3 ತಿಂಗಳಿಗೊಮ್ಮೆ ಯುಡಿಐಡಿ ಕಾರ್ಡ್‌ ಶಿಬಿರ: ಡಾ. ವಿಶ್ವನಾಥ್

| Published : Jul 03 2024, 12:17 AM IST

ಸಾರಾಂಶ

ಪ್ರತಿ ೩ ತಿಂಗಳಿಗೊಮ್ಮೆ ಯುಡಿಐಡಿ ಕಾರ್ಡ್‌ ಶಿಬಿರ ನಡೆಸಲಾಗುವುದು ಎಂದು ಜಗಳೂರು ತಾಲೂಕು ವೈದ್ಯಾಧಿಕಾರಿ ಡಾ. ವಿಶ್ವನಾಥ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಜಗಳೂರು

ಪ್ರತಿ ೩ ತಿಂಗಳಿಗೊಮ್ಮೆ ಯುಡಿಐಡಿ ಕಾರ್ಡ್‌ ಶಿಬಿರ ನಡೆಸಲಾಗುವುದು ಎಂದು ಜಗಳೂರು ತಾಲೂಕು ವೈದ್ಯಾಧಿಕಾರಿ ಡಾ. ವಿಶ್ವನಾಥ್ ಹೇಳಿದರು.

ಪಟ್ಟಣದ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಕಾರದೊಂದಿಗೆ ಯುಡಿಐಡಿ ಕಾರ್ಡ್‌ ಶಿಬಿರದ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ವಿಕಲಚೇತನ ಅಭಿವೃದ್ಧಿ ಸಂಘದ ರಾಜ್ಯಾಧಕ್ಷ ಮಹಾಂತೇಶ್ ಬ್ರಹ್ಮ ಮಾತನಾಡಿ, ತಾಲೂಕಿನಲ್ಲಿ ವಿವಿಧ ರೀತಿಯ ಅಂಗವೈಕಲ್ಯತೆಯುಳ್ಳ ೬೧ ವಿಕಲಚೇತನರು ಯುಡಿಐಡಿ ಕಾರ್ಡ್‌ ಶಿಬಿರದಲ್ಲಿ ಭಾಗವಹಿಸಿ ಗುರುತಿನ ಚೀಟಿಯ ಅನುಕೂಲತೆ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಇವರೆಲ್ಲರಿಗೂ ಸರ್ಕಾರಿ ಯೋಜನೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ವಿಕಲಚೇತನರ ಅಭಿವೃದ್ಧಿ ಸಂಘ ಮಾಡುತ್ತದೆ ಎಂದು ಭರವಸೆ ನೀಡಿದರು.

ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳ ಜೊತೆಗೂಡಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎಸ್. ನಜೀರ್ ಅಹಮದ್ ಅವರು ಜ್ಯೂಸ್ ಮತ್ತು ನೀರಿನ ಬಾಟಲಿಗಳನ್ನು ವಿತರಿಸಿ, ವಿಶೇಷಚೇತನರಿಗೆ ಆಸರೆ ನೀಡಿದರು.

ಆಸ್ಪತ್ರೆ ಆಡಳಿತಾಧಿಕಾರಿ ಡಾ. ಷಣ್ಮುಖಪ್ಪ, ವಿಕಲಚೇತನರ ನೋಡಲ್ ತಾಲೂಕಿನ ಅಧಿಕಾರಿ ಟಿ.ಶಾಂತಮ್ಮ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಹೊನ್ನೂರಪ್ಪ ಮರೇನಹಳ್ಳಿ, ನಮ್ಮ ಕರ್ನಾಟಕ ಸೇನೆ ರಾಜ್ಯ ಮಹಿಳಾ ಉಪಾಧ್ಯಕ್ಷೆ ಸುಜಾತ ಎಸ್., ರಾಜ್ಯ ಮಹಿಳಾ ಪದವೀಧರ ಘಟಕದ ಉಪಾಧ್ಯಕ್ಷ ಜಯರೆಡ್ಡಿ, ದಾವಣಗೆರೆ ಜಿಲ್ಲಾಧ್ಯಕ್ಷೆ ಮಂಜುಳಾ, ಭರಮಸಮುದ್ರ ಗ್ರಾಪಂ ಸದಸ್ಯ ಜೆ.ಟಿ.ಬಸವರಾಜ್, ವಿಶೇಷಚೇತನ ಬಾಲಕಿ ಸ್ನೇಹ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳ ಪುನರ್ವಸತಿ ಕಾರ್ಯಕರ್ತರು, ಇತರರು ಉಪಸ್ಥಿತರಿದ್ದರು.

- - - -02ಜೆ.ಜಿ.ಎಲ್.1:

ಜಗಳೂರು ತಾಲೂಕು ವೈದ್ಯಾಧಿಕಾರಿ ಡಾ. ವಿಶ್ವನಾಥ್ ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.