ಸಾರಾಂಶ
ಉಡುಪಿ: ಉಡುಪಿ ನಗರ ಬಿಜೆಪಿ ಎಸ್.ಟಿ. ಮೋರ್ಚಾ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪಡುಕರೆ ಕಾರುಣ್ಯ ಶಾಲೆಯ ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಅಗತ್ಯವಿರುವ ದಿನಸಿ ಆಹಾರ ಸಾಮಗ್ರಿಗಳು ಹಾಗೂ ಡ್ರಾಯಿಂಗ್ ಪುಸ್ತಕ ಮತ್ತು ಬಣ್ಣದ ಪೆನ್ಸಿಲ್‌ಗಳನ್ನು ವಿತರಿಸಿ ಬೆಳಗ್ಗಿನ ಉಪಹಾರ ನೀಡಲಾಯಿತು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರು ಪಂಜರದೊಳಗಿದ್ದ ಪಾರಿವಾಳವನ್ನು ಸ್ವತಂತ್ರವಾಗಿ ಹಾರಲು ಬಿಟ್ಟು ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ವಿಶೇಷ ರೀತಿಯಲ್ಲಿ ಚಾಲನೆಗೈದು ಶುಭ ಹಾರೈಸಿದರು.ಈ ಸಂದರ್ಭ ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಎಸ್.ಟಿ. ಮೋರ್ಚಾ ಉಡುಪಿ ನಗರಾಧ್ಯಕ್ಷೆ ಸುಮಲತಾ, ಶಾಲಾ ಮುಖ್ಯೋಪಾಧ್ಯಾಯಿನಿ ಆಗ್ನೆಸ್ ಕುಂದರ್, ಟ್ರಸ್ಟಿ ಪ್ರಭಾಕರ ಅಮ್ಮಣ್ಣ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ಕಪ್ಪೆಟ್ಟು, ನಗರಸಭಾ ಸದಸ್ಯರಾದ ಗಿರೀಶ್ ಎಂ. ಅಂಚನ್, ಹರೀಶ್ ಶೆಟ್ಟಿ, ಉಡುಪಿ ನಗರ ಎಸ್.ಟಿ. ಮೋರ್ಚಾದ ಪದಾಧಿಕಾರಿಗಳಾದ ರಾಜ ನಾಯ್ಕ್, ವಿನಯ್, ಸುಭೇದ ದಯಾನಂದ್ ನಾಯ್ಕ, ನವೀನ್ ನಾಯ್ಕ, ಶರತ್, ಗಿರೀಶ್ ನಾಯ್ಕ, ರಾಹುಲ್, ಪ್ರವೀಣ್, ಕಾರ್ತಿಕ್ ನಾಯ್ಕ, ಸಂಜಯ್, ರಾಕೇಶ್, ಅನಂದ್, ರವಿಕಿರಣ್, ಸತೀಶ್ ಹಾಗೂ ಶಾಲಾ ಶಿಕ್ಷಕ ವೃಂದದವರು ಇದ್ದರು.ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಗುಣಾ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.