ಸಾರಾಂಶ
ಉಡುಪಿ ನಗರ ವ್ಯಾಪ್ತಿಯಲ್ಲಿ ಕಳೆದೆರಡು ತಿಂಗಳಲ್ಲಿ ಪೊಲೀಸರು ಜಪ್ತು ಮಾಡಿದ, ಕಳವಾದ ಮೊಬೈಲ್‌ಗಳನ್ನು ಸೋಮವಾರ ನಗರ ಠಾಣೆಯಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ನಗರ ವ್ಯಾಪ್ತಿಯಲ್ಲಿ ಕಳೆದೆರಡು ತಿಂಗಳಲ್ಲಿ ಪೊಲೀಸರು ಜಪ್ತು ಮಾಡಿದ, ಕಳವಾದ ಮೊಬೈಲ್‌ಗಳನ್ನು ಸೋಮವಾರ ನಗರ ಠಾಣೆಯಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.ಡಿವೈಎಸ್ಪಿ ಪ್ರಭು ಡಿ.ಟಿ. ಅವರು ಸುಮಾರು 3,53,400 ರು. ಮೌಲ್ಯದ 18 ಸ್ಮಾರ್ಟ್ ಮೊಬೈಲ್‌ಗಳನ್ನು ಅವುಗಳ ಮಾಲಕರಿಗೆ ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು, ಮೊಬೈಲ್ ಕಳವಾದ ತಕ್ಷಣ ಇ-ಲಾಸ್ಟ್ ಆ್ಯಪ್ ಅಥವಾ ಸಿಇಐಆರ್ ಪೋರ್ಟಲ್‌ಗೆ ಮೊಬೈಲ್ ಬಗ್ಗೆ ಸರಿಯಾದ ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು, ಅಲ್ಲಿಂದ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಕಳವಾದ ಮೊಬೈಲ್ ಬಗ್ಗೆ ಮಾಹಿತಿ ಹೋಗುತ್ತದೆ, ಅಲ್ಲಿ ತಜ್ಞರು ಕಳವಾದ ಮೊಬೈಲ್‌ಗಳನ್ನು ಟ್ರಾಕ್ ಮಾಡಿ ಪತ್ತೆ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದರು.ಈ ಸಂದರ್ಭ ನಗರಠಾಣೆಯ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್, ಎಸೈಗಳಾದ ಪುನೀತ್ ಕುಮಾರ್ ಬಿ.ಇ., ವೀರಣ್ಣ ಶಿರಗುಂಪಿ, ಭರತೇಶ್, ಗೋಪಾಲಕೃಷ್ಣ ಜೋಗಿ ಮತ್ತು ತಾಂತ್ರಿಕ ಸಿಬ್ಬಂದಿ ವಿನಯಕುಮಾರ್ ಉಪಸ್ಥಿತರಿದ್ದರು.