ರಾಜ್ಯದ ತಾಲೂಕು ಪಂಚಾಯಿತಿ ಚುನಾವಣೆಗೆ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಅದರಂತೆ ಉಡುಪಿ ಜಿಲ್ಲೆಯ 7 ತಾಲೂಕು ಪಂಚಾಯತುಗಳ ಒಟ್ಟು 95 ಸದಸ್ಯ ಸ್ಥಾನಗಳಲ್ಲಿ 49 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ಉಡುಪಿ ; ರಾಜ್ಯದ ತಾಲೂಕು ಪಂಚಾಯಿತಿ ಚುನಾವಣೆಗೆ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಅದರಂತೆ ಉಡುಪಿ ಜಿಲ್ಲೆಯ 7 ತಾಲೂಕು ಪಂಚಾಯತುಗಳ ಒಟ್ಟು 95 ಸದಸ್ಯ ಸ್ಥಾನಗಳಲ್ಲಿ 49 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.ಅನುಸೂಚಿತ ಜಾತಿಯ 8 ಸ್ಥಾನಗಳಲ್ಲಿ 7 ಮಹಿಳ‍ೆಯರಿಗೆ, ಅನುಸೂಚಿತ ಪಂಗಡದ 7 ಸ್ಥಾನಗಳಲ್ಲಿ ಎಲ್ಲಾ 7 ಮಹಿಳೆಯರಿಗೆ, ಹಿಂದುಳಿದ ವರ್ಗ (ಅ)ದ 23 ಸ್ಥಾನಗಳಲ್ಲಿ 3 ಮಹಿಳೆಯರಿಗೆ ಮತ್ತು ಹಿಂದುಳಿದ ವರ್ಗ (ಬಿ)ದ 6 ಸ್ಥಾನಗಳಲ್ಲಿ 4 ಮಹಿಳೆಯರಿಗೆ ಹಾಗೂ ಸಾಮಾನ್ಯ ವರ್ಗದ 51 ಸ್ಥಾನಗಳಲ್ಲಿ 28 ಮಹಿಳೆಯರಿಗೆ ಮೀಸಲಿಡಲಾಗಿದೆ.

ಹೆಬ್ರಿ ತಾಪಂ : ಒಟ್ಟು ಸ್ಥಾನಗಳು 7(4), ಅನುಸೂಚಿತ ಜಾತಿಗೆ 1(1), ಅನುಸೂಚಿತ ಪಂಗಡಕ್ಕೆ 1(1), ಹಿಂದುಳಿದ ವರ್ಗ (ಅ)ಕ್ಕೆ 1(1), ಹಿಂದುಳಿದ ವರ್ಗ (ಬಿ)ಕ್ಕೆ 0(0) ಹಾಗೂ ಸಾಮಾನ್ಯ ವರ್ಗಕ್ಕೆ 4(1) ಸ್ಥಾನಗಳನ್ನು ಮೀಸಲಿಡಲಾಗಿದೆ.ಬೈಂದೂರು ತಾಪಂ : ಒಟ್ಟು ಸ್ಥಾನಗಳು 11(6), ಅನುಸೂಚಿತ ಜಾತಿಗೆ 1(1), ಅನುಸೂಚಿತ ಪಂಗಡಕ್ಕೆ 1(1), ಹಿಂದುಳಿದ ವರ್ಗ (ಅ)ಕ್ಕೆ 2(1), ಹಿಂದುಳಿದ ವರ್ಗ (ಬಿ)ಕ್ಕೆ 1(1) ಹಾಗೂ ಸಾಮಾನ್ಯ ವರ್ಗಕ್ಕೆ 6(2) ಸ್ಥಾನಗಳನ್ನು ಮೀಸಲಿಡಲಾಗಿದೆ.

ಕಾಪು ತಾಪಂ : ಒಟ್ಟು ಸ್ಥಾನಗಳು 12(6), ಅನುಸೂಚಿತ ಜಾತಿಗೆ 1(1), ಅನುಸೂಚಿತ ಪಂಗಡಕ್ಕೆ 1(1), ಹಿಂದುಳಿದ ವರ್ಗ (ಅ)ಕ್ಕೆ 3(2), ಹಿಂದುಳಿದ ವರ್ಗ (ಬಿ)ಕ್ಕೆ 1(0) ಹಾಗೂ ಸಾಮಾನ್ಯ ವರ್ಗಕ್ಕೆ 6(2) ಸ್ಥಾನಗಳನ್ನು ಮೀಸಲಿಡಲಾಗಿದೆ.

ಉಡುಪಿ ತಾಪಂ : ಒಟ್ಟು ಸ್ಥಾನಗಳು 13(7), ಅನುಸೂಚಿತ ಜಾತಿಗೆ 1(1), ಅನುಸೂಚಿತ ಪಂಗಡಕ್ಕೆ 1(1), ಹಿಂದುಳಿದ ವರ್ಗ (ಅ)ಕ್ಕೆ 3(2), ಹಿಂದುಳಿದ ವರ್ಗ (ಬಿ)ಕ್ಕೆ 1(0) ಹಾಗೂ ಸಾಮಾನ್ಯ ವರ್ಗಕ್ಕೆ 7(3) ಸ್ಥಾನಗಳನ್ನು ಮೀಸಲಿಡಲಾಗಿದೆ.

ಕಾರ್ಕಳ ತಾಪಂ : ಒಟ್ಟು ಸ್ಥಾನಗಳು 16(8), ಅನುಸೂಚಿತ ಜಾತಿಗೆ 2(1), ಅನುಸೂಚಿತ ಪಂಗಡಕ್ಕೆ 1(1), ಹಿಂದುಳಿದ ವರ್ಗ (ಅ)ಕ್ಕೆ 4(2), ಹಿಂದುಳಿದ ವರ್ಗ (ಬಿ)ಕ್ಕೆ 1(1) ಹಾಗೂ ಸಾಮಾನ್ಯ ವರ್ಗಕ್ಕೆ 8(3) ಸ್ಥಾನಗಳನ್ನು ಮೀಸಲಿಡಲಾಗಿದೆ.

ಬ್ರಹ್ಮಾವರ ತಾಪಂ : ಒಟ್ಟು ಸ್ಥಾನಗಳು 16(8), ಅನುಸೂಚಿತ ಜಾತಿಗೆ 1(1), ಅನುಸೂಚಿತ ಪಂಗಡಕ್ಕೆ 1(1), ಹಿಂದುಳಿದ ವರ್ಗ (ಅ)ಕ್ಕೆ 4(2), ಹಿಂದುಳಿದ ವರ್ಗ (ಬಿ)ಕ್ಕೆ 1(1) ಹಾಗೂ ಸಾಮಾನ್ಯ ವರ್ಗಕ್ಕೆ 9(3) ಸ್ಥಾನಗಳನ್ನು ಮೀಸಲಿಡಲಾಗಿದೆ.ಕುಂದಾಪುರ ತಾಪಂ : ಒಟ್ಟು ಸ್ಥಾನಗಳು 20(10), ಅನುಸೂಚಿತ ಜಾತಿಗೆ 1(1), ಅನುಸೂಚಿತ ಪಂಗಡಕ್ಕೆ 1(1), ಹಿಂದುಳಿದ ವರ್ಗ (ಅ)ಕ್ಕೆ 6(3), ಹಿಂದುಳಿದ ವರ್ಗ (ಬಿ)ಕ್ಕೆ 1(1) ಹಾಗೂ ಸಾಮಾನ್ಯ ವರ್ಗಕ್ಕೆ 11(4) ಸ್ಥಾನಗಳನ್ನು ಮೀಸಲಿಡಲಾಗಿದೆ.