ಉಚ್ಚಿಲ: ದ.ಕ. ಮೊಗವೀರ ಮಹಾಜನ ಸಂಘ ಸಂಚಾಲಿತ ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಶುಕ್ರವಾರ ವೈಭವದಿಂದ ನೆರವೇರಿತು. ಈ ಸಂದರ್ಭ ಸಹಸ್ರಾರು ಮಂದಿ ಭಕ್ತಾಧಿಗಳು ಮಹಾ ಅನ್ನ ಸಂತರ್ಪಣೆಯಲ್ಲಿ ಪ್ರಸಾದ ಸ್ವೀಕರಿಸಿದರು.
ದೇವಳದ ತಂತ್ರಿವರ್ಯರಾದ ವೇಮೂ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ದೇವಳದ ಪ್ರಧಾನ ಅರ್ಚಕ ವೇಮೂ ರಾಘವೇಂದ್ರ ಉಪಾಧ್ಯಾಯ ಅವರು ಧಾರ್ಮಿಕ ವಿಧಿ ವಿಧಾನ ಪೂರೈಸಿದರು. ಈ ಸಂದರ್ಭ ಮೊಗವೀರ ಮುಂದಾಳು ನಾಡೋಜಾ ಡಾ. ಜಿ. ಶಂಕರ್, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಕವಿತಾಶರತ್, ಕಾರ್ಯದರ್ಶಿ ಪೂರ್ಣಿಮಾ ಚಂದ್ರಶೇಖರ್, ಬೆಳ್ಳಿರಥ ಸಮಿತಿಯ ಅಧ್ಯಕ್ಷೆ ಉಷಾರಾಣಿ, ಕಾರ್ಯದರ್ಶಿ ಶುಭಾ ದಿನೇಶ್, ಪ್ರಮುಖರಾದ ನಾರಾಯಣ ಕರ್ಕೇರಾ, ಸಂಜೀವ ಬಂಗೇರ, ಮೋಹನ್ ಬಂಗೇರ, ಮನೋಜ್ ಕಾಂಚನ್, ವಾಸುದೇವ ಸಾಲ್ಯಾನ್, ಸುಜಿತ್ ಸಾಲ್ಯಾನ್, ನಿಶಾನ್ ಕುಂದರ್ ಏರ್ಮಾಳು, ಅಶೋಕ್ ಸಾಲ್ಯಾನ್ ಪಡುಬಿದ್ರಿ, ಸರ್ವೋತ್ತಮ ಕುಂದರ್, ಗುಂಡು ಬಿ ಅಮೀನ್, ಸುಜಿತ್ ಸಾಲ್ಯಾನ್, ದಿನೇಶ್ ಎರ್ಮಾಳು, ಸತೀಶ್ ಸಾಲ್ಯಾನ್ ಎರ್ಮಾಳು ಮತ್ತಿತರರು ಉಪಸ್ಥಿತರಿದ್ದರು.ಉಚ್ಛಿಲ ಶ್ರೀ ಮಹಾಲಕ್ಷ್ಮೀ ದೇವಿಯ ವೈಭವದ ಜಾತ್ರೆ ಸಂಪನ್ನ
ದ.ಕ. ಮೊಗವೀರ ಮಹಾಜನ ಸಂಘ ಸಂಚಾಲಿತ ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಶುಕ್ರವಾರ ವೈಭವದಿಂದ ನೆರವೇರಿತು. ಈ ಸಂದರ್ಭ ಸಹಸ್ರಾರು ಮಂದಿ ಭಕ್ತಾಧಿಗಳು ಮಹಾ ಅನ್ನ ಸಂತರ್ಪಣೆಯಲ್ಲಿ ಪ್ರಸಾದ ಸ್ವೀಕರಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.