. ಮಂಜಪ್ಪ ಎಂಬುವವರು ನೀಡಿದ ದೂರಿನ ಆಧಾರದಲ್ಲಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.