ಉಡುಪಿ: ಲೊಂಬಾರ್ಡ್ ಮ್ಯಾರಾಥಾನ್‌ ಪ್ರೊಮೋ ರನ್‌ ಸಂಪನ್ನ

| Published : Nov 25 2024, 01:04 AM IST

ಉಡುಪಿ: ಲೊಂಬಾರ್ಡ್ ಮ್ಯಾರಾಥಾನ್‌ ಪ್ರೊಮೋ ರನ್‌ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಲೊಂಬಾರ್ಡ್ ಹಾಸ್ಪಿಟಲ್‌ನ ಶತಮಾನೋತ್ಸವದ ಅಂಗವಾಗಿ ಉಡುಪಿ ರನ್ನರ್ಸ್ ಕ್ಲಬ್ ಸಹಯೋಗದಲ್ಲಿ ಡಿ.1ರಂದು ನಡೆಯುವ ಹಾಪ್‌ ಮ್ಯಾರಾಥಾನ್‌ಗೆ ಪೂರ್ವಭಾವಿಯಾಗಿ ಭಾನುವಾರ ಪ್ರೊಮೋ ರನ್‌ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಲೊಂಬಾರ್ಡ್ ಹಾಸ್ಪಿಟಲ್‌ನ ಶತಮಾನೋತ್ಸವದ ಅಂಗವಾಗಿ ಉಡುಪಿ ರನ್ನರ್ಸ್ ಕ್ಲಬ್ ಸಹಯೋಗದಲ್ಲಿ ಡಿ.1ರಂದು ನಡೆಯುವ ಹಾಪ್‌ ಮ್ಯಾರಾಥಾನ್‌ಗೆ ಪೂರ್ವಭಾವಿಯಾಗಿ ಭಾನುವಾರ ಪ್ರೊಮೋ ರನ್‌ ಆಯೋಜಿಸಲಾಗಿತ್ತು.

ಆಸ್ಪತ್ರೆಯ ವಠಾರದಲ್ಲಿ ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್ ಜತನ್ನ, ಧ್ವಜ ಬೀಸಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಓಟವು ಕೋರ್ಟ್‌ ರಸ್ತೆ, ಕೆ.ಎಂ. ಮಾರ್ಗದ ಮೂಲಕ ನಗರದ ಕ್ಲಾಕ್‌ ಟವರ್ ಸುತ್ತಿ ಮರಳಿ ಆಸ್ಪತ್ರೆಯಲ್ಲಿ ಸಮಾಪನಗೊಂಡಿತು. ಕಾರ್ಯಕ್ರಮದಲ್ಲಿ ರನ್ನರ್ಸ್ ಕ್ಲಬ್ ಅಧ್ಯಕ್ಷ ತಿಲಕ್ ಚಂದ್ರ ಹಾಗೂ ತಂಡದವರು ಭಾಗವಹಿಸಿದ್ದರು. ಇಲ್ಲಿನ ಆಶಾ ನಿಲಯದ ವಿಶೇಷ ಮಕ್ಕಳು ಬ್ಯಾಂಡ್‌ ನುಡಿಸಿ ಮನೋರಂಜನೆ ನೀಡಿದರು. * 2000 ಓಟಗಾರರ ನಿರೀಕ್ಷೆಸಾರ್ವಜನಿಕರಿಗಾಗಿ ಡಿ.1ರಂದು ನಡೆಯುವ ರಾಷ್ಟ್ರೀಯ ಮಟ್ಟದ ಈ 21 ಕಿ.ಮೀ. ಹಾಫ್‌ ಮ್ಯಾರಾಥಾನ್‌ ಓಟವು ಮಲ್ಪೆಯ ಸಿ ವಾಕ್‌ನಿಂದ ಆರಂಭವಾಗಲಿದೆ. ಇದರ ಜೊತೆಗೆ 10 ಕಿ.ಮೀ., 5 ಕಿ.ಮೀ. ಮತ್ತು ಶಾಲಾ ವಿದ್ಯಾರ್ಥಿಗಳಿಗಾಗಿ 3 ಕಿ.ಮೀ., 5 ಕಿ.ಮೀ. ಮತ್ತು 3 ಕಿ.ಮೀ. ಮೋಜಿನ ಓಟಗಳನ್ನು ಆಯೋಜಿಸಲಾಗುತ್ತಿದೆ.ವಿವಿಧ ವಯೋಮಾನದಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ವಿಶೇಷ ನಗದು ಬಹುಮಾನಗಳನ್ನು ನೀಡಲಾಗುತ್ತದೆ ದೇಶದಾದ್ಯಂತದಿಂದ ಸುಮಾರು 2000 ಓಟಗಾರರು ಈ ಮ್ಯಾರಥಾನ್ ಓಟಕ್ಕೆ ಬರುವ ನಿರೀಕ್ಷೆ ಇದೆ ಎಂದು ಲೊಂಬಾರ್ಡ್ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.