ಸಾರಾಂಶ
ಉಡುಪಿ: ಇಂಡಿಯಾ ಫಿಸಿಷಿಯನ್ಸ್ ಅಸೋಸಿಯೇಷನ್ (ಎಪಿಐ) ಇದರ ಉಡುಪಿ-ಮಣಿಪಾಲ್ ಚಾಪ್ಟರ್ ವತಿಯಿಂದ ಸಿಎಂಎ (ನಿರಂತರ ವೈದ್ಯಕೀಯ ಶಿಕ್ಷಣ) ಕಾರ್ಯಕ್ರಮ ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವೈದ್ಯರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಗರದ ಆದರ್ಶ ಆಸ್ಪತ್ರೆಯ ಡಾ. ಸ್ವೀಟ್‌ಲಿನ್ ಶಿನು ಅವರು ‘ನಿದ್ರಾ ಸಮಸ್ಯೆಯಂತೆ ಕಾಣುವ ವ್ಯವಸ್ಥಾತ್ಮಕ ರೋಗ’ ಮತ್ತು ಮಂಗಳೂರಿನ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡಾ. ಗಿರಿಧರ್ ಬಿ. ಎಚ್. ಅವರು ‘ಬ್ರಾಂಕೋಸ್ಕೋಪ್ ಮುನ್ನೋಟ’ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.ಕಾರ್ಯಕ್ರಮವನ್ನು ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡಾ. ಮನು ಮೋಹನ್ ಕೆ. ಅವರು ನಿರ್ವಹಿಸಿದರು. ಈ ಸಿಎಂಇ ಕಾರ್ಯಕ್ರಮಗಳು ವೈದ್ಯರ ವೈದ್ಯಕೀಯ ಜ್ಞಾನವನ್ನು ವೃದ್ಧಿಸಲು ಮತ್ತು ವೈದ್ಯರನ್ನು ನವೀಕರಿತವಾಗಿರಿಸಲು ಸಹಾಯ ಮಾಡುತ್ತವೆ ಎಂದು ಹೇಳಿದರು.ಎಪಿಎ ಅಧ್ಯಕ್ಷ ಡಾ. ಸುರೇಶ್ ಹೆಗ್ಡೆ ಮತ್ತು ಸಂಘದ ಪ್ರಮುಖರಾದ ಡಾ. ಅನಂತ್ ಶೆಣೈ ಮತ್ತು ಡಾ. ಸುದೀಪ್ ಶೆಟ್ಟಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಸಂವಾದಾತ್ಮಕ ಚರ್ಚೆ ನಡೆಯಿತು.