ಸಾರಾಂಶ
ಜನತಾದಳ (ಜಾತ್ಯತೀತ) ಪಕ್ಷದ ವತಿಯಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 64ನೇ ಹುಟ್ಟುಹಬ್ಬವನ್ನು ಇಲ್ಲಿ ವಿಶೇಷ ಮಕ್ಕಳ ಶಾಲೆ ‘ಆಶಾ ನಿಲಯ’ದಲ್ಲಿ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲಾ ಜನತಾದಳ (ಜಾತ್ಯತೀತ) ಪಕ್ಷದ ವತಿಯಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 64ನೇ ಹುಟ್ಟುಹಬ್ಬವನ್ನು ಇಲ್ಲಿ ವಿಶೇಷ ಮಕ್ಕಳ ಶಾಲೆ ‘ಆಶಾ ನಿಲಯ’ದಲ್ಲಿ ಆಚರಿಸಲಾಯಿತು.ಕೇಕ್ ಕತ್ತರಿಸಿ ವಿಶೇಷ ಮಕ್ಕಳಿಗೆ ತಿನ್ನಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಕುಮಾರಸ್ವಾಮಿ ಅವರು ಈ ರಾಜ್ಯ ಕಂಡಂತಹ ಅಪರೂಪದ ರಾಜಕಾರಣಿ. ಗ್ರಾಮ ವಾಸ್ತವ್ಯ, ಜನತಾ ದರ್ಶನ, ರೈತರ ಸಾಲ ಮನ್ನಾ, ವಿಶೇಷ ಶಾಲಾ ಮಕ್ಕಳಿಗೆ ಕ್ಷೀರಬಾಗ್ಯ ಇತ್ಯಾದಿಗಳ ಮೂಲಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಚಿಂತನೆ ಮಾಡಿದ್ದರು ಎಂದರು.
ಈ ಸಂದರ್ಭ ಪಕ್ಷದ ನಾಯಕರಾದ ವಾಸುದೇವ ರಾವ್, ಶಾಲಿನಿ ಶೆಟ್ಟಿ ಕೆಂಚನೂರು, ಜಯರಾಮ ಆಚಾರ್ಯ, ಜಯಕುಮಾರ್ ಪರ್ಕಳ, ಇಕ್ಬಾಲ್ ಅತ್ರಾಡಿ, ಶ್ರೀಕಾಂತ್ ಹೆಬ್ರಿ, ಸಂಜಯ್ ಕುಮಾರ್, ರಾಮರಾವ್, ವಿಶಾಲಾಕ್ಷಿ ಶೆಟ್ಟಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಇದೇ ಸಂದರ್ಭ ವಿಶೇಷ ಮಕ್ಕಳಿಗೆ, ಶಾಲಾ ಸಿಬ್ಬಂದಿಗೆ ಹಾಗೂ ಇನ್ನಿತರರಿಗೆ ಊಟೋಪಚಾರ ವ್ಯವಸ್ಥೆಯನ್ನು ಮಾಡಲಾಗಿತ್ತು.