ಪರ್ಯಾಯ ಶಿರೂರು ಮಠ ಉಡುಪಿ ಮತ್ತು ಮಂಗಳೂರು ಕಥಾಬಿಂದು ಪ್ರಕಾಶನ ಆಶ್ರಯದಲ್ಲಿ ಅರ್ಥಪೂರ್ಣವಾದ ಕಥಾಬಿಂದು ಸಾಹಿತ್ಯ ಸಮ್ಮೇಳನ ರಾಜಾಂಗಣದಲ್ಲಿ ಜರುಗಿತು.
ಉಡುಪಿ : ಪರ್ಯಾಯ ಶಿರೂರು ಮಠ ಉಡುಪಿ ಮತ್ತು ಮಂಗಳೂರು ಕಥಾಬಿಂದು ಪ್ರಕಾಶನ ಆಶ್ರಯದಲ್ಲಿ ಅರ್ಥಪೂರ್ಣವಾದ ಕಥಾಬಿಂದು ಸಾಹಿತ್ಯ ಸಮ್ಮೇಳನ ರಾಜಾಂಗಣದಲ್ಲಿ ಜರುಗಿತು.
ಗೀತಾ ಮಂದಿರ ಉಡುಪಿಯ ಸಂಚಾಲಕರಾದ ವಿದ್ವಾನ್ ಕೆ.ವಿ. ರಮಣಾಚಾರ್ಯರು ಅಧ್ಯಕ್ಷತೆ ವಹಿಸಿದರು. ಶ್ರೀಮಠದ ವತಿಯಿಂದ ಬಾಲಕೃಷ್ಣ ಭಾಗವತ್ ಭಾಗವಹಿಸಿದ್ದರು.ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಬಿ ಕೆ ಮಾಧಾವರಾವ್ ತಮ್ಮ ಚಿತ್ರಕಲಾ ಸಾಧನೆಗೆ ರಾಜ್ಯಮಟ್ಟದ ಕಲಾ ತಿಲಕ ಪ್ರಶಸ್ತಿಗೆ ಭಾಜನರಾದರು. ಗಾಯನ ಕ್ಷೇತ್ರದಲ್ಲಿ ಮೇರು ಗಾಯಕಿ ಪುಷ್ಪ ಆರಾಧ್ಯ ಶ್ರೀ ಕೃಷ್ಣಾನುಗ್ರಹ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.ಇದೇ ಸಂದರ್ಭದಲ್ಲಿ ಶಿವಾನಂದ ಸುರವಸೆ (ಸಂಗೀತ), ಚೇರ್ಕಾಡಿ ಸಚ್ಚಿದಾನಂದಶೆಟ್ಟಿ (ಸಾಹಿತ್ಯ), ಡಾ. ಬಾಲಕೃಷ್ಣ ಎಸ್ ಮುದ್ದೋಡಿ(ತಾಂತ್ರಿಕ), ಗಣೇಶ್ ಕುಮಾರ್ (ಕಲಾ ಸಾಧನೆ), ಸಂಧ್ಯಾ ರಾಣಿ ಟೀಚರ್ (ಕನ್ನಡ ಪೋಷಣೆ), ಕೆ ಲಕ್ಷ್ಮಿ (ಸಾಹಿತ್ಯ ಮತ್ತು ನಾಣ್ಯ ಸಂಗ್ರಹ), ಶೋಭ ಹರಿಪ್ರಸಾದ್ (ಇವರು ಶ್ರೀ ಕೃಷ್ಣಾನುಗ್ರಹ ರಾಜ್ಯ ಪ್ರಶಸ್ತಿ ಸ್ವೀಕರಿಸಿದರು ಸಾಹಿತ್ಯ), ಕುಸುಮಾ ಹತ್ಯಾಳ (ಸಾಹಿತ್ಯ), ಸುಮಕಿರಣ್ (ಸಾಹಿತ್ಯ), ಅಯನ ವಿ ರಮಣ (ಬಹುಮುಖ ಪ್ರತಿಭೆ), ವಂಶಿ ವೈ ಕೋಟ್ಯಾನ್ (ನೃತ್ಯ) ಲತಾ ಕೆ. ಎಸ್ ಹೆಗಡೆ ಸಾಹಿತ್ಯ ನೇರಂಬಳ್ಳಿ ಸುರೇಶ್ ಶ್ಯಾಮ್ ರಾವ್ ಕುವೈತ್ ಅವರು ಶ್ರೀ ಕೃಷ್ಣಾನುಗ್ರಹ ರಾಜ್ಯ ಪ್ರಶಸ್ತಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತದ ಸಾಹಿತಿಗಳ 20 ಕೃತಿಗಳು ಲೋಕಾರ್ಪಣೆಗೊಂಡುವು. ಒಡಲಿನ ಬೆಂಕಿ (ಕವನ ಸಂಗ್ರಹ), ಪುಷ್ಪಲತಾ ಅವರ ಪರಂಪರೆ ಮೆರ ಮತ್ತು ರಕ್ತದ ಹೊಳೆ (2 ಸಾಹಿತ್ಯ ಕೃತಿಗಳು), ಡಾ ಶಶಿಕಿರಣ ಶೆಟ್ಟಿ(ಬದುಕು ಬದಲಿಸುವ ಕಥೆಗಳು), ವೀಣಾ ಪ್ರಭಾಕರ್ ಕಡೆಕಾರ್ ಅವರ ಭಾವಪ್ರಭ (ಕವನ ಸಂಕಲನ), ಸುಮನ್ ರಾವ್ ಅವರ ಗಾಜಿನ ಮನೆ (ಕಾದಂಬರಿ), ಡಾ ರೇಖಾ ಉದಯ ಅವರ ತೆರೆ ತಟ್ಟಿದ ತೀರದ ತಿರುವಿನಲ್ಲಿ (ಗಜಲ್ ಸಂಕಲನ), ಶೋಭಾ ಶಂಕರಾನಂದ ಅವರ ಕಣ್ಣಳತೆಗೆ ಕಂಡದ್ದು (ಸಾಹಿತ್ಯ ಕೃತಿ), ಚೆಂಪಿ ದಿನೇಶ್ ಆಚಾರ್ಯ ಅವರ ಚೆಂಪಿ ಡೈರೀಸ್, ಪುಷ್ಪಾಪ್ರಸಾದ್ ಉಡುಪಿ ಅವರ ಸುಖ ಧರೆ ( ಕವನ ಸಂಕಲನ), ಸರಿತಾ ಅಂಬರೀಶ್ ಅವರ ಸ್ತ್ರೀ ಮಾರ್ಧನಿ (ಕವನಸಂಗ್ರಹ), ಶಾಲಿನಿ ಕೆಮ್ಮಣ್ಣು ಅವರ ಭಾವ ಭಾಮಿನಿ (ಕವನ ಸಂಕಲನ), ಕುಸುಮ ಹತ್ಯಾಳ ಅವರ ಲೋಕೋದ್ಧಾರಕ ಸಂತ ಶ್ರೀ ನಾರಾಯಣ ಗುರು (ವ್ಯಕ್ತಿ ಚಿತ್ರ) ಮತ್ತು ಸವಿಜೇನ ಕವನಗಳು (ಕವನ ಸಂಗ್ರಹ), ಪ್ರೀತಮ್ ಮಿಜಾರ್ ಅವರ ಭಾವಯಾನದ ಹೊತ್ತಗೆ(ಕವನ ಸಂಕಲನ), ಖಾಕಿ ಕವಿ ಮಂಜುನಾಥ್ ಅವರ ಖಾಕಿ ಕವಿಯ ಕವಿತೆ ಕಾರಂಜಿ ಮತ್ತು ಕಾವ್ಯಧಾರೆ (ಕವನ ಸಂಕಲನ), ಕವಿ ನೇರಂಬಳ್ಳಿ ಸುರೇಶ್ ಶ್ಯಾಮ್ ರಾವ್ ಕುವೈತ್ ಅವರ ಕವಿಸುರಾದಿ (ಕವನ ಸಂಕಲನ ) ಲಕ್ಷ್ಮೀ ವಿ ಭಟ್ ಅವರ ಬಿಂದಿಗೆಯ ಬಿಂದು (ಕವನ ಸಂಕಲನ) ಈ ಕೃತಿಗಳು ಲೋಕಾರ್ಪಣಗೊಂಡವುದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ , ಪ್ರದೀಪ್ ಕುಮಾರ್ ಕಲ್ಕೂರ, ಕೆ ವಿ ರಮಣಾಚಾರ್ಯರು, ಗೀತಾ ಮಂದಿರ ಉಡುಪಿ, ಸಮ್ಮೇಳನ ಅಧ್ಯಕ್ಷ ಭುವನಾಭಿರಾಮ ಉಡುಪ (ಯುಗಪುರುಷ ಮಾಸಪತ್ರಿಕೆಯ ಸಂಪಾದಕರು), ಕನ್ನಡ ಭವನ ಖ್ಯಾತಿಯ ಡಾ. ವಾಮನರಾವ್ ಬೇಕಲ್ , ಪತ್ರಕರ್ತರು ಮತ್ತು ನಿವೃತ್ತ ಶಿಕ್ಷಕರು ಜಯಾನಂದ ಪೆರಾಜೆ, ಸಾಹಿತ್ಯ ಪ್ರವರ್ತಕರು ಡಾ. ಕೊಳ್ಚಪ್ಪೆ ಗೋವಿಂದ ಭಟ್, ಕಾದಂಬರಿಕಾರ ಮತ್ತು ಪ್ರಕಾಶಕರು ಪಿವಿ ಪ್ರದೀಪ್ ಕುಮಾರ್ ಹಾಜರಿದ್ದರು. ಪುಷ್ಪ ಪ್ರಸಾದ್, ಶೋಭ ದಿನೇಶ್, ರೇಖಾ ಸುದೇಶ ರಾವ್, ದಿವ್ಯಮಯ್ಯ ಕಾರ್ಯಕ್ರಮ ನಿರೂಪಿಸಿದರು. ವಾಸಂತಿ ಅಂಬಲಪಾಡಿ ಅಧ್ಯಕ್ಷತೆಯಲ್ಲಿ ನಡೆದ ಕಾವ್ಯಗೋಷ್ಠಿಯಲ್ಲಿ ಸುಮಾರು 30 ಕವಿಗಳು ಭಾಗವಹಿಸಿದರು. ಡಾ. ಶಾಂತ ಪುತ್ತೂರು ಅತಿಥಿಗಳಾಗಿದ್ದರು.