ಈಶ ಔಟ್ ರೀಚ್ ಆಯೋಜಿಸುವ ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾಹಬ್ಬ-ಈಶ ಗ್ರಾಮೋತ್ಸವದ 18ನೇ ಆವೃತ್ತಿಯ ಉಡುಪಿ ಕ್ಲಸ್ಟರ್ ಪಂದ್ಯಾವಳಿ ಇಲ್ಲಿನ ಸೈಂಟ್ ಸಿಸಿಲೀಸ್ ಶಾಲೆಯಲ್ಲಿ ಸಂಭ್ರಮದಿಂದ ಸಂಪನ್ನಗೊಂಡಿತು.
ಉಡುಪಿ: ಈಶ ಔಟ್ ರೀಚ್ ಆಯೋಜಿಸುವ ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾಹಬ್ಬ-ಈಶ ಗ್ರಾಮೋತ್ಸವದ 18ನೇ ಆವೃತ್ತಿಯ ಉಡುಪಿ ಕ್ಲಸ್ಟರ್ ಪಂದ್ಯಾವಳಿ ಇಲ್ಲಿನ ಸೈಂಟ್ ಸಿಸಿಲೀಸ್ ಶಾಲೆಯಲ್ಲಿ ಸಂಭ್ರಮದಿಂದ ಸಂಪನ್ನಗೊಂಡಿತು.
ಈ ಕ್ರೀಡಾಕೂಟದಲ್ಲಿ ಉಡುಪಿಯ ವಿವಿಧ ಹಳ್ಳಿಗಳಿಂದ ಒಟ್ಟು 297 ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಥ್ರೋಬಾಲ್ ತಂಡಗಳು ಸ್ಪರ್ಧಿಸಿದವು. ರೋಚಕ ಪಂದ್ಯಗಳ ನಂತರ ಪುರುಷರ ವಾಲಿಬಾಲ್‌ನಲ್ಲಿ ಕುಂದಾಪುರ ಯಡ್ತಾಡಿ ತಂಡ ಪ್ರಥಮ, ಕಾರ್ಕಳ ತಾಲೂಕಿನ ಪಳ್ಳಿ ಫ್ರೆಂಡ್ಸ್ 2ನೇ, ಇನ್ನಾ ಮುದ್ದಾಣು ಮಹಾಲಿಂಗೇಶ್ವರ ತಂಡ 3ನೇ ಮತ್ತು ಉದ್ಯಾವರ ಪಿತ್ರೋಡಿಯ ಯೂಥ್ ಫ್ರೆಂಡ್ಸ್ 4ನೇ ಸ್ಥಾನ ಗೆದ್ದುಕೊಂಡವು. ಇಲ್ಲಿ ವಿಜೇತ ತಂಡಗಳು ಮುಂದೆ ವಿಭಾಗೀಯ ಹಂತದ ಪಂದ್ಯಗಳಲ್ಲಿ ಸ್ಪರ್ಧಿಸಲಿವೆ. ಮಹಿಳೆಯರ ಥ್ರೋಬಾಲ್‌ನಲ್ಲಿ ನಿಟ್ಟೆ ಯುನೈಟೆಡ್ ತಂಡ 1ನೇ, ಕುಂದಾಪುರ ಹಿಲಿಯಾಣ ತಂಡ 2ನೇ, ಶಿರ್ವದ ಕೆ.ಕೆ ಫ್ರೆಂಡ್ಸ್ ತಂಡ 3ನೇ ಮತ್ತು ಕಾಪು ಹೆಜಮಾಡಿ ಬೀಚ್ ಫ್ರೆಂಡ್ಸ್ ತಂಡ 4ನೇ ಸ್ಥಾನ ಪಡೆದುಕೊಂಡವು. ಕ್ರೀಡಾಂಗಣದಲ್ಲಿ ಅತ್ಯುತ್ತಮ ಕ್ರೀಡಾ ಮನೋಭಾವವನ್ನು ತೋರಿದ ಅಶ್ವಿತಾ ಮತ್ತು ಕಾರ್ತಿಕ್ ಅವರಿಗೆ ವಿಶೇಷ ಪ್ರಶಸ್ತಿ ನೀಡಲಾಯಿತು. ಸಮಾರೋಪ ಸಮಾರಂಭದಲ್ಲಿ ಉದ್ಯಮಿಗಳಾದ ಹರಿಪ್ರಸಾದ್ ರೈ, ಹರೀಶ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದು, ಸಾಮಾಜಿಕ ಮಾಧ್ಯಮ ಪ್ರಭಾವಿ ತನಿಷಾ ಶೆಟ್ಟಿ ಉಪಸ್ಥಿತರಿದ್ದರು. ಈಶ ಪ್ರತಿನಿಧಿ ಶ್ರೀನಿವಾಸ ಪ್ರಾಸ್ತಾವಿಕ ಮಾತುಗಳಲ್ಲಿ ಈಶ ಗ್ರಾಮೋತ್ಸವದ ವಿವರಗಳನ್ನು ನೀಡಿದರು.