ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ವಿಜ್ಞಾನ ಮಾದರಿಗಳ ವಸ್ತುಪ್ರದರ್ಶನ

ಉಡುಪಿ: ವಿದ್ಯಾರ್ಥಿಗಳಲ್ಲಿ ಎಳವೆಯಲ್ಲಿಯೇ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎಂದು ಮೌಂಟ್ ರೋಸರಿ ಚರ್ಚಿನ ಸಹಾಯಕ ಧರ್ಮಗುರು ಫಾ.ರೋಹನ್ ಮಸ್ಕರೇನ್ಹಸ್ ಹೇಳಿದರು.

ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ವಿಜ್ಞಾನ ಮಾದರಿಗಳ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಈ ಪ್ರದರ್ಶನದಲ್ಲಿ 1 ಹಾಗೂ 2ನೇ ತರಗತಿಯವರಿಗೆ ಕಸದಿಂದ ರಸ ವಸ್ತುಗಳು, 3ನೇ ತರಗತಿಯಿಂದ 10ನೇ ತರಗತಿಯವರೆಗೆ ವಿದ್ಯಾರ್ಥಿಗಳು ಹೊಸ ಹೊಸ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿ ಅವುಗಳ ನಿರ್ವಹಣೆ ವಿವರ ನೀಡಿದರು. ಮಿಲಾಗ್ರಿಸ್ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಲೋಯ್‌ಲೀಟಾ ಡಿ’ಸೋಜ, ಮಿಲಾಗ್ರಿಸ್ ಪ್ರೌಢಶಾಲಾ ವಿಜ್ಞಾನ ಶಿಕ್ಷಕ ನೆಲ್ಸನ್ ಡಿ’ಸೋಜ, ಶಾಲಾ ಹಳೇ ವಿದ್ಯಾರ್ಥಿ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿ ಸಂಜನಾ ಮುಖ್ಯ ತೀರ್ಪುಗಾರರಾಗಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸಿ. ಆನ್ಸಿಲ್ಲಾ ಡಿ’ಮೆಲ್ಲೊ, ವಿಜ್ಞಾನ ಶಿಕ್ಷಕಿಯರಾದ ಲವೀನಾ, ಸಾರಾ, ಸೌಜನ್ಯಾ, ಮಿಲನಾ, ದಿವ್ಯಜ್ಯೋತಿ, ಮಮತಾ, ಚೈತ್ರಾ ಮತ್ತು ವಿದ್ಯಾಲತಾ ಸಹಕರಿಸಿದರು. ಪ್ರಾಪ್ತಿ ಸ್ವಾಗತಿಸಿದರು. ಕೇವಿನ್ ಮಾರ್ಟಿಸ್ ನಿರೂಪಿಸಿದರು. ಈವಾ ಡಿ’ಸೋಜ ವಂದಿಸಿದರು